Advertisement

ಮಿಲನಾ ಈಗ ‘ಮಿಲಿ’: ಸ್ವಿಮ್ಮಿಂಗ್‌ ಸುತ್ತ ಸಿನಿಮಾ

08:42 AM Mar 28, 2021 | Team Udayavani |

ನಟಿ ಮಿಲನಾ ನಾಗರಾಜ್‌ ಮೂಲತಃ ಒಳ್ಳೆಯ ಈಜುಪಟು. ಈಜು ಸ್ಪರ್ಧೆಯಲ್ಲಿ ಭಾಗವಹಿಸಿ ಸಾಕಷ್ಟು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಈಗ ಅದೇ ವಿಚಾರವನ್ನು ತೆರೆ ಮೇಲೆ ತೋರಿಸಲು ಹೊರಟಿದ್ದಾರೆ. ಅದಕ್ಕಾಗಿಯೇ ಸಿನಿಮಾವೊಂದನ್ನು ಮಾಡುತ್ತಿದ್ದು, ಅದಕ್ಕೆ “ಮಿಲಿ’ ಎಂದು ಹೆಸರಿಡಲಾಗಿದೆ.

Advertisement

ಈ ಚಿತ್ರ ವನ್ನು ಮಿಲನಾ ಪತಿ ಡಾರ್ಲಿಂಗ್‌ ಕೃಷ್ಣ ನಿರ್ದೇಶಿಸಲಿದ್ದಾರೆ. ಈಗಾಗಲೇ ಇಬ್ಬರು ಸೇರಿ ಕಥೆ ಮಾಡಿದ್ದಾರೆ. ಹೇಗೂ ಮಿಲನಾ ಅಥ್ಲೀಟ್‌. ಅದನ್ನಿಟ್ಟುಕೊಂಡು ಯಾಕೆ ಕಥೆ ಮಾಡಬಾರದು ಎಂಬ ಯೋಚನೆ ಬಂದ ಪರಿಣಾಮ “ಮಿಲಿ’ ಚಿತ್ರ ಹುಟ್ಟಿಕೊಂಡಿದೆ .

ಸದ್ಯ ಸ್ಕ್ರಿಪ್ಟ್ ನಲ್ಲಿ ತೊಡಗಿರುವ ಚಿತ್ರ ತಂಡ ಅದಕ್ಕೆ ಪೂರಕವಾಗಿ ಹಲವರನ್ನು ಭೇಟಿ ಮಾಡಲಿದೆಯಂತೆ. ಎಲ್ಲವೂ ಪಕ್ವ ಹಾಗೂ ಪಕ್ಕಾ ಆದ ನಂತರ ಸಿನಿಮಾ ಆರಂಭವಾಗಲಿದೆ. ಸದ್ಯಕ್ಕೆ ಟೈಟಲ್‌ ನೋಂದಣಿಯಷ್ಟೇ ಆಗಿದೆ.

“ಮಿಲಿ’ ಗಿಂತ ಮುಂಚೆ ಈ ಜೋಡಿಯ “ಲವ್‌ ಮಾಕ್ಟೇ ಲ್‌-2′ ಬಿಡುಗಡೆಯಾಗಲಿದೆ. ಸದ್ಯ ಪೋಸ್ಟ್‌ ಪ್ರೊಡ ಕ್ಷನ್‌ ಕೆಲಸಗಳಲ್ಲಿ ಚಿತ್ರ ತಂಡ ತೊಡಗಿದೆ.

Advertisement

Udayavani is now on Telegram. Click here to join our channel and stay updated with the latest news.

Next