Advertisement

ಟಿಬೆಟ್‌ ಪ್ರಾಂತ್ಯದಲ್ಲಿ ಸೇನೆ ಜಮಾವಣೆ

07:00 AM Apr 01, 2018 | Team Udayavani |

ಹೊಸದಿಲ್ಲಿ: ಟಿಬೆಟ್‌ ಪ್ರಾಂತ್ಯದಲ್ಲಿ ಚೀನ ಸರಕಾರ, ತನ್ನ ಸೇನೆಯನ್ನು ಗಣನೀಯವಾಗಿ ಜಮಾವಣೆ ಮಾಡಿರುವ ಹಿನ್ನೆಲೆಯಲ್ಲಿ, ಭಾರತವೂ ತನ್ನ ಸೈನಿಕರನ್ನು ಆ ಪ್ರಾಂತ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆಗೊಳಿಸಿದೆ. ಕಳೆದ ವರ್ಷ ಅರುಣಾಚಲ ಪ್ರದೇಶದ ಡೋಕ್ಲಾಂನಲ್ಲಿ ಆಗಿದ್ದ ಉಭಯ ದೇಶಗಳ ಸೇನೆಯ ಜಮಾವಣೆ ಮಾದರಿಯಲ್ಲೇ ಇಲ್ಲೂ ಹೊಸ ಆತಂಕ ಸೃಷ್ಟಿಯಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

Advertisement

ಇದರ ಜತೆಗೆ, ಡಿಬಾಂಗ್‌, ದೌ-ದೆಲೈ, ಲೋಹಿತ್‌ ಕಣಿವೆಗಳ ಬಳಿಯಲ್ಲಿ ಹಾದು ಹೋಗುವ ಚೀನ ಗಡಿ ರೇಖೆಯ ಮೇಲೆ ಹದ್ದಿನ ಕಣ್ಣಿಟ್ಟಿರುವ ಭಾರತೀಯ ಸೈನಿಕರು, ಅಲ್ಲಿ ಹಗಲು-ರಾತ್ರಿ ಪಹರೆ ನಡೆಸಲಾರಂಭಿಸಿದ್ದಾರೆ. ಕಡಿದಾಗಿರುವ ಮತ್ತು ಹಿಮಚ್ಛಾದಿತ ಪರ್ವತ ಶ್ರೇಣಿಗಳ ನಡುವೆ, ಸುಮಾರು 17,000 ಅಡಿ ಎತ್ತರದಲ್ಲಿ ನದಿಗಳು ಹಾದು ಹೋಗುವಂಥ ದುರ್ಗಮ ಬೆಟ್ಟ ಗುಡ್ಡಗಳಲ್ಲಿ ಲಾಂಗ್‌ ರೇಂಜ್‌ ಗಸ್ತು (ಎಲ್‌ಆರ್‌ಪಿ) ನಡೆಸಲು ಆದೇಶಿಸಲಾಗಿದೆ.

 ಕಳೆದ ಹಲವಾರು ದಿನಗಳಿಂದ ಟಿಬೆಟ್‌ ಪ್ರಾಂತ್ಯದಲ್ಲಿ ಚೀನ ಸೈನಿಕರು ಹಲವಾರು ನಿರ್ಮಾಣ ಕಾಮಗಾರಿ ನಡೆಸುತ್ತಿರುವುದೇ ಭಾರತೀಯ ಸೇನೆಯು ಆ ಪ್ರಾಂತ್ಯದ ಮೇಲೆ ಕಣ್ಣಿಡಲು ಕಾರಣ. ಡಿಬಾಂಗ್‌, ದೌ-ದೆಲೈ, ಲೋಹಿತ್‌ ಕಣಿವೆಗಳಲ್ಲಿನ ಬಿಗಿ ಪಹರೆಯ ಜತೆಗೆ, ಕಿಬಿತು ಪ್ರಾಂತ್ಯದ ಕಣಿವೆಯಲ್ಲಿ ಹಗ್ಗದ ಸೇತುವೆ ನಿರ್ಮಾಣ ಮಾಡುವ ಮೂಲಕ ಅಲ್ಲಿಯೂ ಸೈನಿಕರ ಓಡಾಡಕ್ಕೆ ಸೇನೆ ಅನುಕೂಲ ಕಲ್ಪಿಸಿದೆ. 

ರಕ್ಷಣಾ ಸಚಿವರ ರಷ್ಯಾ ಭೇಟಿ: ಏ. 3ರಿಂದ 5ರವರೆಗೆ ನಡೆಯಲಿರುವ “7ನೇ ಮಾಸ್ಕೋ ಸಮ್ಮೇಳನ’ದಲ್ಲಿ ಪಾಲ್ಗೊಳ್ಳಲು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ರಷ್ಯಾಗೆ ತೆರಳಲಿದ್ದಾರೆ. ಅಂತಾರಾಷ್ಟ್ರೀಯ ಸುರಕ್ಷತೆ ವಿಚಾರ ಸಂಬಂಧ ಈ ಸಮ್ಮೇಳನ ಆಯೋಜಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next