Advertisement

ಬಂಗಾರಪೇಟೆ: ರಾಗಿ ಮಾರಾಟಕ್ಕೆ ರೈತರು ಉತ್ಸುಕ

02:38 PM Feb 16, 2022 | Team Udayavani |

ಬಂಗಾರಪೇಟೆ: ಹಲವು ಗೊಂದಲಗಳ ನಡುವೆ ತಿಂಗಳ ನಂತರ ಬೆಂಬಲಯೋಜನೆ ಅಡಿ ರೈತರಿಂದ ರಾಗಿ ಖರೀದಿ ಕಾರ್ಯ ಆರಂಭ ವಾಗಿದೆ. ಇದಕ್ಕೆ ತಾಲೂಕಿನಲ್ಲಿಉತ್ತಮ ಪ್ರತಿ ಕ್ರಿಯೆ ವ್ಯಕ್ತವಾಗಿದ್ದು, ಟೋಕನ್‌ ಪಡೆಯಲು ನೂಕು ನುಗ್ಗಲು ಕಂಡು ಬರುತ್ತಿದೆ.

Advertisement

ಪಟ್ಟಣ ಹೊರವಲಯದ ಸೂಲಿಕುಂಟೆ ರಸ್ತೆಯಲ್ಲಿರುವ ಕೆಸಿಎಸ್‌ಎಫ್ಸಿ ಗೋದಾಮಿ ನಲ್ಲಿ ರಾಗಿ ಮಾರಾಟಕ್ಕೆ ಅವಕಾಶ ನೀಡಿದ್ದು,ಮೂರು ದಿನಗಳಲ್ಲಿ 2,000 ಕ್ವಿಂಟಲ್‌ರಾಗಿಯನ್ನು ಸರ್ಕಾರ ಖರೀದಿ ಮಾಡಿದೆ. ಒಟ್ಟು 37,199 ಕ್ವಿಂಟಲ್‌ ರಾಗಿ ಮಾರಾಟಕ್ಕೆ 2,567 ರೈತರು ನೋಂದಣಿ ಮಾಡಿಕೊಂಡಿದ್ದಾರೆ.

ಹೆಚ್ಚು ರಾಗಿ ಬೆಳೆದವರಿಗೆ ನಿರಾಶೆ: ಸರ್ಕಾರ ಪ್ರತಿ ಕ್ವಿಂಟಲ್‌ ರಾಗಿಗೆ ಕಳೆದ ವರ್ಷ 3,295ರೂ. ದರ ನಿಗದಿ ಮಾಡಿತ್ತು. ಈ ವರ್ಷ 3,377 ರೂ.ಗೆ ಏರಿಕೆ ಮಾಡಿರುವುದು ಬೆಳೆಗಾರರಲ್ಲಿ ಸಂಸದ ತಂದಿದೆ. ಆದರೆ, ಪ್ರತಿಎಕರೆಗೆ 10 ಕ್ವಿಂಟಲ್‌ನಂತೆ ಗರಿಷ್ಠ 20ಕ್ವಿಂಟಲ್‌ವರೆಗೆ ಮಾತ್ರ ರಾಗಿ ಖರೀದಿಮಾಡುತ್ತಿರುವುದು ಹೆಚ್ಚು ರಾಗಿ ಬೆಳೆದರೈತರಿಗೆ ನಿರಾಶೆಯಾಗಿದೆ. ಕಳೆದ ಸಾಲಿನಲ್ಲಿಪ್ರತಿ ರೈತರಿಂದ ಐದು ಎಕರೆಗೆ ಗರಿಷ್ಠ 50 ಕ್ವಿಂಟಲ್‌ ರಾಗಿ ಮಾರಾಟ ಮಾಡಲು ಅವಕಾಶ ನೀಡಲಾಗಿತ್ತು.

ಅಲೆದಾಡುವ ಕೆಲಸ ತಪ್ಪಿಲ್ಲ: ಸಮೀಕ್ಷೆ ವೇಳೆ ರೈತರ ಬಹಳಷ್ಟು ಬೆಳೆಯನ್ನು ಸರಿಯಾಗಿನಮೂದಿಸದ ಕಾರಣ ರಾಗಿ ಮಾರಾಟ ನೋಂದಾಯಿಸಲು ಸಾಧ್ಯವಾಗಿಲ್ಲ. ಕಚೇರಿ ಗಳಿಗೆ ಅಲೆದಾಡುವ ಕೆಲಸ ತಪ್ಪಿಲ್ಲ. ರೈತರಿಂದರಾಗಿ ಖರೀದಿಸಲು ಜಾರಿಗೆ ತಂದಿರುವನಿಯಮಗಳನ್ನು ಸಡಿಲಗೊಳಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಫೆ.11ರಿಂದಲೇ ಬೆಂಬಲಯೋಜನೆಯಡಿರೈತರಿಂದ ರಾಗಿಖರೀದಿ ಮಾಡಲಾಗುತ್ತಿದೆ. ಈಗಾಗಲೇ ನೋಂದಣಿಮಾಡಿಕೊಂಡಿರುವ ರೈತರಿಗೆಜನಸಂದಣಿ ಇಲ್ಲದೇ, ಸುಗಮವಾಗಿಖರೀದಿ ಕಾರ್ಯ ನಡೆ ಸಲು ಪ್ರತಿದಿನ 40ರಿಂದ 50 ರೈತರಿಗೆ ಟೋಕನ್‌ ನೀಡಲಾಗುತ್ತಿದೆ. ಪ್ರತಿ ದಿನ 600 ರಿಂದ700 ಕ್ವಿಂಟಲ್‌ ಖರೀದಿ ಮಾಡಲಾಗುತ್ತಿದೆ. ಹಣ ನೇರ ರೈತರ ಬ್ಯಾಂಕ್‌ಖಾತೆಗೆ ಜಮೆ ಮಾಡಲಾಗುತ್ತದೆ. ಖಲೀಮ್ಮುಲ್ಲಾ ಖಾನ್‌,ವ್ಯವಸ್ಥಾಪಕ, ಕೆಸಿಎಸ್‌ಎಫ್ಸಿ ಗೋಡೌನ್‌, ಬಂಗಾರಪೇಟೆ

Advertisement
Advertisement

Udayavani is now on Telegram. Click here to join our channel and stay updated with the latest news.

Next