Advertisement

ಮಣಿಪಾಲದಲ್ಲೊಂದು “ಮಿನಿ ಪಳ್ಳ’!

10:28 PM Jul 19, 2019 | Sriram |

ಉಡುಪಿ: ಬೇಸಗೆಯಲ್ಲಿ ನೀರಿನ ಬವಣೆಯನ್ನು ನೋಡಿದ ಮಣಿಪಾಲದ ಮಾಹೆ ವಿ.ವಿ. ಆಡಳಿತವು ಜಲಸಂಗ್ರಹಕ್ಕಾಗಿ “ಮಿನಿ ಪಳ್ಳ’ವನ್ನು ಸೃಷ್ಟಿಸಿದೆ. ಎಂಡ್‌ ಪಾಯಿಂಟ್‌ ಸಮೀಪದಲ್ಲಿ 2 ಎಕ್ರೆ ಭೂಮಿಯಲ್ಲಿ ಮಳೆ ನೀರು ಸಂಗ್ರಹಕ್ಕಾಗಿ “ಮಿನಿ ಪಳ್ಳ’ ಯೋಜನೆ ರೂಪಿತವಾಗಿದೆ.

Advertisement

ಈ ಜಾಗದಲ್ಲಿ ಸುಮಾರು 80 ಲಕ್ಷ ಲೀ. ನೀರು ಸಂಗ್ರಹವಾಗುವಂತೆ ತೋಡಲಾಗಿದೆ. ಇದು ಈಗಾಗಲೇ ಇರುವ ಕೊಳವೆಬಾವಿಗಳಿಗೆ ನೀರನ್ನು ಮರುಪೂರಣಗೊಳಿಸುತ್ತದೆ. ಮದಗದ ಆಳ ವಿವಿಧೆಡೆಗಳಲ್ಲಿ ಸುಮಾರು 8-10 ಅಡಿ ಆಳವಿದೆ ಎಂದು ಮಾಹೆ ವಿ.ವಿ.ಯ ಉಪ ಯೋಜನಾ ನಿರ್ದೇಶಕ ಐವನ್‌ ಡಿ’ಸೋಜಾ ಹೇಳಿದ್ದಾರೆ.

ಸುರಕ್ಷಾ ಕ್ರಮವಾಗಿ ಸುತ್ತಲೂ ಬೇಲಿಗಳನ್ನು ನಿರ್ಮಿಸಲಾಗಿದೆ. ಮಾಹೆ ಕ್ಯಾಂಪಸ್‌ನಲ್ಲಿ ಇನ್ನೂ ಎರಡು ಇಂತಹ ಮಿನಿ ಪಳ್ಳಗಳನ್ನು ನಿರ್ಮಿಸುವ ಯೋಜನೆ ಇದೆ. ವೈಜ್ಞಾನಿಕವಾಗಿ ಮಳೆ ನೀರಿನ ಸಂಗ್ರಹ, ಸಂರಕ್ಷಣೆ ಮತ್ತು ಪುನರ್ಬಳಕೆಯನ್ನು ಜಾರಿಗೊಳಿಸಲಾಗುತ್ತದೆ. ಮಳೆ ನೀರಿನ ಜತೆಗೆ ಅಂತರ್ಜಲಕ್ಕೆ ಮರುಪೂರಣ ವ್ಯವಸ್ಥೆಯನ್ನೂ ಮಾಡಲಾಗುತ್ತದೆ. ಮಾಡಿನಿಂದ ಸಂಗ್ರಹವಾಗುವ ಮಳೆ ನೀರನ್ನು ಸಂಗ್ರಹಿಸುವ ಕೆಲಸಕ್ಕೆ ಈಗಾಗಲೇ ಕ್ರಮವಹಿಸಲಾಗಿದೆ. ಈ ನೀರನ್ನು ಮರಳಿನ ಮೂಲಕ ಸೋಸಿ ತಳಮಟ್ಟದಲ್ಲಿ ಸಂಪ್‌ನಲ್ಲಿ ಸಂಗ್ರಹಿಸಿ ಬಳಸುವ ಯೋಜನೆ ಕಾರ್ಯಗತಗೊಳ್ಳುತ್ತಿದೆ. ಇದು ವಿದ್ಯಾರ್ಥಿಗಳು ಮತ್ತು ಸಿಬಂದಿಯ ಸಾಮಾನ್ಯ ಬಳಕೆಗೆ ಉಪಯುಕ್ತವಾಗಲಿದೆ ಎಂದು ಡಿ’ಸೋಜಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next