Advertisement

ಖನಿಜ ಸಂಪತ್ತು ಸದ್ಬಳಕೆಯಾಗಲಿ

12:43 PM Sep 19, 2018 | Team Udayavani |

ಬೆಂಗಳೂರು: ರಾಜ್ಯದಲ್ಲಿ ಖನಿಜ ಸಂಪತ್ತು ಅಪಾರ ಪ್ರಮಾಣದಲ್ಲಿದ್ದು, ಅವುಗಳನ್ನು ಸರಿಯಾದ ಕ್ರಮದಲ್ಲಿ ಮಾಡಿಕೊಂಡು ಪ್ರಗತಿ ಸಾಧಿಸಬೇಕಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕ ಎನ್‌.ಎಸ್‌.ಪ್ರಸನ್ನಕುಮಾರ್‌ ಹೇಳಿದರು.

Advertisement

ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ಮಂಗಳವಾರ ಭೂವಿಜ್ಞಾನ ವಿಭಾಗ ಹಾಗೂ ಇಂಡಿಯನ್‌ ಸೊಸೈಟಿ ಆಫ್ ಅಪ್ಲೆ„ಡ್‌ ಜಿಯೋಕೆಮಿಸ್ಟ್‌ ಸಂಸ್ಥೆ  ಹಮ್ಮಿಕೊಂಡಿದ್ದ ಗಣಿಗಾರಿಕೆ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಗಣಿ ಮತ್ತು ಭೂವಿಜ್ಞಾನ ಇಲಾಖೆ ಮೇಲೆ ಈ ಹಿಂದೆ ಕೆಟ್ಟ ಅಭಿಪ್ರಾಯ ಮೂಡಿತ್ತು. ಇತ್ತೀಚಿನ ದಿನಗಳಲ್ಲಿ ಗಣಿಗಾರಿಕೆ ಬಗ್ಗೆ ಸೂಕ್ತ ಮಾರ್ಗದರ್ಶನದ ಮೂಲಕ ಅನುಮತಿ ನೀಡಿದ ಪರಿಣಾಮ ಗಣಿಗಾರಿಕೆ ಕ್ಷೇತ್ರವೂ ಪ್ರಗತಿಯ ಹಾದಿಯತ್ತ ಸಾಗುತ್ತಿದೆ ಎಂದರು.

ಅಕ್ರಮ ಗಣಿಗಾರಿಕೆ ನಡೆಸುವವರ ವಿರುದ್ಧ ಸರ್ಕಾರ ಕಾನೂನಿನಡಿ ಕಠಿಣ ಕ್ರಮ ತೆಗೆದುಕೊಳ್ಳುತ್ತಿದೆ. ಇದರಿಂದ ಸರ್ಕಾರಕ್ಕೆ ಆಗುತ್ತಿದ್ದ ನಷ್ಟ  ತಪ್ಪಿಸಿ ಪರಿಸರ ಅಸಮತೋಲನ ತಡೆಯಲು ಸಾಧ್ಯವಾಗುತ್ತಿದೆ. ಅಭಿವೃದ್ಧಿಯಲ್ಲಿ ನಾವು ಮುಂದಿದ್ದೇವೆ.

ಆದರೆ ಗಣಿಗಾರಿಕೆಯಿಂದ ಪಡೆಯಲಾಗುತ್ತಿರುವ ಉತ್ಪನ್ನಗಳ ಪ್ರಮಾಣ ಕಡಿಮೆ ಇದೆ. ಈ ಎರಡೂ ಕಡೆ ಹೊಂದಾಣಿಕೆ ಆಗದೇ ಇರುವುದರಿಂದ ವಿಜ್ಞಾನಿಗಳು, ಸಂಶೋಧಕರು, ಅನ್ವೇಷಕರು, ಪರಿಶೋಧಕರು ಗಣಿಗಾರಿಕೆ ಉತ್ಪನ್ನಗಳ ಮೇಲಿನ ಸಂಶೋಧನೆ ಹೆಚ್ಚಿಸಬೇಕು ಎಂದು ಸಲಹೆ ನೀಡಿದರು.

Advertisement

ನಿವೃತ್ತ ಪ್ರಾಧ್ಯಾಪಕ ಪ್ರೊ.ಸಿ.ನಾಗಣ್ಣ ಮಾತನಾಡಿ, ದೇಶದ ಅಭಿವೃದ್ಧಿಯಲ್ಲಿ ಭೂ ವಿಜ್ಞಾನ ಆವಿಷ್ಕಾರಗಳು ಮಹತ್ವದ ಪಾತ್ರವಹಿಸಿವೆ. ವಿಶ್ವವಿದ್ಯಾಲಯಗಳು ಈ ನಿಟ್ಟಿನಲ್ಲಿ ಹೆಚ್ಚಿನ ಆವಿಷ್ಕಾರ ನಡೆಸಬೇಕಿದೆ ಎಂದರು.

ಇಂಡಿಯನ್‌ ಸೊಸೈಟಿ ಆಫ್ ಅಪ್ಲೆ„ಡ್‌ ಜಿಯೋಕೆಮಿಸ್ಟ್‌ ಸಂಸ್ಥೆಯ ಅಧ್ಯಕ್ಷ ಕೆ.ಕೆ.ದ್ವಿವೇದಿ, ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಬಿ.ಕೆ.ರವಿ, ವಿಜ್ಞಾನಿ ಡಾ.ಡಿ.ಎಂ.ಬ್ಯಾನರ್ಜಿ, ಕಾರ್ಯದರ್ಶಿ ಪ್ರೊ.ಕೆ.ಸೂರ್ಯಪ್ರಕಾಶ್‌ರಾವ್‌, ಭೂವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ಬಿ.ಸಿ.ಪ್ರಭಾಕರ್‌, ಕಾರ್ಯಕ್ರಮ ಸಂಚಾಲಕ ಪ್ರೊ.ಎನ್‌.ಷಡಾಕ್ಷರಸ್ವಾಮಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next