Advertisement

ಗೋವಾ ಖನಿಜ ಡಂಪ್ ನೀತಿಯಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟ: ಕ್ಲಾವುಡ್ ಅಲ್ವಾರೀಸ್

05:35 PM Jan 01, 2022 | Team Udayavani |

ಪಣಜಿ: ಇತ್ತೀಚೆಗಷ್ಟೇ ಗೋವಾ ರಾಜ್ಯ ಸರ್ಕಾರ ಪ್ರಕಟಿಸಿರುವ ಗೋವಾ ಖನಿಜ ಡಂಪ್ ನೀತಿ ಸಂಪೂರ್ಣ ಅಕ್ರಮವಾಗಿದ್ದು, ಇದು ಸರ್ಕಾರದ ಬೊಕ್ಕಸವನ್ನು ಲೂಟಿ ಮಾಡುವುದಾಗಿದೆ. ಈ ಕುರಿತ  ಪ್ರಕರಣ ಸುಪ್ರಿಂ ಕೋರ್ಟ್ ನಲ್ಲಿದೆ. ಇದರ ವಿರುದ್ಧ ಪ್ರಬಲ ಹೋರಾಟ ನಡೆಸಬೇಕು ಎಂದು ಗೋವಾ ಫೌಂಡೇಶನ್ ನಿರ್ದೇಶಕ ಕ್ಲಾವುಡ್ ಅಲ್ವಾರೀಸ್ ಕರೆ ನೀಡಿದ್ದಾರೆ.

Advertisement

ಪಣಜಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋವಾ ವಿಧಾನಸಭೆ ಚುನಾವಣೆ 2022 ರ ಹಿನ್ನೆಲೆಯಲ್ಲಿ ಡಂಪ್ ನೀತಿ ಕಾಯ್ದೆಯಲ್ಲಿ ಬದಲಾವಣೆ ಮಾಡುವ ಮೂಲಕ ರಾಜ್ಯ ಸರ್ಕಾರ ಹೊಸ ನೀತಿಯನ್ನು ಪ್ರಕಟಿಸಿದೆ. ಹೊಸ ನೀತಿಯ ಪ್ರಕಾರ ರಾಜ್ಯದ ಖನಿಜ ವಲಯದ ಹೊರಗೆ ಜಮಾವಣೆ ಮಾಡಲಾಗಿರುವ ಅದಿರಿಗೆ ದಂಡ ಮತ್ತು ರಾಯಧನವನ್ನು ಪಾವತಿಸಿ ಖನಿಜ ಡಂಪ್ ಮಾಡುವ ಅವಕಾಶ ಮಾಡಿಕೊಟ್ಟಿದ್ದಾರೆ. ಆದರೆ ಈ ಕುರಿತ ಪ್ರಕರಣವು ಸರ್ವೋಚ್ಛ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ ಎಂದು ಕ್ಲಾವುಡ್ ಅಲ್ವಾರೀಸ್ ನುಡಿದರು.

ಸರ್ಕಾರ ಕೇವಲ 230 ಕೋಟಿ ರೂಗಳ 25 ದಶಲಕ್ಷ ಟನ್ ಖನಿಜ ಮಾರಾಟ ಮಾಡುವುದಾಗಿ ಹೇಳುತ್ತಿದ್ದು, ಆದರೆ ಇದರ ನಿಜವಾದ ಮೌಲ್ಯ ಸಾವಿರಾರು ಕೋಟಿ ರೂಗಳಾಗಿದೆ. ಇದು ಸರ್ಕಾರದ ಬೊಕ್ಕಸದ ಲೂಟಿಯಾಗಿದೆ. ಇದು ದೊಡ್ಡ ಖನಿಜ ಹಗರಣವಾಗಿದೆ ಎಂದು ಕ್ಲಾವುಡ್ ಅಲ್ವಾರಿಸ್ ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next