Advertisement

ಕಾಶ್ಮೀರದಲ್ಲಿ ಉಗ್ರರ ಸಂಖ್ಯೆ ಇಳಿಮುಖ

10:03 AM Feb 11, 2020 | sudhir |

ಶ್ರೀನಗರ: ಜಮ್ಮು-ಕಾಶ್ಮೀರಕ್ಕೆ ಇದ್ದ 370ನೇ ವಿಧಿ ರದ್ದು ಮಾಡಿದ ಮೇಲೆ ಅಲ್ಲಿ ಉಗ್ರಗಾಮಿ ಸಂಘಟನೆಗೆ ಸೇರುವ ಯುವಕರ ಸಂಖ್ಯೆಯಲ್ಲಿ ಇಳಿಮುಖವಾಗಿದೆ.
ಈ ಸಂಬಂಧ ಭದ್ರತಾ ಪಡೆಗಳು ತಯಾರಿಸಿರುವ ವರದಿಯಲ್ಲಿ ಉಲ್ಲೇಖವಾಗಿದೆ. ಕಳೆದ ಆಗಸ್ಟ್‌ನಿಂದ ಇಲ್ಲಿಯವರೆಗೆ ಪ್ರತಿ ತಿಂಗಳು 5 ಯುವಕರು ಉಗ್ರಗಾಮಿ ಸಂಘಟನೆಗೆ ಸೇರುತ್ತಿದ್ದಾರೆ. ಆದರೆ ಕಳೆದ ವರ್ಷಗಳಿಗೆ ಹೋಲಿಕೆ ಮಾಡಿದರೆ ಇದು ತೀರಾ ಕಡಿಮೆ. ಆಗ ಪ್ರತಿ ತಿಂಗಳು ಸರಾಸರಿಯಾಗಿ 14 ಯುವಕರು ಸೇರುತ್ತಿದ್ದರು. ಆಗಸ್ಟ್‌ 5ಕ್ಕೂ ಮುನ್ನ ಉಗ್ರಗಾಮಿಯೊಬ್ಬ ಹತ್ಯೆಯಾದ ತತ್‌ಕ್ಷಣ ಆತನ ಅಂತ್ಯಕ್ರಿಯೆಗಾಗಿ ಜನ ಸೇರುತ್ತಿದ್ದರು. ಈ ವೇಳೆಯೇ ಯುವಕರು ಉಗ್ರಗಾಮಿ ಸಂಘಟನೆಗೆ ಸೇರುತ್ತಿದ್ದರು. ಆದರೆ ಆ.5ರ ಅನಂತರ ನಿರ್ಬಂಧ ವಿಧಿಸಿದ್ದರಿಂದಾಗಿ ಉಗ್ರಗಾಮಿ ಸಂಘಟನೆಗಳತ್ತ ಹೋಗಿಲ್ಲ ಎಂದು ಈ ವರದಿ ವಿವರಿಸಿದೆ. ಇದಷ್ಟೇ ಅಲ್ಲ, ಅಲ್ಲಿ ದೂರವಾಣಿ ಸಂಪರ್ಕ ಸ್ಥಗಿತ ಮಾಡಿದ್ದರಿಂದಲೂ ಉಗ್ರಗಾಮಿ ಸಂಘಟನೆಗಳಿಗೆ ಯುವಕರ ಜತೆ ಸಂಪರ್ಕ ಸಾಧಿಸಲು ಸಾಧ್ಯವಾಗಿಲ್ಲ ಎಂದು ಈ ವರದಿ ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next