ಬೆಂಗಳೂರು: ಕಳೆದ ಹದಿನೈದು ದಿನಗಳಿಂದ ಬಿಸಿಲಿನ ಬೇಗೆಗೆ ತತ್ತರಿಸಿದ್ದ ನಗರಕ್ಕೆ ಸೋಮವಾರ ಸಂಜೆಯ ಮಳೆ ತಂಪೆರೆಯಿತು. ಫೆಬ್ರವರಿ ಕೊನೆಯ ವಾರದಿಂದ ಈಚೆಗೆ ನಗರದ ತಾಪಮಾನ 35 ಡಿಗ್ರಿ ಸೆಲ್ಸಿಯಸ್‌ನ ಆಸುಪಾಸು ಇದೆ. ಬೇಸಿಗೆ ಆರಂಭದಲ್ಲೇ ತಟ್ಟಿದ “ಬಿಸಿ’ಗೆ ಜನ ತತ್ತರಿಸಿದ್ದಾರೆ. ಈ ಮಧ್ಯೆ ಸಂಜೆ ಸುರಿದ ಗಾಳಿಸಹಿತ ಮಳೆ ತುಸು ನಿಟ್ಟುಸಿರು ಬಿಡುವಂತೆ ಮಾಡಿತು.
ವರ್ಷದ ಮೊದಲ ಮಳೆಗೆ ಅಲ್ಲಲ್ಲಿ ಮಕ್ಕಳು ಸೇರಿದಂತೆ ಜನ ಮೈಯೊಡ್ಡಿದರು. ಹೆಚ್ಚು-ಕಡಿಮೆ ಸಂಜೆ ವಾಹನಗಳು ರಸ್ತೆಗಿಳಿ ಯುವ ಸಮಯುವಾಗಲೇ ವರುಣನ ಅಬ್ಬರ ಶುರುವಾಗಿದ್ದರಿಂದ ವಾಹನಸವಾರರಿಗೆ ಸಂಚಾರ ದಟ್ಟಣೆ ಬಿಸಿ ತಟ್ಟಿತು. ಅದರಲ್ಲೂ ನಗರದ ಹೃದ ಯಭಾಗ ನೃಪತುಂಗ ರಸ್ತೆಯಲ್ಲಿ ಕಾಮಗಾರಿ ನಡೆಯು ತ್ತಿದ್ದುದರಿಂದ ವಾಹನದಟ್ಟಣೆ ತುಸು ಹೆಚ್ಚಿತ್ತು.
ಮತ್ತೂಂದೆಡೆ ಗಾಳಿ ಸಹಿತ ಮಳೆ ಹೊಡೆತಕ್ಕೆ ತಿಲಕ್‌ನಗರದ ಸ್ವಾಗತ್ ಮುಖ್ಯರಸ್ತೆ, ಸದಾಶಿವನಗರದ ಸ್ಯಾಂಕಿ ರಸ್ತೆ, ಚಾಮರಾಜಪೇಟೆಯಲ್ಲಿ ತಲಾ ಒಂದು ಮರಗಳು ನೆಲಕಚ್ಚಿವೆ. ಚಾಮರಾಜಪೇಟೆಯಲ್ಲಿ ಮರ ಉರುಳಿ ಕಾರು ಜಖಂಗೊಂಡ ಘಟನೆ ನಡೆದಿದೆ. ತಗ್ಗುಪ್ರದೇಶಗಳಲ್ಲಿ ನೀರು ನಿಂತಿದ್ದರಿಂದ ಸುಗಮ ಸಂಚಾರಕ್ಕೆ ಮತ್ತಷ್ಟು ವ್ಯತ್ಯಯ ಉಂಟಾಯಿತು.
ಕೇರಳದಿಂದ ಬಂದ ವರುಣ
ತಿರುವನಂತಪುರಂ: ಇನ್ನೇನು ಬರಗಾಲ ಅಪ್ಪಳಿಸಲಿದೆ ಎನ್ನುವಾಗಲೇ ಕೇರಳ ರಾಜ್ಯಾದ್ಯಂತ ಕಳೆದೆರಡು ದಿನಗಳಿಂದ ಭಾರಿ ಮಳೆ ಆಗುತ್ತಿದೆ. ಮುಂದಿನವಾರವೂ ಇದೇ ವಾತಾವರಣ ಇರಲಿದ್ದು, ಕರ್ನಾಟಕದಲ್ಲೂ ಮಳೆ ಮುಂದುವರಿಯುವ ಸಂಭವವಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.
ಕೇರಳದ ಬಹುತೇಕ ಭಾಗ, ಲಕ್ಷದ್ವೀಪದಲ್ಲಿ ಬಿರುಗಾಳಿ ಸಹಿ ಮಳೆ ಕಾಲಿಟ್ಟಿದೆ. ಮುಂದಿನ ಐದು ದಿನವೂ ಮಳೆ ಆಗಲಿದೆ. ಕೇರಳಕ್ಕೆ ಮಳೆ ಕಾಲಿಟ್ಟ ಎರಡು ದಿನದಲ್ಲಿ ಕರ್ನಾಟಕಕ್ಕೆ ವರುಣನ ಕೃಪೆಯಾಗಿದೆ. ಈ ಕಾರಣ ಇನ್ನೂ ಕೆಲವು ದಿನಗಳ ವರೆಗೆ ಕರ್ನಾಟಕ ಮಳೆಯಿಂದ ತಂಪಾಗುವ ಸಾಧ್ಯತೆಯಿದೆ ಎನ್ನುತ್ತಾರೆ ಹವಾಮಾನ ತಜ್ಞರು.