Advertisement
ಮಣಿಪಾಲ ವಿದ್ಯಾರತ್ನ ನಗರದ ಡಾ| ಕುನಾಲ್ ದಾಸ್ ಕರ್ತವ್ಯದಲ್ಲಿದ್ದಾಗ ಕಮ್ಯೂನಿಕೇಟ್ ವೈ 659 ಎಂಬ ವಾಟ್ಸ್ ಆ್ಯಪ್ ಗ್ರೂಪ್‌ನಿಂದ ಅನಾಮಧೇಯ ನಂಬರ್‌ಗೆ ಸಂಬಂಧಿಸಿದ ವ್ಯಕ್ತಿಯು ಹೆಚ್ಚಿನ ಹಣವನ್ನು ಗೆಲ್ಲಲು ಟೆಲಿಗ್ರಾಂ ಅಪ್ಲೀಕೇಶನ್‌ನಲ್ಲಿ 00227 ಗೂಗಲ್ ಡಾಟ್ ಟಾಸ್ಕ್ ಎಂಬ ಗ್ರೂಪ್‌ಗೆ ಜಾಯಿನ್ ಆಗುವಂತೆ ತಿಳಿಸಿದ್ದರು. ಅದರಂತೆ ಸೇರ್ಪಡೆ ಆದಾಗ ಆತ ಈ ಗ್ರೂಪ್‌ನಲ್ಲಿ ಹಣವನ್ನು ತೊಡಗಿಸಿದರೆ ಶೇ. 20 ಹೆಚ್ಚಿನ ಹಣವನ್ನು ಖಾತೆಗೆ ಜಮೆ ಮಾಡುವುದಾಗಿ ತಿಳಿಸಿದನು. ಅದರಂತೆ ಹಂತಹಂತವಾಗಿ 1.79 ಲ.ರೂ.ಗಳನ್ನು ಡಾ| ಕುನಾಲ್ ದಾಸ್ ಕಳೆದುಕೊಂಡಿದ್ದಾರೆ.
ಮಂಗಳೂರು: ಹೆಚ್ಚಿನ ಲಾಭದ ಆಮಿಷ ತೋರಿಸಿ ಹೂಡಿಕೆ ಹೆಸರಿನಲ್ಲಿ 30,40,000 ರೂ. ವರ್ಗಾಯಿಸಿಕೊಂಡು ವಂಚಿಸಿದ ಬಗ್ಗೆ ಮಂಗಳೂರು ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಕ್ಷ್ಮೀನಾರಾಯಣ ಅವರು ಫೇಸ್‌ಬುಕ್‌ನಲ್ಲಿ ಜಾಹೀರಾತು ನೋಡಿ ಖಅಖಅ ಖrಚಛಜಿnಜ cluಚಿ ಎಂಬ ಗ್ರೂಪ್‌ಗೆ ಸೇರ್ಪಡೆಗೊಂಡಿದ್ದರು. ಅದರಲ್ಲಿ ಬರುವ ಷೇರು ಮಾರುಕಟ್ಟೆ ಹೂಡಿಕೆ ಕುರಿತಾದ ಮಾಹಿತಿಗಳನ್ನು ನೋಡುತ್ತಿದ್ದರು. ಆ ಗ್ರೂಪ್‌ನ ಅಡ್ಮಿನ್ IPO ಮತ್ತು Block trading ನಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ದೊರೆಯುತ್ತದೆ ಎಂದು ತಿಳಿಸಿದ. ಅದನ್ನು ನಂಬಿದ ಲಕ್ಷ್ಮೀ ನಾರಾಯಣ ಅವರು Bulk Angel Pro ಆ್ಯಪ್ ಇನ್‌ಸ್ಟಾಲ್ ಮಾಡಿ ಎ. 24ರಿಂದ ಮೇ 15ರ ವರೆಗೆ ತನ್ನ ಬ್ಯಾಂಕ್ ಖಾತೆಯಿಂದ 30.40 ಲ.ರೂ.ಗಳನ್ನು ಆರೋಪಿಗಳ ವಿವಿಧ ಬ್ಯಾಂಕ್‌ಗೆ ವರ್ಗಾಯಿಸಿ ಮೋಸ ಹೋಗಿದ್ದಾರೆ.