Advertisement

ಗಣಿಗಾರಿಕೆ ನಿಲ್ಲಿಸಲು ಸಾಧ್ಯವಿಲ್ಲ, ಅಕ್ರಮವಾಗಿದ್ದರೆ ಅರ್ಜಿ ಕೊಟ್ಟು ಸಕ್ರಮ ಮಾಡಿಸಿ: BSY

11:53 AM Jan 23, 2021 | Team Udayavani |

ಮೈಸೂರು: ಗಣಿಗಾರಿಕೆ ನಿಲ್ಲಿಸಲು ಸಾಧ್ಯವಿಲ್ಲ. ಅಕ್ರಮವಾಗಿದ್ದರೆ ಅರ್ಜಿ ಕೊಟ್ಟು ಸಕ್ರಮ ಮಾಡಿಸಿಕೊಳ್ಳಿ ಎಂದು ಮೈಸೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿಕೆ‌ ನಿಡಿದ್ದಾರೆ.

Advertisement

ರಾಜ್ಯ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿ, ಕಾಮಗಾರಿಗಳು ಅಪಾರ ಪ್ರಮಾಣದಲ್ಲಿ ನಡೆಯುತ್ತಿವೆ.  ಹೀಗಾಗಿ ಕಲ್ಲು ಗಣಿಗಾರಿಕೆ‌ ಅಗತ್ಯ. ಆದರೆ ಅನುಮತಿ ಪಡೆದು ಗಣಿಗಾರಿಕೆ ಮಾಡಿಲು ಅಭ್ಯಂತರ ಇಲ್ಲ. ಆದರೆ ಅಕ್ರಮವಾಗಿ ಗಣಿಗಾರಿಕೆ ನಡೆಸಲು ಅವಕಾಶ ನೀಡುವುದಿಲ್ಲ. ಈ ಸಂಬಂಧ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ  ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಹುಣಸೋಡು ದುರಂತ: ಸಿಎಂ ಸ್ಥಳ ಪರಿಶೀಲನೆ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಎಂದ ಬಿಎಸ್ ವೈ

ಶಿವಮೊಗ್ಗದಲ್ಲಿ ಸ್ಪೋಟದಿಂದ ಮೃತಪಟ್ಟವರಿಗೆ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದೇವೆ. ಮನೆಗಳಿಗೂ ಹಾನಿಯಾಗಿದೆ ಅಂತ ಗೊತ್ತಾಗಿದೆ‌. ನಾನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ.

ಕೋವಿಡ್ ಕಾರಣದಿಂದ ಸಂಪನ್ಮೂಲ ಕೊರತೆ ಉಂಟಾಗಿದೆ. ಹೀಗಾಗಿ ಸಹಜವಾಗಿಯೇ ಬಜೆಟ್ ಗಾತ್ರ ಕಳೆದ ಬಾರಿಗಿಂತ ಕಡಿಮೆ ಇರಲಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು,

Advertisement

ಇದನ್ನೂ ಓದಿ:  ಸ್ಪೋಟಕ ಸಾಗಿಸುವವರನ್ನು ಬಿಟ್ಟು, ಮರಳು ತುಂಬಿದ ಗಾಡಿ ಮಾತ್ರ ವಶಪಡೆಯುತ್ತಾರೆ: ಖಾದರ್ ಆಕ್ರೋಶ

Advertisement

Udayavani is now on Telegram. Click here to join our channel and stay updated with the latest news.

Next