Advertisement
ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದ 114 ವಿಧಾನಸಭೆ ಕ್ಷೇತ್ರಗಳನ್ನೊಳಗೊಂಡ ಕರಾವಳಿ ಅಭಿವೃದಿಟಛಿ ಮಂಡಳಿ, ಹೈದರಾಬಾದ್ ಕರ್ನಾಟಕ ಅಭಿವೃದಿಟಛಿ ಮಂಡಳಿ, ಬಯಲು ಸೀಮೆ ಅಭಿವೃದಿಟಛಿ ಮಂಡಳಿ ಹಾಗೂ ಮಲೆನಾಡು ಅಭಿವೃದಿಟಛಿ ಮಂಡಳಿಗಳ ಮೂಲಕ ವರ್ಷಕ್ಕೆ 3 ಸಾವಿರ ಕೋಟಿ ರೂ.ನಂತೆ ಏಳು ವರ್ಷಗಳಲ್ಲಿ 21 ಸಾವಿರ ಕೋಟಿ ರೂ. ವೆಚ್ಚವಾಗಿದೆ. ಆದರೆ, ನಿರೀಕ್ಷಿತ ಸಾಧನೆಯಾಗಿಲ್ಲ ಎಂದು ಹೇಳಿದರು.
ಈ ಕುರಿತು ಆರ್ಥಿಕ ಇಲಾಖೆ ಅಧಿಕಾರಿಗಳ ಜತೆಯೂ ಚರ್ಚಿಸಿದ್ದು ಮುಖ್ಯಮಂತ್ರಿ ಜತೆಗೂ ಸಮಾಲೋಚನೆ ನಡೆಸಿ ಅಗತ್ಯವಾದರೆ ತಿದ್ದುಪಡಿ ತರಲಾಗುವುದು. ವಿಧಾನಮಂಡಲ ಅಧಿವೇಶನದವರೆಗೆ ಕಾಯಬೇಕೋ ಅಥವಾ ಸಂಪುಟ ಸಭೆಯ ಮುಂದಿಟ್ಟು ತೀರ್ಮಾನ ಕೈಗೊಳ್ಳಬೇಕೋ ಎಂಬುದನ್ನು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು. ಡಾ.ಡಿ.ಎಂ.ನಂಜುಂಡಪ್ಪ ವರದಿ ಪ್ರಕಾರ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಹಣ ನೋಡಿದರೆ ಪ್ರತಿ ಕ್ಷೇತ್ರಕ್ಕೆ ವರ್ಷಕ್ಕೆ 30 ಕೋಟಿ ರೂ. ವರೆಗೆ ದೊರೆತಿದೆ. ಆದರೆ, ಸ್ಥಳೀಯ ಶಾಸಕರು ಸಹ ಆ ಅನುದಾನದಡಿ ಅಭಿವೃದಿಟಛಿಯೇ ಆಗಿಲ್ಲ. ಎಲ್ಲ ಇಲಾಖೆಗಳಿಗೂ ಹಂಚಿಕೆಯಾಗಿ ಅದು ಯಾವುದಕ್ಕೂ ಸಾಲದಂತಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಮುಂದಿನ ದಿನಗಳಲ್ಲಾದರೂ ಅಭಿವೃದಿಟಛಿ ಪೂರ್ಣ ಪ್ರಮಾಣದಲ್ಲಿ ಆಗಲು ಅನುದಾನ ಹಂಚಿಕೆಯ ಇಲಾಖೆಗಳನ್ನು ಕಡಿಮೆ ಸಂಖ್ಯೆಗೆ ಇಳಿಸಲಾಗುವುದು ಎಂದು ತಿಳಿಸಿದರು.
Related Articles
Advertisement
ಶಾಸಕರ ಕ್ಷೇತ್ರಾಭಿವೃದಿಟಛಿ ನಿಧಿಯಡಿ 2017-18 ನೇ ಸಾಲಿನಲ್ಲಿ ತಲಾ 50 ಲಕ್ಷ ರೂ. ನೀಡಿದ್ದು, ಅದು ಸಂಪೂರ್ಣವೆಚ್ಚ ಆದ ನಂತರ ಎರಡನೇ ಕಂತಿನಲ್ಲಿ 1 ಕೋಟಿ ರೂ. ಬಿಡುಗಡೆ ಮಾಡಲಾಗುವುದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 7 ಕೋಟಿ ರೂ., ಶಿವಮೊಗ್ಗದಲ್ಲಿ 1.50 ಕೋಟಿ ರೂ. ಹಿಂದಿನ ಅನುದಾನ ವೆಚ್ಚ ಆಗದೆ ಉಳಿದಿದೆ. 2013-14ನೇ ಸಾಲಿನಲ್ಲೂ ಮುಂಚಿನ 20 ಕೋಟಿ ರೂ. ಅನುದಾನ ಬಳಕೆ ಆಗದೆ ಒಟ್ಟಾರೆ ಉಳಿದಿತ್ತು. ಅದನ್ನು ವೆಚ್ಚ ಮಾಡಲು ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.