Advertisement

ಮಿನಿಯೇ, ನನ್ನ ಅರಗಿಣಿಯೇ…

06:56 PM May 21, 2019 | mahesh |

ಸಮ್ಮರ್‌ ಫ್ರೆಂಡ್ಲಿ ಉಡುಗೆಗಳಲ್ಲಿ ಮಿನಿ ಸ್ಕರ್ಟ್‌ ಕೂಡಾ ಒಂದು. ದೇಹಕ್ಕೂ ತಂಪು ಮತ್ತು ಕಣ್ಣಿಗೂ ತಂಪು ನೀಡುವುದರಿಂದ ಹೆಣ್ಮಕ್ಕಳು ಈ ದಿರಿಸಿಗೆ ಮಾರು ಹೋಗುತ್ತಿದ್ದಾರೆ.

Advertisement

ಫ್ಯಾಷನ್‌ಲೋಕದಲ್ಲಿ ಟ್ರೆಂಡ್‌ಗಳು ಆಗಾಗ ಮರುಕಳಿಸುತ್ತಾ ಇರುತ್ತವೆ. ಇದೀಗ ತಿರುಗಿ ಬಂದ ಹಳೆಯ ಫ್ಯಾಷನ್‌ ಮಿನಿ ಸ್ಕರ್ಟ್‌. ಹಳೆಯ ಕಪ್ಪು-ಬಿಳುಪು ಸಿನಿಮಾದಿಂದ ಇಂದಿನ ಕಾಲದ ಸಿನಿಮಾವರೆಗೆ ನಟಿಯರು ಮಿನಿ ಸ್ಕರ್ಟ್‌ ತೊಟ್ಟಿರುವುದು ನಾವು ನೋಡಿದ್ದೇವೆ. ಹಾಗಿದ್ದಾಗ ಟ್ರೆಂಡ್‌ ಆಗಲು ಈ ಮಿನಿ ಸ್ಕರ್ಟ್‌ನಲ್ಲಿ ಅದೇನು ವಿಶೇಷ ಇದೆ ಎಂದು ನೀವು ಯೋಚಿಸಬಹುದು. ಬೇಸಿಗೆಯಲ್ಲಿ ಆರಾಮ ನೀಡುವ ಉಡುಗೆಗಳಲ್ಲಿ ಇದೂ ಒಂದು. ಅಲ್ಲದೆ ಇತ್ತೀಚಿಗೆ ತೆರೆಯ ಮೇಲೆ ಬಂದ ಚಿತ್ರಗಳಲ್ಲಿ ಕಾಣಿಸಿಕೊಂಡ ನಟಿಯರು ಮಿನಿ ಸ್ಕರ್ಟ್‌ ತೊಟ್ಟಿದ್ದೇ ಈ ಉಡುಗೆ ಮತ್ತೇ ಟ್ರೆಂಡ್‌ ಆಗಲು ಕಾರಣ ಎಂದರೂ ತಪ್ಪಾಗಲಾರದು.

ಸೆಲಬ್ರಿಟಿ ಪ್ರಿಯ
ಸುಡು ಬಿಸಿಲಿನ ಈ ಬೇಗೆಯಲಿ ಉಟ್ಟ ಬಟ್ಟೆ ಮೈಗಂಟಿದರೆ ಅದಕ್ಕಿಂತ ದೊಡ್ಡ ಕಿರಿಕಿರಿ ಬೇರಿಲ್ಲ. ಆದ್ದರಿಂದ ದೇಹಕ್ಕೆ ತಂಪು, ಕಣ್ಣಿಗೂ ತಂಪು ನೀಡುವುದರಿಂದ ಹೆಣ್ಮಕ್ಕಳು ಮಿನಿ ಸ್ಕರ್ಟ್‌ಗೆ ಮಾರು ಹೋಗುತ್ತಿದ್ದಾರೆ. ಇಂಥ ಸಮ್ಮರ್‌ ಫ್ರೆಂಡ್ಲಿ ಉಡುಗೆಗಳಲ್ಲಿ ಒಂದು, ಎಲ್ಲರ ನೆಚ್ಚಿನ ಮಿನಿ ಸ್ಕರ್ಟ್‌. ಹಾಲಿವುಡ್‌ ನಟಿಯರು, ಪಾಪ್‌ ಗಾಯಕಿಯರು, ರೂಪದರ್ಶಿಗಳು ಹಾಗು ಕ್ರೀಡಾಪಟುಗಳ ಅಚ್ಚುಮೆಚ್ಚಿನ ಆಯ್ಕೆ ಆಗಿದೆ ಈ ಮಿನಿ ಸ್ಕರ್ಟ್‌. ಹಿಂದಿ ಚಿತ್ರನಟಿ ಶ್ರೀದೇವಿ ಪುತ್ರಿಯರಾದ ನಟಿ ಜಾಹ್ನವಿ ಮತ್ತವಳ ತಂಗಿ ಖುಷಿ ಕಪೂರ್‌, ದೀಪಿಕಾ ಪಡುಕೋಣೆ, ಪೂಜಾ ಹೆಗ್ಡೆ , ಕತ್ರಿನಾ ಕೈಫ್, ತಾರಾ ಸುತಾರಿಯ, ಶ್ರದ್ಧಾ ಕಪೂರ್‌, ಅನನ್ಯ ಪಾಂಡೆ, ಹೀಗೆ ಅನೇಕ ನಟಿಯರು ಬೇಸಿಗೆಯಲ್ಲಿ ಸ್ಕರ್ಟ್‌ ತೊಟ್ಟು ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಪ್ರದರ್ಶನ, ಸಿನಿಮಾ ಪ್ರಮೋಷನ್‌, ಏರ್‌ಪೋರ್ಟ್‌ ಫ್ಯಾಷನ್‌ ಹೆಸರಿನಲ್ಲಿ ನಟಿಯರು ಸ್ಕರ್ಟ್‌ ಅನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ನಿಲ್ಲು ನೀ ಮಿನಿ ಸ್ಕರ್ಟ್‌
ಬಹುತೇಕ ಎಲ್ಲ ಸ್ಕರ್ಟ್‌ಗಳ ಜೊತೆ ಅಟ್ಯಾಚ್‌ ಆಗಿರುವ ಶಾರ್ಟ್ಸ್ ಆಯ್ಕೆ ಕೂಡ ಇದೆ. ಇಲ್ಲವಾದರೆ ಪ್ರತ್ಯೇಕವಾಗಿ ಶಾರ್ಟ್ಸ್ ಕೊಂಡುಕೊಂಡು ಮಿನಿ ಸ್ಕರ್ಟ್‌ ಜೊತೆ ತೊಡಬಹುದು. ಆದರೆ ನೆನಪಿರಲಿ. ತೊಡುವ ಶಾರ್ಟ್ಸ್, ಮಿನಿ ಸ್ಕರ್ಟ್‌ನ ಬಣ್ಣದ್ದೇ ಆಗಿರಬೇಕು. ಇಲ್ಲವಾದಲ್ಲಿ ಅದು ಒಳ ಉಡುಪಿನಂತೆ ಕಾಣುವ ಅಪಾಯವಿರುತ್ತದೆ! ಬಟನ್‌ (ಗುಂಡಿ), ಜಿಪ್‌, ವೆಲೊ, ಲಾಡಿ ಅಥವಾ ದಾರ, ಬೆಲ್ಟ್ (ಸೊಂಟ ಪಟ್ಟಿ), ಬಕಲ…, ಎಲಾಸ್ಟಿಕ್‌, ಇತ್ಯಾದಿ ಇರುವ ಕಾರಣ ಮಿನಿ ಸ್ಕರ್ಟ್‌ ಭದ್ರವಾಗಿ ಸೊಂಟದಲ್ಲಿ ನಿಲ್ಲುತ್ತದೆ. ಇವಿಷ್ಟು ಅಲ್ಲದೆ ಸಸ್ಪೆಂಡರ್ಸ್‌ ಆಯ್ಕೆ ಕೂಡ ಲಭ್ಯ ಇದೆ.

ಏನಿದೆ ತೊಡೋಕೆ?
ಮಿನಿ ಸ್ಕರ್ಟ್‌ನಲ್ಲಿ ಮುಗಿಯದಷ್ಟು ವೆರೈಟಿಗಳಿವೆ. ಹೇಳುತ್ತಾ ಹೋದರೆ ಹೋಟೆಲ್‌ ಮಾಣಿಯ ಧಾಟಿಯಲ್ಲಿ… ಡೆನಿಮ್‌ ಮಿನಿ ಸ್ಕರ್ಟ್‌, ಫ್ರಿಲ್‌ ಮಿನಿ ಸ್ಕರ್ಟ್‌, ಮೆಟಾಲಿಕ್‌ ಪ್ರಿಂಟ್‌ ಮಿನಿ ಸರ್ಟ್‌, ಅನಿಮಲ್‌ ಪ್ರಿಂಟ್‌ ಮಿನಿ ಸ್ಕರ್ಟ್‌, ಚೆಕ್ಸ್ ಮಿನಿ ಸ್ಕರ್ಟ್‌, ಸೈಡ್‌ ಸ್ಲಿಟ್‌ ಮಿನಿ ಸ್ಕರ್ಟ್‌, ಬ್ಯಾಲರೀನಾ ಮಿನಿ ಸ್ಕರ್ಟ್‌, ಸ್ಪೋರ್ಟ್ಸ್ ಮಿನಿ ಸ್ಕರ್ಟ್‌, ನಿಯಾನ್‌ ಬಣ್ಣದ ಮಿನಿ ಸ್ಕರ್ಟ್‌, ಲೆದರ್‌ (ಚರ್ಮ) ಮಿನಿ ಸ್ಕರ್ಟ್‌, ಸ್ಟ್ರೈಫ್ಡ್ ಮಿನಿ ಸ್ಕರ್ಟ್‌, ಕಾರ್ಡುರಾಯ್‌ ಮಿನಿ ಸ್ಕರ್ಟ್‌, ಬಟರ್‌ಫ್ಲೈ ಪ್ರಿಂಟ್‌ ಮಿನಿ ಸ್ಕರ್ಟ್‌, ಪ್ರಿಂಟ್‌ ಮಿನಿ ಸ್ಕರ್ಟ್‌, ರೇನ್‌ ಬೋ ಮಿನಿ ಸ್ಕರ್ಟ್‌, ರಿಫ್ಡ್ ಮಿನಿ ಸ್ಕರ್ಟ್‌… ಹೀಗೆ ಹತ್ತು ಹಲವು ಬಗೆ ಮಾರುಕಟ್ಟೆಯಲ್ಲಿವೆ.

Advertisement

– ಅದಿತಿಮಾನಸ ಟಿ. ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next