ದಾವಣಗೆರೆ: ಗ್ರಾಮೀಣ ಸೊಗಡನ್ನು ಬಿಂಬಿಸುವ ಜನಪದ ಕಲೆಗಳು ಸದಾ ಮನಸ್ಸಿಗೆ ಮುದ ನೀಡುತ್ತಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ತಿಳಿಸಿದರು. ತಾಲೂಕಿನ ಹಳೇ ಕಡ್ಲೆಬಾಳು ಗ್ರಾಮದಲ್ಲಿಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಜನಪರ ಉತ್ಸವವನ್ನು ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗ ದಲ್ಲಿ ಇಂತಹ ಕಾರ್ಯಕ್ರಮ ನಡೆಯುತ್ತಿರುವುದು ಶ್ಲಾಘನೀಯ. ಅದರಲ್ಲೂ ನನ್ನ ಕ್ಷೇತ್ರದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮ ನನಗೂ ಮತ್ತು ಈ ಭಾಗದ ನಿವಾಸಿಗಳ ಮನಸ್ಸಿಗೆ ಮುದ ನೀಡಿದೆ. ಗ್ರಾಮ ಪಂಚಾಯಿತಿ ಮತ್ತು ಮುಖಂಡರು ಅಚ್ಚುಕಟ್ಟಾಗಿ ಆಯೋಜಿಸಿದ್ದಾರೆ ಎಂದರು.
ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತಹ ಜನಪದ ಕಾರ್ಯಕ್ರಮ ಹೆಚ್ಚು-ಹೆಚ್ಚಾಗಿ ನಡೆಯಬೇಕು. ಗ್ರಾಮದಲ್ಲಿ ಈ ಹಿಂದೆಯೇ ಕಲ್ಯಾಣ ಮಂಟಪ ನಿರ್ಮಿಸುವಂತೆ ವಿನಂತಿಸಲಾಗಿತ್ತು. ಈಗಾಗಲೇ ಮೊದಲ ಹಂತವಾಗಿ ಅನುದಾನ ಬಿಡುಗಡೆಮಾಡಲಾಗಿದ್ದು ಶೀಘ್ರ ಕಾಮಗಾರಿ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ರಾಜ್ಯ ಸರ್ಕಾರ ರೈತರ ಪರ ಇದೆ. ರೈತರ ಹಿತದೃಷ್ಟಿಯಿಂದಲೇ ನಮ್ಮ ಸರ್ಕಾರ ಅನೇಕ ಕಾರ್ಯಕ್ರಮ ರೂಪಿಸಿದ್ದು, ಭದ್ರಾ ಅಚ್ಚುಕಟ್ಟು ಕೊನೆಭಾಗದ ರೈತರ ಹಿತಕಾಯಲಾಗುವುದು ಎಂದು ತಿಳಿಸಿದರು. ಡ್ಲೆಬಾಳು ಗ್ರಾಪಂ ಅಧ್ಯಕ್ಷ ಬಿ.ಕೆ. ಪರಶುರಾಮ್ ಅಧ್ಯಕ್ಷತೆ ವಹಿಸಿದ್ದರು.
ಎಪಿಎಂಸಿ ಅಧ್ಯಕ್ಷ ಮುದೇಗೌಡ್ರು ಗಿರೀಶ್, ಮಾಜಿ ಅಧ್ಯಕ್ಷ ರಾಘವೇಂದ್ರನಾಯ್ಕ, ಜಿಪಂ ಸದಸ್ಯೆ ರೇಣುಕಮ್ಮ ಬಿ. ಕರಿಬಸಪ್ಪ, ತಾಪಂ ಅಧ್ಯಕ್ಷೆ ಮಮತ ಮಲ್ಲೇಶಪ್ಪ, ಸದಸ್ಯೆ ಗೌರಿಬಾಯಿ, ಎಪಿಎಂಸಿ ನಿರ್ದೇಶಕ ಕೆ.ಜಿ. ಶಾಂತರಾಜ್, ಅಂಜಿಬಾಬು, ರೂಪ್ಲಾನಾಯ್ಕ, ಕಡ್ಲೆಬಾಳು ಗ್ರಾಪಂ ಉಪಾಧ್ಯಕ್ಷೆ ಆರ್.ಲಕ್ಷ್ಮಿಭೀಮಾನಾಯ್ಕ, ಸದಸ್ಯರಾದ ಹಿರಿಯಮ್ಮ ಎಚ್.ಎಸ್.ಉಜ್ಜಪ್ಪ, ರತ್ನಮ್ಮ ಕೆಂಚಪ್ಪ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಕುಮಾರ ಹನುಮಂತಪ್ಪ,
ತಹಶೀಲ್ದಾರ್ ಸಂತೋಷಕುಮಾರ್, ಜಾನಪದ ಪರಿಷತ್ ಜಿಲ್ಲಾ ಅಧ್ಯಕ್ಷ ಡಾ| ಎಚ್. ವಿಶ್ವನಾಥ್, ದಾವಣಗೆರೆ ವಿ.ವಿ ಸಿಂಡಿಕೇಟ್ ಸದಸ್ಯ ನಾಗಭೂಷಣ್, ಗ್ರಾಮದ ಹಿರಿಯರಾದ ಗೌಡ್ರು ಈಶಣ್ಣ, ಹಾಲೇಶಪ್ಪ, ಭೀಮಾನಾಯ್ಕ, ಜಿಲ್ಲಾ ಕೆಡಿಪಿ ಸದಸ್ಯ ಎ.ಬಿ.ಪ್ರಭಾಕರ್,ರಾಜಣ್ಣ ಮಾಗಾನಹಳ್ಳಿ ಇತರರು ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ ಸ್ವಾಗತಿಸಿದರು.