Advertisement
ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಶನಿ ವಾರ ತಲಘಟ್ಟಪುರ ಠಾಣೆ ಆವರಣದಲ್ಲಿ ಚೇಂಜ್‌ಮೇಕರ್ಸ್ ಆಫ್ ಕನಕಪುರ ಅಸೋಸಿಯೇಷನ್ (ಸಿಎಂಕೆಆರ್‌ಎ) ಹಾಗೂ ಪೊಲೀಸ್ ಇಲಾಖೆಯ ಸಹ ಯೋಗದೊಂದಿಗೆ ಸ್ಥಾಪಿಸಿರುವ ಗರುಡ ಸಿಸಿ ಕ್ಯಾಮೆರಾ ಕಮಾಂಡ್ ಸೆಂಟರ್‌ಅನ್ನು ಉದ್ಘಾಟಿಸಿದರು.
Related Articles
Advertisement
ಪೊಲೀಸರು ಎಲ್ಲಾ ಸಂದರ್ಭದಲ್ಲಿ ಘಟನಾ ಸ್ಥಳದಲ್ಲಿ ಇರಲು ಸಾಧ್ಯವಿಲ್ಲ. ಆದರೆ, ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡು ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಬಹುದಾಗಿದೆ. ಅದಕ್ಕಾಗಿ ಪೊಲೀಸರು ಠಾಣೆಯಲ್ಲಿರುವ ಮಿನಿ ಕಮಾಂಡ್ ಸೆಂಟರ್ ಸ್ಥಾಪಿಸಲಾಗಿದೆ. ಘಟನೆ ನಡೆದ ಸಂದರ್ಭದಲ್ಲಿ ಸಿಸಿ ಕ್ಯಾಮೆರಾಗಳಲ್ಲಿನ ದೃಶ್ಯ ನೋಡಿಕೊಂಡು ಗಸ್ತಿನಲ್ಲಿ ಇರುವ ಪೊಲೀಸರಿಗೆ ನಿರ್ದೇಶನಗಳನ್ನು ನೀಡಲಾಗುತ್ತದೆ. ಈಗ ಅಳವಡಿಸಿರುವ ಕ್ಯಾಮೆರಾಗಳು ವೈಯರ್‌ಲೆಸ್ ಆಗಿವೆ. ಅದರಲ್ಲಿ ಧ್ವನಿ ವರ್ಧಕಗಳನ್ನು ಅಳವಡಿಸಲಾಗಿದೆ. ಪೊಲೀಸ್ ಇಲಾಖೆ ನಗರದಲ್ಲಿ ಈಗಾಗಲೇ 750 ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದೆ. ಅದನ್ನು ಇತರೆ ಪೊಲೀಸ್ ಠಾಣಾ ವ್ಯಾಪ್ತಿಗೂ ವಿಸ್ತರಿಸಲು ಕ್ರಮಕೈಗೊಂಡಿದೆ.
200 ಸಿಸಿ ಕ್ಯಾಮೆರಾ ಅಳವಡಿಸುವ ಗುರಿ :
ಕನಕಪುರ ರಸ್ತೆಯ ವಿವಿಧ ಅಸೋಸಿಯೇಷನ್, ವಾಣಿಜ್ಯ ಸಂಸ್ಥೆಗಳು ಮತ್ತು ಕಾರ್ಪೊರೇಟ್‌ಗಳ ನಿಧಿಯಿಂದ ಮೊದಲ ಹಂತವಾಗಿ 101 ಹೈಡೆಫಿನಿಷನ್‌ನ 5 ಮೆಗಾಫಿಕ್ಸಲ್ ಮತ್ತು ವೈಯರ್‌ಲೆಸ್ ಇರುವ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನು 200 ಕ್ಯಾಮೆರಾಗಳನ್ನು ಅಳವಡಿಸುವ ಗುರಿ ಇದೆ. 55 ಇಂಚಿನ 9 ಎಲ್‌ಇಡಿ ವಾಲ್ ಪೊ›ಜೆಕ್ಷನ್‌ಗಳನ್ನು ಒಳಗೊಂಡಿರುವ ಅತ್ಯಾಧುನಿಕ ಕಮಾಂಡ್ ಸೆಂಟರ್‌ಅನ್ನು ಠಾಣೆ ಅಳವಡಿಸಲಾಗಿದೆ. ಈ ಕ್ಯಾಮರಾಗಳು ಈಗಾಗಲೇ 4 ಪ್ರಕರಣಗಳ ಪತ್ತೆಗೆ ಸಹಕಾರಿಯಾಗಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.