Advertisement

ಹಾಲು-ಅನ್ನ ಕೊಡುವವರು ಹಾಲಕ್ಕಿಗರು: ಸುಕ್ರಿಬೊಮ್ಮಗೌಡ

08:15 AM Feb 27, 2018 | Harsha Rao |

ಕುಂದಾಪುರ: ಹಾಲು ಅನ್ನ ಕೊಡುವವರೇ ಹಾಲಕ್ಕಿಗಳು. ಬಡತನವಾದರೂ ಪರವಾಗಿಲ್ಲ ಹಾಲು ಹಾಗೂ ಅನ್ನಕ್ಕೆ ಕೊರತೆಯಾಗಬಾರದು ಎನ್ನುವುದು ಬುಡಕಟ್ಟು ಜನರ ಪದ್ಧತಿ. ಈ ಬುಡಕಟ್ಟು ಸಮುದಾಯವಿಲ್ಲದೆ ನಾಡಿನ ಅಭಿವೃದ್ಧಿ ಅಸಾಧ್ಯ ಎಂದು ಪದ್ಮಶ್ರೀ, ನಾಡೋಜ ಪ್ರಶಸ್ತಿ ಪುರಸ್ಕೃತ ಜಾನಪದ ಹಾಡುಗಾರ್ತಿ, ಹಾಲಕ್ಕಿ ಒಕ್ಕಲಿಗ ಸಮುದಾಯದ ಸುಕ್ರಿ ಬೊಮ್ಮಗೌಡ ಹೇಳಿದರು.

Advertisement

ಅವರು ಸೋಮವಾರ ಭಂಡಾರ್‌ಕಾರ್ ಕಾಲೇಜಿನಲ್ಲಿ ಮಣಿಪಾಲ ಅಕಾಡೆಮಿ ಆಫ್‌ ಜನರಲ್‌ ಎಜುಕೇಶನ್‌ನ ವಜ್ರ ಮಹೋತ್ಸವ ಹಾಗೂ ಮಣಿಪಾಲ ವಿಶ್ವವಿದ್ಯಾಲಯದ ಬೆಳ್ಳಿಹಬ್ಬ ಹಾಗೂ ಭಂಡಾರ್‌ಕಾರ್ ಕಾಲೇಜಿನ 55ನೇ ವರ್ಷಾಚರಣೆ ಪ್ರಯುಕ್ತ ನಡೆಯುತ್ತಿರುವ “ಕರಾವಳಿ ಕರ್ನಾಟಕದ ಬುಡಕಟ್ಟುಗಳು ಹಾಗೂ ವರ್ತಮಾನ’ ಕುರಿತ ಎರಡು ದಿನಗಳ ರಾಜ್ಯಮಟ್ಟದ ವಿಚಾರ ಸಂಕಿರಣ ಹಾಗೂ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷೆಯಾಗಿ ಮಾತನಾಡಿದರು.

ಪ್ರಪಂಚದಲ್ಲಿ ಗಂಡು ಅಥವಾ ಹೆಣ್ಣಲ್ಲಿ ಯಾರು ಮಿಗಿಲು ಎನ್ನುವಾಗ ಹೆಣ್ಣೇ ಮಿಗಿಲು. ಪ್ರಪಂಚದಲ್ಲಿ ಹೆಣ್ಣಿನ ಸ್ಥಾನವೇ ದೊಡ್ಡದು. ಇಡೀ ಜಗತ್ತಿಗೆ ಹಾಲು ಅನ್ನ ಕೊಡುವವಳು ಮಹಾತಾಯಿ, ಜಗನ್ಮಾತೆ ಪಾರ್ವತಿ. ದೇಶ ಒಳ್ಳೆಯದಾಗಿ ಸುಸ್ಥಿತಿ ಯಲ್ಲಿಡುವುದಕ್ಕೆ ಪಾರ್ವತಿಯನ್ನು ಸುಖೀಯಾಗಿ ಇರಿಸಬೇಕು. ಇಂತಹ ಒಳ್ಳೆಯ ಸಂಸ್ಥೆಯಲ್ಲಿ ಬುಡಕಟ್ಟು ಜನರ ಏಳ್ಗೆಗೋಸ್ಕರ ಒಳ್ಳೆಯ ಕಾರ್ಯಕ್ರಮ ನಡೆಯುತ್ತಿರುವುದು ಸಂತಸವಾಗಿದೆ. ಇಲ್ಲಿ ಡಾಕ್ಟರುಗಳಿದ್ದಾರೆ. ಅವರೆಲ್ಲ ಸೇರಿ ಉತ್ತರ ಕನ್ನಡ ಜಿಲ್ಲೆಯಲ್ಲೊಂದು ಒಳ್ಳೆಯ ಆಸ್ಪತ್ರೆಯನ್ನು ತೆರೆಯಲಿ ಎನ್ನುವುದು ನನ್ನ ಆಸೆ ಎಂದವರು ಹೇಳಿದರು.

ಇದೇ ವೇಳೆ ಸುಕ್ರಿಬೊಮ್ಮ ಗೌಡ ಅವರನ್ನು ಸಮ್ಮಾನಿಸ ಲಾಯಿತು. ಸಮ್ಮೇಳನವನ್ನು ಭತ್ತದ ತೆನೆಗೆ ಹಾಲೆರೆದು, ಗುಮ್ಮಟೆ ಬಾರಿಸಿ ಉದ್ಘಾಟಿಸಿದ ಮಣಿಪಾಲ ವಿ.ವಿ.ಯ ಸಹ ಕುಲಾ ಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌ ಮಾತನಾಡಿ, ಬುಡಕಟ್ಟು ಸಮುದಾಯಗಳಿಗೆ ಅನುಕಂಪ, ಕರುಣೆ ಬೇಡ. ಅವಕಾಶ ಗಳನ್ನು ನೀಡಬೇಕು. ಎಲ್ಲಕ್ಕೂ ಮುಖ್ಯವಾಗಿ ಮೂಲ ಸೌಕರ್ಯಗಳನ್ನು ಒದಗಿಸಿಕೊಡಬೇಕು.

ಪರಿಸರ ನಾಶ ದಿಂದಾಗಿ ಗ್ಲೋಬಲ್‌ ವಾರ್ಮಿಂಗ್‌ ಹೆಚ್ಚುತ್ತಿದ್ದು, ವಾತಾ ವರಣದ ಉಷ್ಣತೆ ಏರಿಕೆಯಾಗುತ್ತಿದೆ. ಪ್ರಕೃತಿಯ ರಕ್ಷಣೆ ಎಲ್ಲರ ಕರ್ತವ್ಯ. ಆದರೆ ಅದೇ ಬುಡಕಟ್ಟು ಸಮುದಾಯವು ತಮ್ಮ ಬದುಕಿನ ಉಸಿರಾದ ನಮ್ಮ ಕಾಡು, ನೆಲ-ಜಲವನ್ನು ಉಳಿಸಿ ಬೆಳೆಸಿ ಅದರಲ್ಲೇ ತಮ್ಮ ಸಂಸ್ಕೃತಿಯನ್ನು ಮತ್ತು ಬದುಕನ್ನು ಕಟ್ಟಿಕೊಳ್ಳುತ್ತಾರೆ. ಜಗತ್ತಿನ ಸಂರಕ್ಷಣೆಗೆ ಬದ್ಧರಾಗಿದ್ದಾರೆ. ಇದು ಎಲ್ಲರಿಗೂ ಮಾದರಿ ಎಂದರು.

Advertisement

ಕನ್ನಡ ವಿಭಾಗದ ಮುಖ್ಯಸ್ಥೆ ಡಾ| ರೇಖಾ ಬನ್ನಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಕಾಡೆಮಿ ಆಫ್‌ ಜನರಲ್‌ ಎಜುಕೇಶನ್‌ನ ಆಡಳಿತಾಧಿ ಕಾರಿ ಡಾ| ಎಚ್‌. ಶಾಂತಾರಾಮ್‌ ಅಧ್ಯಕ್ಷತೆ ವಹಿಸಿದ್ದರು.
ಹಂಪಿ ಕನ್ನಡ ವಿ.ವಿ.ಯ ವಿಶ್ರಾಂತ ಕುಲಪತಿ ಡಾ| ಹಿ.ಚಿ. ಬೋರಲಿಂಗಯ್ಯ, ಭಂಡಾರ್‌ಕಾರ್ ಪ. ಪೂ. ಕಾಲೇಜಿನ ಪ್ರಾಂಶುಪಾಲ ಡಾ| ಜಿ.ಎಂ. ಗೊಂಡ, ಟ್ರಸ್ಟಿ ದೇವದಾಸ್‌ ಕಾಮತ್‌ ಉಪಸ್ಥಿತರಿದ್ದರು.

ಭಂಡಾರ್‌ಕಾರ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ| ಎನ್‌.ಪಿ. ನಾರಾಯಣ ಶೆಟ್ಟಿ ಸ್ವಾಗತಿಸಿದರು. ಸಮ್ಮೇಳನದ ಸಂಚಾಲಕ ಡಾ| ಶುಭಕರಾಚಾರಿ ವಂದಿಸಿದರು. ಉಪನ್ಯಾಸಕಿ ರೋಹಿಣಿ ಎಚ್‌. ಕಾರ್ಯಕ್ರಮ ನಿರೂಪಿಸಿದರು.

ಮುಖ್ಯವಾಹಿನಿಗೆ ತರಲು ಪ್ರಯತ್ನಿಸೋಣ
ಆದರ್ಶಯುತವಾದ ಈ ಬುಡಕಟ್ಟು ಸಮುದಾಯಕ್ಕೆ ನಮ್ಮಿಂದಾದ ಸಹಾಯ ಮಾಡೋಣ. ಅವರನ್ನು ಮುಖ್ಯ ವಾಹಿನಿಗೆ ತರಲು ಪ್ರಯತ್ನಿಸಬೇಕು. ಎಲ್ಲದಕ್ಕೂ ಸರಕಾರ ವನ್ನೇ ನಂಬಿ ಕುಳಿತುಕೊಳ್ಳಬಾರದು. ಮಣಿಪಾಲ ಆಸ್ಪತ್ರೆಯ ಮೂಲಕ ಅವರಿಗೆ ಆರೋಗ್ಯ ಕ್ಷೇತ್ರದಲ್ಲಿ ಸಹಾಯ ಮಾಡು ತ್ತಿದ್ದೇವೆ. ಹಾಗೂ ಅದು ನಮ್ಮ ಹೊಣೆ ಗಾರಿಕೆಯೂ ಆಗಿದೆ. 2020ಕ್ಕೆ ಮುಂದುವರಿದ ದೇಶ ವಾಗಲು ಬುಡಕಟ್ಟು, ಹಿಂದುಳಿದ ವರ್ಗದ ಜನರಿಗೆ ಆರೋಗ್ಯ, ಶಿಕ್ಷಣ, ಉದ್ಯೋಗ ಕ್ಷೇತ್ರದಲ್ಲಿ  ಸಹಾಯ ಮಾಡೋಣ.
 – ಡಾ| ಎಚ್‌. ಎಸ್‌. ಬಲ್ಲಾಳ್‌ ಮಣಿಪಾಲ ವಿ.ವಿ. ಸಹಕುಲಾಧಿಪತಿ

Advertisement

Udayavani is now on Telegram. Click here to join our channel and stay updated with the latest news.

Next