ಸದಾ ಒಂದಿಲ್ಲೊಂದು ಕಾರಣಗಳಿಂದ ಸುದ್ದಿಯಲ್ಲಿರುವ ಬಂಗಾಳಿ ನಟಿ, ಟಿಎಂಸಿ ಸಂಸದೆ ಮಿಮಿ ಚಕ್ರವರ್ತಿ ಹೊಸ ದೂರೊಂದನ್ನು ಟ್ವಿಟ್ಟರ್‌ನಲ್ಲಿ ಹೇಳಿಕೊಂಡಿದ್ದಾರೆ.
ಅವರ ಐಫೋನ್‌ನಲ್ಲಿದ್ದ 7 ಸಾವಿರ ಫೋಟೋಗಳು ಮತ್ತು 500 ವಿಡಿಯೋಗಳು ಇದ್ದಕ್ಕಿದ್ದಂತೆ ಡಿಲೀಟ್ ಆಗಿವೆಯಂತೆ. ಈ ಬಗ್ಗೆ ನಟಿ ಟ್ವಿಟ್ಟರ್‌ನಲ್ಲಿ “ಅಳುವುದೋ ಅಥವಾ ಜೋರಾಗಿ ಅಳುವುದೋ ಗೊತ್ತಾಗುತ್ತಿಲ್ಲ’ ಎಂದು ಬರೆದು ಕೊಂಡಿದ್ದಾರೆ.
ಇದನ್ನೂ ಓದಿ:ಸದ್ದು ಮಾಡುತ್ತಿದೆ ನಾನಿ, ಸಾಯಿ ಪಲ್ಲವಿ, ಕೃತಿ ಶೆಟ್ಟಿ ಅಭಿನಯದ ‘ಶ್ಯಾಮ್ ಸಿಂಗ ರಾಯ್’ ಟೀಸರ್
ಹಾಗೆಯೇ ಅವುಗಳನ್ನು ವಾಪಸು ಪಡೆಯಲು ಯಾವುದಾದರೂ ಮಾರ್ಗ ತಿಳಿಸಿ ಎಂದು ಆ್ಯಪಲ್ ಸಂಸ್ಥೆಗೆ ಮನವಿ ಮಾಡಿದ್ದಾರೆ. ಮಿಮಿ ಅವರು ಸೆಪ್ಟೆಂಬರ್‌ನಲ್ಲಿ ಐ ಫೋನ್ 13 ಖರೀದಿಸಿದ್ದರು.
Related Articles
ಮಿಮಿ ಚಕ್ರವರ್ತಿ ಅವರು ಡೇಟಾವನ್ನು ಹಿಂಪಡೆಯಲು ಹಲವಾರು ಮಾರ್ಗಗಳನ್ನು ಪ್ರಯತ್ನಿಸಿದ್ದಾರೆ ಆದರೆ ಯಾವುದೇ ಪ್ರಯೋಜನವಾಗಲಿಲ್ಲ. “ರೆಟ್ರೈವ್ ಮಾಡಲು ಎಲ್ಲಾ ವಿಧಾನಗಳು ಪ್ರಯತ್ನಿಸಿದೆ ಆದರೆ ಅದು ಯಾವುದೂ ಸಹಾಯ ಮಾಡಲಿಲ್ಲ” ಅವರು ಬರೆದು ಕೊಂಡಿದ್ದಾರೆ.