Advertisement

ಲಕ್ಷಾಂತರ ಆ್ಯಂಡ್ರಾಯ್ಡ್ ಫೋನ್‌ ಗಳಿಗೆ ಅಪಾಯ: Qualcomm chip ನಲ್ಲಿ ಭದ್ರತಾ ದೋಷ !

02:40 PM Aug 08, 2020 | Mithun PG |

ನವದೆಹಲಿ: ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ಗಳಲ್ಲಿ ಬಳಸಲಾಗುವ ಕ್ವಾಲ್ಕಾಮ್‌ ಸ್ನ್ಯಾಪ್  ಡ್ರ್ಯಾಗನ್ ಚಿಪ್ ಜಾಗತಿಕವಾಗಿ 3 ಬಿಲಿಯನ್ ಬಳಕೆದಾರರನ್ನು ಅಪಾಯಕ್ಕೆ ಸಿಲುಕಿಸಿದೆ. ಚೆಕ್‌ ಪಾಯಿಂಟ್ ಭದ್ರತಾ ಸಂಶೋಧಕರು ಕ್ವಾಲ್ಕಾಮ್‌ ನ ಡಿಜಿಟಲ್ ಸಿಗ್ನಲ್ ಪ್ರೊಸೆಸರ್ (ಡಿಎಸ್‌ಪಿ) ಚಿಪ್‌ ಗಳಲ್ಲಿ 400ಕ್ಕೂ ಹೆಚ್ಚು ದೋಷಗಳನ್ನು ಕಂಡುಹಿಡಿದಿದ್ದಾರೆ.

Advertisement

ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಕ್ವಾಲ್ಕಾಮ್ ಚಿಪ್‌ ಗಳನ್ನು 40%ಕ್ಕಿಂತ ಹೆಚ್ಚಾಗಿ ಬಳಸಲಾಗುತ್ತದೆ. ಗೂಗಲ್, ಸ್ಯಾಮ್‌ಸಂಗ್, ಎಲ್ ಜಿ, ಶಿಯೋಮಿ ಮತ್ತು ಹೆಚ್ಚಿನ ಬ್ರಾಂಡ್‌ ಗಳ ಪ್ರೀಮಿಯಂ ಫೋನ್‌ ಗಳು ಇವುಗಳಲ್ಲಿ ಸೇರಿವೆ. ಚೆಕ್ ಪಾಯಿಂಟ್ ಭದ್ರತಾ ಸಂಶೋಧಕರು ಈ  ಚಿಪ್ ಗಳಲ್ಲಿ  400ಕ್ಕೂ ಅಧಿಕ  ದುರ್ಬಲ ಕೋಡ್ ಗಳನ್ನು ಕಂಡುಹಿಡಿದಿದ್ದಾರೆ.

ಈ ಕೋಡ್ ಗಳು ಹ್ಯಾಕರ್ ಗಳಿಗೆ ವರದಾನವಾಗಿದ್ದು ಬಳಕೆದಾರರಿಗೆ ತಿಳಿಯದಂತೆ ಸ್ಮಾರ್ಟ್‌ಫೋನ್ ಡೇಟಾ ಕದಿಯಲು ಮತ್ತು  ಬೇಹುಗಾರಿಕಾ ಸಾಧನವಾಗಿ ಪರಿವರ್ತಿಸಲು  ಅವಕಾಶ ನೀಡುತ್ತದೆ. ಅಂದರೇ ನಿಮ್ಮ ಮೊಬೈಲ್ ನಲ್ಲಿರುವ  ಫೋಟೋಗಳು, ವೀಡಿಯೊಗಳು, ಫೋನ್ ರೆಕಾರ್ಡಿಂಗ್‌ಗಳು, ಲೈವ್ ಸ್ಪೀಕರ್ , ಜಿಪಿಎಸ್ ಮತ್ತು ಲೋಕೇಷನ್  ಸೇರಿದಂತೆ ಎಲ್ಲವೂ ಹ್ಯಾಕರ್ ಗಳ ಪಾಲಾಗುತ್ತದೆ.

ಮಾತ್ರವಲ್ಲದೆ ಹ್ಯಾಕರ್‌ ಗಳು ಸ್ಮಾರ್ಟ್ ಫೋನ್ ಫ್ರೀಜ್ ಮಾಡುವ ಅವಕಾಶವೂ ಇದ್ದು  ಮಾಲ್‌ ವೇರ್ ಮತ್ತು ದುರುದ್ದೇಶಪೂರಿತ ಕೋಡ್ ಅನ್ನು  ಇನ್ ಸ್ಟಾಲ್ ಮಾಡಬಹುದು.

Advertisement

ಈ ಬಗ್ಗೆ ಮಾಹಿತಿ ನೀಡಿದ  ಚೆಕ್‌ ಪಾಯಿಂಟ್ ತಂಡ, ಈಗಾಗಲೇ ಸರ್ಕಾರಕ್ಕೆ ಮಾಹಿತಿ ತಿಳಿಸಲಾಗಿದ್ದು, ಸ್ಮಾರ್ಟ್ ಪೋನ್ ಗಳನ್ನು ಮತ್ತು ಬಳಕೆದಾರರನ್ನು ಸುರಕ್ಷಿತವಾಗಿಸಲು ನಾವು ಈ ಸಂಶೋಧನೆಯೊಂದಿಗೆ ಸಹಕರಿಸಿದ್ದೇವೆ. ಕ್ವಾಲ್ ಕ್ವಾಮ್ ಪ್ರೊಸೆಸ್ಸರ್ ಕಂಪೆನಿಗೂ ಮಾಹಿತಿ ನೀಡಲಾಗಿದ್ದು 6 ದೋಷಗಳನ್ನು ಸರಿಪಡಿಸಿದ್ದಾರೆ. ಸದ್ಯ ಆ್ಯಂಡ್ರಾಯ್ಡ್  ಸ್ಮಾರ್ಟ್ ಫೋನ್ ಗಳು ಸುರಕ್ಷಿತವಾಗಿದೆ ಎಂದಿದ್ದಾರೆ.

ಕ್ವಾಲ್ಕಾಮ್ ಚಿಪ್ ನ  ಭದ್ರತಾ ಲೋಪದೋಷಗಳು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಮೇಲೆ ಮಾತ್ರ ಪರಿಣಾಮ ಬೀರುತ್ತವೆ. ಆ್ಯಪಲ್ ತನ್ನದೇ ಆದ ಚಿಪ್‌ಗಳನ್ನು ಬಳಸುವುದರಿಂದ ಐಫೋನ್‌ ಗಳು ಸುರಕ್ಷಿತವಾಗಿವೆ. ಕ್ವಾಲ್ಕಾಮ್ ಹೊರತುಪಡಿಸಿದರೆ,  ಮೀಡಿಯಾ ಟೆಕ್ ಚಿಪ್‌ ಸೆಟ್‌ಗಳನ್ನು ಹೆಚ್ಚಾಗಿ ಆಂಡ್ರಾಯ್ಡ್ ಫೋನ್‌ ಗಳಲ್ಲಿ ಬಳಸಲಾಗುತ್ತದ!

Advertisement

Udayavani is now on Telegram. Click here to join our channel and stay updated with the latest news.

Next