Advertisement
ನಮ್ಮೆದುರು ಯೋಧನೋರ್ವ ಹೋಗುವಾಗ ಒಮ್ಮೆಗೆ ಕತ್ತೆತ್ತಿ ನೋಡುತ್ತೇವೆ. ಎಲ್ಲರನ್ನೂ ಸೆಳೆಯುವುದರೊಂದಿಗೆ ಹೆಮ್ಮೆಯನ್ನೂ ಮೂಡಿಸುವ ಏಕೈಕ ದಿರಿಸು ಇದು.
ಇವುಗಳು ಅತ್ಯಂತ ಆರಾಮದಾಯಕ ದಿರಿಸಾಗಿರುವುದರಿಂದ ಸರ್ವಋತುವಿಗೂ ಸೂಕ್ತವೆನಿಸುತ್ತದೆ. ಬಿಸಿಲ ರಕ್ಷಣೆಗೆ ಕ್ಯಾಪ್ ಇರುವಂತ ಜಾಕೆಟ್‌ಗಳೂ ಮಾರುಕಟ್ಟೆಯಲ್ಲಿ ಲಭ್ಯ.
Related Articles
ಪೂರ್ತಿ ತೋಳು, ಅರ್ಧ ತೋಳು ಮತ್ತು ತೋಳಿಲ್ಲದ ವಿನ್ಯಾಸಗಳ ಮಿಲಿಟರಿ ಟಿ ಶರ್ಟ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಮುಂಜಾನೆ ಜಾಗಿಂಗ್ ಅಥವಾ ಆಡುವಾಗ ಇವುಗಳನ್ನು ಧರಿಸಿ ಖುಷಿ ಪಡಬಹುದು. ಇವುಗಳು ಸೂರ್ಯನ ಬೆಳಕನ್ನು ಬೇಗನೆ ಹೀರದೆ ಇರುವುದರಿಂದ ದೇಹವೂ ಬೇಗನೆ ಬೆವರದೆ ತಂಪಾಗಿರುತ್ತದೆ.
Advertisement
ಶರ್ಟ್ಗಳುಈ ಮಾದರಿಯ ಶರ್ಟ್‌ಗಳು ವಿವಿಧ ಬಣ್ಣಗಳಲ್ಲಿ ಲಭಿಸುತ್ತದೆ. ಮಾಮೂಲಿಯಾಗಿ ಬಟನ್‌ಗಳು ದೊಡ್ಡದಿರುವ ಇಂತಹ ಶರ್ಟ್‌ಗಳಲ್ಲಿ ಮಿಲಿಟರಿ ಬ್ಯಾಜ್‌ಗಳ ವಿನ್ಯಾಸಗಳು ಸಾಮಾನ್ಯ. ಇದು ಖಡಕ್ ಲುಕ್ ನೀಡುವುದರೊಂದಿಗೆ ಎಲ್ಲರಿಗೂ ಹಿಡಿಸುವಂತಿರುತ್ತದೆ. ……….
ಜೀನ್ಸ್ ಇರಲಿ, ಬ್ಲೂ ಜೀನ್ಸೇ ಇರಲಿ, ಇಲ್ಲ ಫಾರ್ಮಲ್ ಫ್ಯಾಂಟ್‌ಗಳೇ ಇರಲಿ. ಈ ಮಿಲಿಟರಿ ದಿರಿಸುಗಳು ಅದಕ್ಕೆ ನಿಸ್ಸಂದೇಹವಾಗಿ ಹೊಂದಿಕೆಯಾಗುತ್ತದೆ. ಇಷ್ಟಪಡಲು 5 ಕಾರಣ
1. ಎಲ್ಲ ಕಾಲಕ್ಕೂ ಸೂಕ್ತವಾಗಿರುತ್ತದೆ.
2. ಇವುಗಳ ಬಣ್ಣ ಹೋಗುವುದಿಲ್ಲ. ಹೋದರೂ ಅಡ್ಡಿ ಇಲ್ಲ.
3. ವಾಷ್ ಮಾಡಿ ಆದ ಮೇಲೂ ಕಲೆಗಳುಳಿದರೂ ಉಡುಪಿನ ಅಂದಗೆಡುವುದಿಲ್ಲ.
4. ಎಲ್ಲ ಬಣ್ಣಗಳ ಪ್ಯಾಂಟ್‌ಗಳಿಗೂ ಸುಲಭವಾಗಿ ಹೊಂದಿಕೆಯಾಗುತ್ತದೆ.
5. ಪ್ಯಾಂಟ್‌ಗಳೊಂದಿಗೆ ಮ್ಯಾಚಿಂಗ್ ಸುಲಭ.