Advertisement

Udupi;ಆನ್‌ಲೈನ್‌ ಮೂಲಕ ಲಕ್ಷಾಂತರ ರೂ. ವಂಚನೆ

12:41 AM Jun 15, 2023 | Team Udayavani |

ಉಡುಪಿ: ಆನ್‌ಲೈನ್‌ ಮೂಲಕ ಮಹಿಳೆಯೊಬ್ಬರಿಗೆ ಲಕ್ಷಾಂತರ ರೂ. ವಂಚಿಸಿದ ಘಟನೆ ನಡೆದಿದೆ.

Advertisement

ಪರ್ಕಳದ ಸ್ವಾತಿ ಅವರಿಗೆ ಅಪರಿಚಿತ ಸಂಖ್ಯೆಯಿಂದ ಪಾರ್ಟ್‌ಟೈಮ್‌ ಕೆಲಸ ಮಾಡಿ ಹಣ ಗಳಿಸುವ ಬಗ್ಗೆ ವಾಟ್ಸ್‌ಆ್ಯಪ್‌ನಲ್ಲಿ ಸಂದೇಶ ಬಂದಿತ್ತು. ಅದನ್ನು ನಂಬಿದ ಅವರು ಕಂಪೆನಿಯಲ್ಲಿ ಟಾಸ್ಕ್ ನಡೆಸುವ ಬಗ್ಗೆ ಹಣವನ್ನು ಪಾವತಿಸುವಂತೆ ಬ್ಯಾಂಕ್‌ ಖಾತೆ ಸಹಿತ ಎಲ್ಲ ವಿವರ ನೀಡಿದ್ದರು. ಜೂ. 10ರಿಂದ 11ರ ನಡುವೆ ಒಟ್ಟು 5,61,230ರೂ. ಗಳನ್ನು ಆರೋಪಿಗಳು ತಿಳಿಸಿದಂತೆ ಅವರ ಬ್ಯಾಂಕ್‌ ಖಾತೆಗೆ ಜಮೆ ಮಾಡಲಾಗಿತ್ತು.

ಆದರೆ ಅವರು ಹಣ ನೀಡದೆ ವಂಚಿಸಿದ್ದಾರೆ ಎಂದು ಸ್ವಾತಿ ಅವರು ಸೆನ್‌ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next