Advertisement
ರಾಜ್ಯದಲ್ಲಿ ಇವತ್ತು ಸಂಭವಿಸಿರುವುದ ಲಘು ಭೂಕಂಪನ. ಇಂದಿನ ಭೂಕಂಪ ಮಾಪನ ಕೇಂದ್ರದಲ್ಲಿ ದಾಖಲಾಗಿಲ್ಲ. ರಿಕ್ಷರ್ ಮಾಪಕದಲ್ಲಿ 1ಕ್ಕಿಂತ ಕಡಿಮೆ ತೀವ್ರತೆ ದಾಖಲಾಗಲ್ಲ. 2ನೇ ತಾರೀಕು ನಡೆದ ಭೂಕಂಪ ದಾಖಲಾಗಿದೆ. ಭೂಕಂಪ ವಲಯ 2 ಮತ್ತು 3ರ ವಲಯದಲ್ಲಿ ಮಾತ್ರ ಇದೆ. ಹಾಗಾಗಿ ರಾಜ್ಯದಲ್ಲಿ 5ಕ್ಕಿಂತ ಹೆಚ್ಚು ತೀವ್ರತೆಯ ಭೂಕಂಪನ ಸಂಭವಿಸಲ್ಲ ಎಂದು ಭೂಗರ್ಭ ಮಾಪನ ಇಲಾಖೆ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತ ಮಾಹಿತಿ ನೀಡಿದ್ದಾರೆ.
ಅರ್ಕಾವತಿ ನದಿ ಪ್ರದೇಶದಲ್ಲಿ ಲಘು ಭೂಕಂಪನ ಸಂಭವಿಸಿದ್ದು, ಬೆಂಗಳೂರಿನ ಭೂಕಂಪನಕ್ಕೂ, ರಿಯಲ್ ಎಸ್ಟೇಟ್ ಗೂ ಸಂಬಂಧ ಇದೆಯಾ ಎಂಬ ಪ್ರಶ್ನೆ ಹರಿದಾಡತೊಡಗಿದೆ. ರಿಯಲ್ ಎಸ್ಟೇಟ್ ಮಾಫಿಯಾದಿಂದಾಗಿ ಅರ್ಕಾವತಿ ಪ್ರದೇಶ ವೀಕ್ ಝೋನ್ ಆಗಿದೆ ಎಂದು ಹೇಳಲಾಗುತ್ತಿದೆ.