Advertisement

Belthangady: ನೆಲ ಮಹಡಿಯಲ್ಲಿಟ್ಟಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

01:09 AM Sep 15, 2023 | Team Udayavani |

ಬೆಳ್ತಂಗಡಿ: ಮುಂಡಾಜೆ ಗ್ರಾಮದ ಕಡಂಬಳ್ಳಿಯ ಪ್ರಮೋದ್‌ ವಿ. ಭಿಡೆ ಅವರ ನಿವಾಸದ ನೆಲ ಮಾಳಿಗೆಯಲ್ಲಿ ಇರಿಸಿದ್ದ ಚಿನ್ನಾಭರಣ ಕಳವಾದ ಘಟನೆ ನಡೆದಿದೆ.

Advertisement

ಜು. 5ರಂದು ಮನೆಯ ಸಾರಣೆ ಹಾಗೂ ಪೈಂಟಿಗ್‌ ಕೆಲಸವನ್ನು ಪ್ರಾರಂಭಿಸಿದ್ದು, ಕೆಲಸ ಪ್ರಾರಂಭ ಮಾಡುವ ಮುಂಚಿತವಾಗಿ ಮನೆಯಲ್ಲಿದ್ದ ಚಿನ್ನಾಭರಣಗಳನ್ನು, ಅವರ ಪತ್ನಿ ಮನೆಯ ನೆಲಮಾಳಿಗೆಯಲ್ಲಿ ಇರಿಸಿದ್ದರು. ನೆಲಮಾಳಿಗೆಯಲ್ಲಿಟ್ಟಿದ್ದ ಚಿನ್ನಾಭರಣಗಳ ಕೋಣೆಗೆ ಬೀಗ ಹಾಕದೆ ಇದ್ದು, ಕೆಲಸಕ್ಕೆ ಸುಮಾರು 10ರಿಂದ 13 ಕಾರ್ಮಿಕರು ಬಂದಿದ್ದರು.

ಜು. 19ರಂದು ಕೆಲಸ ಮುಗಿದಿದ್ದು, ಸೆ. 12ರಂದು ಬೆಳಗ್ಗೆ ಕಾರ್ಯಕ್ರಮಕ್ಕೆ ತೆರಳುವ ಸಂದರ್ಭ ಆಭರಣ ಇಟ್ಟಿದ್ದ ಸ್ಥಳಕ್ಕೆ ಹೋಗಿ ನೋಡಿದಾಗ ಅಲ್ಲಿ ಇಡಲಾಗಿದ್ದ ಒಟ್ಟು 122 ಗ್ರಾಂ ಚಿನ್ನಾಭರಣ ಕಳವಾಗಿರುವುದು ಕಂಡುಬಂದಿದೆ. ಕಳವಾದ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ 5 ಲಕ್ಷ ರೂ. ಆಗಿದೆ. ಚಿನ್ನಾಭರಣವಿರಿಸಿ ಮೂರು ತಿಂಗಳವರೆಗೂ ಮನೆಮಂದಿ ಪರಿಶೀಲಿಸದೇ ಇರುವುದರಿಂದ ಯಾವಾಗ ಕಳವಾಗಿರಬಹುದು ಎಂಬುದರ ಬಗ್ಗೆ ನಿಖರತೆಯಿಲ್ಲದೆ ಮನೆಮಂದಿ ಚಿಂತೆಗೀಡಾಗಿದ್ದಾರೆ.

ಪೊಲೀಸ್‌ ತನಿಖೆ ಚುರುಕು
ಈ ಬಗ್ಗೆ ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಪ್ರಕರಣದ ತನಿಖೆ ಆರಂಭಿಸಿರುವ ಪೊಲೀಸರು ಕಾರ್ಮಿಕರ ಪೈಕಿ ಹಲವರನ್ನು ಠಾಣೆಗೆ ಕರೆದು ವಿಚಾರಣೆ ನಡೆಸಿದ್ದಾರೆ. ಇನ್ನುಳಿದ ಮಂದಿ ಊರಲ್ಲಿ ಇರದೇ ಇರುವುದರಿಂದ ಅವರನ್ನು ಕೇಂದ್ರೀಕರಿಸಿ ತನಿಖೆಯನ್ನು ಚುರುಕುಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next