Advertisement

ಆಸಂಗಿ ಬೆಟ್ಟದಲ್ಲೊಂದು “ಮಿನಿ ಶಬರಿಮಲೆ’

03:34 PM Jan 12, 2021 | Team Udayavani |

ಬನಹಟ್ಟಿ: ಪ್ರತಿ ವರ್ಷ ಸಂಕ್ರಮಣ ಸಂದರ್ಭದಲ್ಲಿ ಅಯ್ಯಪ್ಪ ಮಾಲಾಧಾರಿಗಳು ಶಬರಿಮಲೆಗೆ ಹೋಗಿ ಇರುಮಡಿ ಹೊತ್ತು ದರ್ಶನ ಪಡೆದು ದೀಪ ಕಂಡು ಪುನೀತರಾಗುತ್ತಾರೆ.

Advertisement

ಕೇರಳದ ಶಬರಿಮಲೆಯಲ್ಲಿ ಕೋವಿಡ್‌ -19ನಿಂದ ಮುಕ್ತ ಅವಕಾಶ ದೊರೆಯದ ಹಿನ್ನೆಲೆಯಲ್ಲಿ ಈ ಭಾಗದ ಭಕ್ತರು ಕೂಡಿಕೊಂಡು ಆಸಂಗಿ ಗ್ರಾಮದ ಬೆಟ್ಟದಲ್ಲಿ ನಿರ್ಮಿಸಿರುವ ಮಿನಿ ಶಬರಿಮಲೆ ದೇವಸ್ಥಾನದಲ್ಲಿಯೇ ಇರುಮುಡಿ ಬಿಚ್ಚುತ್ತಿದ್ದಾರೆ.
ಇದುವರೆಗೆ 4 ಸಾವಿರಕ್ಕೂ ಹೆಚ್ಚು ಮಾಲಾಧಾರಿಗಳು ಇರುಮುಡಿ ಬಿಚ್ಚಿದ್ದು, ಜ.15ರವರೆಗೆ 15 ಸಾವಿರಕ್ಕೂ ಹೆಚ್ಚು ಅಯ್ಯಪ್ಪ ಮಾಲಾಧಾರಿಗಳು ಇರುಮುಡಿ ಬಿಚ್ಚುವ ಅಂದಾಜಿದೆ. ಈ ಕ್ಷೇತ್ರ ಬಾಗಲಕೋಟೆ, ವಿಜಯಪುರ, ಬೆಳಗಾವಿ, ಧಾರವಾಡ ಜಿಲ್ಲೆಗಳ
ಸಾವಿರಾರು ಭಕ್ತರಿಗೆ ಅನುಕೂಲವಾಗಿದೆ.

ಶಬರಿಮಲೆಯಲ್ಲಿ ಪಂಪಾ ನದಿ ಉತ್ತರಾಭಿಮುಖವಾಗಿ ಹರಿದಿದ್ದರೆ, ಆಸಂಗಿ ಸಮೀಪದಲ್ಲಿ ಕೃಷ್ಣಾ ನದಿ ಕೂಡಾ
ಉತ್ತರಾಭಿಮುಖವಾಗಿ ಹರಿದಿದೆ. ಅಯ್ಯಪ್ಪ ಸ್ವಾಮಿ ಭಕ್ತರು ಬೆಳಗ್ಗೆ ಪವಿತ್ರ ಸ್ನಾನ ಮಾಡಿಕೊಂಡು ಇರುಮುಡಿ ಕಟ್ಟಿಕೊಂಡು ದೇವಸ್ಥಾನಕ್ಕೆ ಬರುವ ಸಂದರ್ಭದಲ್ಲಿ ಮೊದಲು ಗಣಪತಿ, ನಂತರ ಶಿವ-ಪಾರ್ವತಿ ದೇವಸ್ಥಾನ, ವಾವರ್‌ ಸ್ವಾಮಿ ( ಮಸೀದಿ)ಗಳಿಗೆ ಹೋಗಿ ನಮಸ್ಕರಿಸಿ ಕ್ಷೇತ್ರಕ್ಕೆ ಬರುವುದುಂಟು.

ಇದನ್ನೂ ಓದಿ:ಸೋಮೇಶ್ವರ ಬೀಚ್: ಸಮುದ್ರ ಪಾಲಾಗುತ್ತಿದ್ದ ಯುವತಿಯನ್ನು ರಕ್ಷಿಸಿದ ಕರಾವಳಿ ಕಾವಲು ಪಡೆ

ಈ ಎಲ್ಲ ದೇವಸ್ಥಾನಗಳು ಆಸಂಗಿ ಗ್ರಾಮದ ಮಾರ್ಗದ ಮಧ್ಯದಲ್ಲಿವೆ. ಶಬರಿಮಲೆಯಲ್ಲೂ ಕೂಡಾ ಈ ಎಲ್ಲ ಭಕ್ತರು ಇರುಮುಡಿ ಇಟ್ಟುಕೊಂಡು ಈ ಎಲ್ಲ ದೇವಸ್ಥಾನಗಳಿಗೆ ಭೇಟಿ ನೀಡಿ ಬೆಟ್ಟ ಹತ್ತಿಕೊಂಡು ಅಯ್ಯಪ್ಪಸ್ವಾಮಿ ಸನ್ನಿಧಿ ಗೆ ಹೋಗುತ್ತಾರೆ. ಅದೇ ರೀತಿ ಇಲ್ಲಿಯೂ ಕೂಡಾ ಮಾಲಾಧಾರಿಗಳು ಭಜನೆ ಮಾಡುತ್ತ ಕಿರಿದಾದ ಈ ಬೆಟ್ಟ ಪ್ರದೇಶ ಹತ್ತುವುದರೊಂದಿಗೆ ಹದಿನೆಂಟು
ಮೆಟ್ಟಿಲುಗಳನ್ನು ಹತ್ತಿ ಸ್ವಾಮಿಯ ದರ್ಶನ ಪಡೆಯುತ್ತಾರೆ. ಕ್ಷೇತ್ರದಲ್ಲಿ ಮಾಳಿಗೆ ಪುರತಮ್ಮಳ ಮೂರ್ತಿಯನ್ನು ಕೂಡಾ
ಪ್ರತಿಷ್ಠಾಪಿಸಲಾಗಿದೆ. ಅಯ್ಯಪ್ಪ ದೇವಸ್ಥಾನ ಡಿ. 30ರಿಂದ ತೆರೆದಿದ್ದು ಜ. 15ರ ಮಕರ ಜ್ಯೋತಿ ದರ್ಶನದವರೆಗೆ ಅವಕಾಶ
ಕಲ್ಪಿಸಲಾಗಿದೆ. ರಾಜ್ಯದ ಬಹುತೇಕ ಅಯ್ಯಪ್ಪ ಮಾಲಾಧಾರಿಗಳು ಕೋವಿಡ್‌ ಹಿನ್ನೆಲೆಯಲ್ಲಿ ಶಬರಿಮಲೆಗೆ ಹೋಗುತ್ತಿಲ್ಲ.
ಹೀಗಾಗಿ ಆಸಂಗಿಯಲ್ಲಿರುವ ಅಯ್ಯಪ್ಪ ದೇವಸ್ಥಾನಕ್ಕೆ ಇರುಮುಡಿ ಇಳಿಸಿ ಹೋಗುತ್ತಿದ್ದಾರೆ. ಸಂಕ್ರಮಣದಂದು ಇಲ್ಲಿ
ನಡೆಯುವ ಜಾತ್ರೆಗೆ ಮಾಲಾಧಾರಿಗಳು ಬರುತ್ತಾರೆ. ಬೇರೆ ಪ್ರದೇಶಗಳಿಂದ ಇಲ್ಲಿಗೆ ಬರುವವರಿಗೆ ವಸತಿ, ಊಟ ಮತ್ತು ಉಪಹಾರ ವ್ಯವಸ್ಥೆ ಮಾಡಲಾಗುತ್ತಿದೆ. ಎನ್ನುತ್ತಾರೆ ಗುರುಸ್ವಾಮಿ ಅಶೋಕ ಗಾಯಕವಾಡ.

Advertisement
Advertisement

Udayavani is now on Telegram. Click here to join our channel and stay updated with the latest news.

Next