Advertisement
ಅದರಲ್ಲಿ ಕಡ್ಡಿಯಿಂದ ಹೆಣೆದ ಅಪರೂಪದ ಕಲಾಕುಸುರಿಯನ್ನು ಆ ಶಾಲುಗಳ ಮೇಲೆ ಮೂಡಿಬಂದಿದೆ. ಈ ಶಾಲುಗಳಿಗೆ ವಿದೇಶದಲ್ಲಿ ಕೂಡ ಬೇಡಿಕೆ ಇದೆ. ಈಗ ಈ ಅಪರೂಪದ ಶಾಲುಗಳು ಈಗ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಮಂಗಳವಾರದಿಂದ ಆರಂಭಗೊಂಡ ಒಂದು ತಿಂಗಳ ರಾಷ್ಟ್ರಮಟ್ಟದ ಖಾದಿ ಉತ್ಸವದ ಆಕರ್ಷಣೆಯ ಕೇಂದ್ರಬಿಂದು.
Related Articles
Advertisement
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ (ಎನ್‌ಐಎಫ್ಟಿ)ಯಿಂದ ಫಾರ್ಮಲ್, ಸೆಮಿ ಫಾರ್ಮಲ್ ಪ್ಯಾಂಟು-ಶರ್ಟ್‌ಗಳು, ಲೆಹಂಗಾ-ಚೂಲಿ, ಚಿಂತಾಮಣಿ ಸೇರಿದಂತೆ ಸುತ್ತಲಿನ ರೇಷ್ಮೆ ಸೀರೆಗಳಿವೆ. ರೇಷ್ಮೆ ಉತ್ಪನ್ನಗಳ ಮೇಲೆ ಶೇ. 20ರಷ್ಟು ಹಾಗೂ ಇತರ ಉತ್ಪನ್ನಗಳ ಮೇಲೆ ಶೇ. 35ರಷ್ಟು ರಿಯಾಯ್ತಿ ಕಲ್ಪಿಸಲಾಗಿದೆ.
ಒಂದೇ ಕಡೆ ಎಲ್ಲ ಅಧಿಕೃತವಾದ ದೇಶಿ ಉತ್ಪನ್ನಗಳು ಸಿಗುವ ಉತ್ತಮ ವೇದಿಕೆ ಇದಾಗಿದೆ. ಉತ್ಪಾದಕರಿಗೆ ನೇರವಾಗಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದ್ದು ಒಳ್ಳೆಯ ಬೆಳವಣಿಗೆ. ಆದರೆ, ಶ್ರೀಗಂಧದ ಉತ್ಪನ್ನಗಳು ಕಡಿಮೆ ಇವೆ. ಹಾಗೂ ಸಾಕಷ್ಟು ಕರಕುಶಲಕರ್ಮಿಗಳು ನಮ್ಮಲ್ಲಿದ್ದಾರೆ. ಅವರಿಗೆ ಇನ್ನಷ್ಟು ವೇದಿಕೆ ಸಿಗಬೇಕಿತ್ತು.-ಗೋಪಿನಾಥ್, ಅನಿವಾಸಿ ಭಾರತೀಯ (ಕೆನಡಾ). ಸಾಕಷ್ಟು ಆಯ್ಕೆಗಳು ಇಲ್ಲಿವೆ. 20 ಸಾವಿರಕ್ಕೂ ಹೆಚ್ಚು ಮೊತ್ತದ ಉತ್ಪನ್ನಗಳನ್ನು ನಾನು ಖರೀದಿಸಿದೆ. ಮಧ್ಯವರ್ತಿಗಳ ಹಾವಳಿ ಇಲ್ಲದ್ದರಿಂದ ಉತ್ಪಾದಕರಿಗೂ ಇದು ಒಳ್ಳೆಯ ವೇದಿಕೆ. ಇಂತಹ ಉತ್ಸವಗಳು ಆಗಾಗ್ಗೆ ನಡೆಯಬೇಕು.
-ಡಾ.ಶ್ರೀನಿವಾಸ್, ಬನಶಂಕರಿ ನಿವಾಸಿ. ಮೊದಲ ದಿನ ಐದು ಸಾವಿರ ಜನ ಭೇಟಿ ನೀಡಿರುವ ಸಾಧ್ಯತೆ ಇದೆ. ಒಂದು ತಿಂಗಳಲ್ಲಿ 2 ಲಕ್ಷ ಜನ ಭೇಟಿ ನೀಡುವ ನಿರೀಕ್ಷೆ ಇದ್ದು, 40 ಕೋಟಿ ವಹಿವಾಟು ನಡೆಯಬಹುದು. ಸರ್ಕಾರಿ ರಜೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಫ್ಯಾಷನ್ ಶೋ ಕೂಡ ಏರ್ಪಡಿಸಲಾಗಿದೆ. 208 ಮಳಿಗೆಗಳನ್ನು ತೆರೆಯಲಾಗಿದೆ.
-ಜಯವಿಭವ ಸ್ವಾಮಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ. 30 ಪಂಚೆ ಆರ್ಡರ್ ಮಾಡಿದ ಸಿಎಂ: ಖಾದಿ ಉತ್ಸವದಲ್ಲಿ ಮಳಿಗೆಗಳ ವೀಕ್ಷಣೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಳಿಗೆಯೊಂದರಲ್ಲಿ ಭರ್ಜರಿ ವ್ಯಾಪಾರ ಮಾಡಿದರು. “ಹರಿಹರ ಚರಕ’ ಎಂಬ ಮಳಿಗೆಯಲ್ಲಿ 30 ಪಂಚೆಗಳಿಗೆ ಮುಖ್ಯಮಂತ್ರಿ ಆರ್ಡರ್ ಮಾಡಿದರು. ಜತೆಗಿದ್ದ ಬೆಂಬಲಿಗರಿಗೆ ಮನೆಗೆ ಬಿಲ್ ಕಳಿಸುವಂತೆಯೂ ಹೇಳಿದರು. ತಲಾ ಒಂದು ಪಂಚೆಗೆ 585 ರೂ. ಆಗಲಿದ್ದು, ಸಿಎಂ ಸುಮಾರು 17,500 ರೂ. ವ್ಯಾಪಾರ ಮಾಡಿದರು. ನಂತರ “ಹರಿಹರ ಚರಕ’ದ ಎಂ.ಎಸ್. ರಮೇಶ್, ಸ್ವತಃ ಮುಖ್ಯಮಂತ್ರಿಗಳು ನನ್ನ ಅಂಗಡಿಯಲ್ಲಿ ವ್ಯಾಪಾರ ಮಾಡಿದ್ದು ಖುಷಿ ಆಯಿತು. 30 ಪಂಚೆ ಆರ್ಡರ್ ಮಾಡಿಹೋದರು ಎಂದು ಹೇಳಿದರು. * ವಿಜಯಕುಮಾರ್ ಚಂದರಗಿ