Advertisement

ಗಣಿ ಧೂಳು ರೇಷ್ಮೆ ಬೆಳೆಗೆ ಆತಂಕ: ವಿಜ್ಞಾನಿಗಳಿಂದ ಪರಿಶೀಲನೆ

02:18 PM Mar 13, 2022 | Team Udayavani |

ದೇವನಹಳ್ಳಿ: ತಾಲೂಕಿನ ಕುಂದಾಣ ಹೋಬಳಿಯ ಕೊಯಿರ ಸೇರಿ ಹತ್ತಾರು ಗ್ರಾಮಗಳ ವ್ಯಾಪ್ತಿಯಲ್ಲಿ ಹಿಪ್ಪು ನೇರಳೆ ಸೊಪ್ಪಿನ ಗಣಿ ಧೂಳು ಆವರಿಸುತ್ತಿರುವಪ್ರದೇಶಗಳ ಹಿಪ್ಪುನೇರಳೆ ತೋಟಗಳಿಗೆ ವಿಜ್ಞಾನಿಗಳುಹಾಗೂ ರೇಷ್ಮೆ ಇಲಾಖೆಯ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿದರು.

Advertisement

ಚಿಕ್ಕಗೊಲ್ಲಹಳ್ಳಿ, ಕೊಯಿರ, ಮಾಯಸಂದ್ರ, ಮುದ್ದನಾಯಕನಹಳ್ಳಿ, ತೈಲಗೆರೆ ಹಾಗೂ

ಮೀಸಗಾನಹಳ್ಳಿ ಇತರೆ ಗಣಿಗಾರಿಕೆ ಪ್ರದೇಶದ5-6ಕಿಮೀ ಸುತ್ತಮುತ್ತಲಿನಲ್ಲಿ ರೈತರು ಬೆಳೆದ ರೇಷ್ಮೆ ತೋಟಗಳಿಗೆ ವಿಜ್ಞಾನಿಗಳು ಸ್ಥಳ ಭೇಟಿ ನೀಡಿದರು.

ಚಿಕ್ಕಗೊಲ್ಲಹಳ್ಳಿ ಗ್ರಾಮದ ಸುತ್ತಮುತ್ತಲಿನ ಬಹಳಷ್ಟುರೈತರು ಗಣಿಗಾರಿಕೆ, ಕ್ರಷರ್‌, ಗ್ರಾನೈಟ್‌ ಫ್ಯಾಕ್ಟರಿಗಳಿಂದಹೊರಬರುವ ಧೂಳಿನಿಂದ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ದೂರು ಬರುತ್ತಿದ್ದ ಹಿನ್ನೆಲೆಯಲ್ಲಿ ರೇಷ್ಮೆ ಇಲಾಖೆಯ ಅಧಿಕಾರಿಗಳು ಮತ್ತು ವಿಜ್ಞಾನಿಗಳ ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.

ವಿಜ್ಞಾನಿಗಳ ತಂಡ ಪರಿಶೀಲನೆ: ಕ್ವಾರಿಯಿಂದ ಹತ್ತಿರದಲ್ಲಿರುವ ತೋಟಗಳು, ಮಧ್ಯದಲ್ಲಿರುವ ತೋಟಗಳು, ದೂರದಲ್ಲಿರುವ ತೋಟಗಳಿಗೆ ಭೇಟಿನೀಡಿ ಎಲ್ಲೆಲ್ಲಿ ರೇಷ್ಮೆ ಬೆಳೆಗೆ ಸಮಸ್ಯೆ ಆಗುತ್ತಿದೆ ಎಂಬುವುದರ ಬಗ್ಗೆ ಪರಿಶೀಲನೆ ನಡೆಸಲಾಯಿತು.ಚಿಕ್ಕಗೊಲ್ಲಹಳ್ಳಿ ಗಣಿ ಪ್ರದೇಶದಲ್ಲಿ ಬ್ಲಾಸ್ಟಿಂಗ್‌ ಆಗಿದ್ದನ್ನು ಕಣ್ಣಾರೆ ವಿಜ್ಞಾನಿಗಳ ತಂಡ ಪರಿಶೀಲಿಸಿದರು.

Advertisement

ಎಲ್ಲಾ ಸ್ಥಳೀಯ 12-14 ರೈತರ ತೋಟ ಸೇರಿದಂತೆ ಹುಳು ಸಾಕಾಣಿಕೆ ಮನೆಗಳಿಗೆ ಭೇಟಿ ನೀಡಿ, ಅಲ್ಲಿನ ವರದಿಯನ್ನು ಸಹ ಪಡೆದುಕೊಂಡರು. ಎಲೆಯಲ್ಲಿ ಎಷ್ಟು ಪ್ರಮಾಣದಲ್ಲಿ ಮಣ್ಣು, ಕಲ್ಲು, ಧೂಳು ಸೇರಿದೆ ಎಂಬುವುದರ ಬಗ್ಗೆವರದಿ ಮಾಡಿ ರೇಷ್ಮೆ ಇಲಾಖೆಗೆ ವಿಜ್ಞಾನಿಗಳಿಂದವರದಿ ಪಡೆದುಕೊಳ್ಳಲಾಗುತ್ತಿದೆ. ಸ್ಥಳೀಯವಾಗಿ ಆದ ಬ್ಲಾಸ್ಟಿಂಗ್‌ನಿಂದ ವಿಜ್ಞಾನಿಗಳು ಮತ್ತು ಅಧಿಕಾರಿಗಳ ತಂಡ ಒಂದು ತಾಸು ನಡುಗಿದರು. ಈ ರೀತಿಯಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದ ಮನುಕುಲಕ್ಕೆ ಆತಂಕವಾಗುದರಲ್ಲಿ ಸಂದೇಹವಿಲ್ಲ ಎಂದು ಸ್ಥಳೀಯ ರೈತರಿಗೆ ಹೇಳಿದರು.  ಇಷ್ಟು ದಿನಗಳು ಏನು ಮಾಡುತ್ತಿದ್ದರಿ ನೀವು ಎಂದು ರೈತರನ್ನೇ ಪ್ರಶ್ನಿಸಿದರು.

ಕಾಟಾಚಾರಕ್ಕೆ ಪರಿಶೀಲನೆ: ಎಲ್ಲ ಇಲಾಖೆಗಳಿಂದ ಈ ರೀತಿಯ ವರದಿಗಳು ವರ್ಷಗಳಿಂದಲೂ ನೀಡುತ್ತಲೇ ಬರುತ್ತಿದ್ದಾರೆ. ಜಿಲ್ಲಾಡಳಿತ ಕಣ್ಮುಚ್ಚಿಕುಳಿತಿದೆ. ಕೇವಲ ಕಾಲಹರಣ ಮಾಡುತ್ತಿದೆ. ಮಂತ್ರಿಗಳು ಸಹ ನಿಯಮ ಪಾಲಿಸುವಂತೆ ಆದೇಶ ನೀಡಿದ್ದರೂ ಸಹ ಯಾವುದೇ ಪ್ರಯೋಜನವಾಗುತ್ತಿಲ್ಲ. ಸ್ಥಳೀಯ ಜಿಲ್ಲಾಧಿಕಾರಿಗಳು ಪರೋಕ್ಷವಾಗಿ ಗಣಿಗಾರಿಕೆ ನಡೆಸುವವರ ಪರವಿದ್ದಾರೆ. ರೈತರ ಗೋಳು ಕೇಳುವವರಿಲ್ಲದಂತೆ ಆಗಿದೆ. ಇದು ಕೇವಲ ಕಾಟಾಚಾರದ ಪರಿಶೀಲನೆಯಾಗಿದೆ ಎಂದು ಕೊಯಿರ ರೇಷ್ಮೆ ಬೆಳೆಗಾರ ಚಿಕ್ಕೆಗೌಡ ಆರೋಪಿಸಿದರು.

ಧೂಳಿನ ಬಾಧೆಗೆ ವರದಿ ಪ್ರಕಟ: ಮಾ. 4ರಂದು ಉದಯವಾಣಿ ದಿನಪತ್ರಿಕೆಯಲ್ಲಿ ವಿವಿಧೆಡೆ ಹಿಪ್ಪುನೇರಳೆ ಬೆಳೆಗೆ ಧೂಳಿನ ಬಾಧೆ ಎಂಬ ವರದಿಪ್ರಕಟಗೊಂಡಿತ್ತು. ವರದಿ ಪ್ರಕಟಗೊಂಡ ಬೆನ್ನಲ್ಲೆಕೊಯಿರ ಸೇರಿದಂತೆ ಹತ್ತಾರು ಗ್ರಾಮಗಳಿಗೆ ಗಣಿಬಾಧಿತ ಪ್ರದೇಶಗಳಿಗೆ ಅಧಿಕಾರಿಗಳು ಮತ್ತುವಿಜ್ಞಾನಿಗಳ ತಂಡ ಭೇಟಿ ನೀಡಿ ಪರಿಶೀಲಿಸಿದರು. ಈವೇಳೆಯಲ್ಲಿ ದೇವನಹಳ್ಳಿ ರೇಷ್ಮೆ ಇಲಾಖೆ ಸಹಾಯಕನಿರ್ದೇಶಕ ನರೇಂದ್ರಬಾಬು, ವಿಜ್ಞಾನಿ ತಜ್ಞರಾದ ಡಾ.ಸಿ.ಜ್ಯೋತಿ, ರೇಷ್ಮೆ ಹುಳು ತಜ್ಞ ಆನಂದ್‌ ಕುಮಾರ್‌, ರೈತರು ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next