Advertisement

ಹಸು-ಹಂದಿಗಳಿಂದ ಲಕ್ಷಾಂತರ ಆದಾಯ

11:55 AM Jun 01, 2018 | Team Udayavani |

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ವಾಹನ ಸವಾರರಿಗೆ ತೊಂದರೆ ಕೊಡುವ ಬಿಡಾಡಿ ಹಸು-ಹಂದಿಗಳು ಬಿಬಿಎಂಪಿಗೆ ವಾರ್ಷಿಕ ಲಕ್ಷಾಂತರ ರೂ. ಆದಾಯ ತಂಡುಕೊಡುತ್ತಿವೆ. ನಗರದ ಅಲ್ಲಲ್ಲಿ ಸಂಚರಿಸುವ ಬಿಡಾಡಿ ಹಂದಿ ಹಾಗೂ ಹಸುಗಳು ಜನರನ್ನು ಇಲ್ಲದಂತೆ ಕಾಡುತ್ತವೆ.

Advertisement

ಆದರೆ, ಇವು ಪಾಲಿಕೆಗೆ ಆದಾಯ ತಂದುಕೊಡುತ್ತಿದೆ ಎಂಬ ಅಂಶ ಪಾಲಿಕೆಯ ಪಶುಪಾಲನಾ ವಿಭಾಗದ ಅಂಕಿ-ಅಂಶಗಳಿಂದ ತಿಳಿದಿದೆ. ಇತ್ತೀಚೆಗೆ ನಗರದಲ್ಲಿರುವ ಬಿಡಾಡಿ ಹಂದಿಗಳನ್ನು ಹಿಡಿಯಲು ಪಾಲಿಕೆಯಿಂದ ಟೆಂಡರ್‌ ನೀಡಲಾಗಿತ್ತು. ಟೆಂಡರ್‌ ಪಡೆದವರು ಬುಧವಾರ ಎಚ್‌ಎಸ್‌ಆರ್‌ ಬಡಾವಣೆಯಲ್ಲಿ ಕಾರ್ಯಾಚರಣೆ ನಡೆಸಿ 20 ಹಂದಿಗಳನ್ನು ಸೆರೆ ಹಿಡಿದಿದ್ದಾರೆ.

ಪಾಲಿಕೆ ವ್ಯಾಪ್ತಿಯಲ್ಲಿ ಹಂದಿ ಸಾಕಾಣಿಕೆ ಹಾಗೂ ರಸ್ತೆ ಬಿಡುವುದು ನಿಷಿದ್ಧ. ಹೀಗಾಗಿ, ಟೆಂಡರ್‌ ಪಡೆದವರು ಹಂದಿಗಳನ್ನು ಹಿಡಿದರೂ ಅದನ್ನು ಮಾಲೀಕರು ಪ್ರಶ್ನಿಸುವಂತಿಲ್ಲ. ಹೀಗಾಗಿ, ಟೆಂಡರ್‌ ಪಡೆದವರು ರಸ್ತೆಗಳನ್ನು ಸೆರೆ ಹಿಡಿದ ಹಂದಿಗಳನ್ನು ಮಾಂಸಕ್ಕಾಗಿ ಮಾರಾಟ ಮಾಡಿಕೊಳ್ಳಲಿದ್ದು ಪಾಲಿಕೆಗೆ ಪ್ರತಿ ಕೆಜಿಗೆ 70 ರೂ. ನೀಡಲಿದ್ದಾರೆ. ಇದರಿಂದ ಪಾಲಿಕೆಗೆ ಒಂದೇ ದಿನದಲ್ಲಿ 20,300 ರೂ. ಆದಾಯ ಬಂದಿದೆ.

ಇನ್ನು ಪಶುಪಾಲನಾ ವಿಭಾಗದ ಸಿಬ್ಬಂದಿ ತಿಂಗಳಿಗೆ 40-50 ಬಿಡಾಡಿ ಹಸುಗಳನ್ನು ಹಿಡಿಯುತ್ತಿದ್ದು, ಇದರಿಂದ ವಾರ್ಷಿಕ ಸರಾಸರಿ 3 ಲಕ್ಷ ರೂ. ಹಣ ಪಾಲಿಕೆಗೆ ಸಂದಾಯವಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನಗರದಲ್ಲಿ ಸಂಚರಿಸುವ ಬೀಡಾಡಿ ಹಸುಗಳನ್ನು ಬಿಡಿಸಿಕೊಳ್ಳಲು ಬರುವ ಮಾಲೀಕರಿಗೆ ಪಾಲಿಕೆಯಿಂದ ಪ್ರತಿ ಹಸುವಿಗೆ 600 ರೂ. ದಂಡ ಹಾಕಲಾಗುತ್ತದೆ ಎಂದು ಹೇಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next