ಮುಂಬಯಿ: ಮಹಿಳೆಯ ಸಾವಿಗೆ ಕಾರಣವಾದ ಮುಂಬಯಿಯ ಬಿಎಂಡಬ್ಲ್ಯು ಕಾರು ಅಪಘಾತ ಪ್ರಕರಣ ಸಂಬಂಧ ಆರೋಪಿ, ಶಿವಸೇನೆ ನಾಯಕನ ಪುತ್ರ ಮಿಹಿರ್ ಶಾ ನನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ಮೂರೂ ದಿನಗಳಿಂದ ನಾಪತ್ತೆಯಾಗಿದ್ದ ಮಿಹಿರ್ ಶಾ ನನ್ನು ಬಂಧಿಸುವಲ್ಲಿ ಮುಂಬೈ ಪೊಲೀಸರು ಯಶಸ್ವಿಯಾಗಿದ್ದಾರೆ.
ಜುಲೈ 7 ರಂದು ತನ್ನ ಬಿಎಂ ಡಬ್ಲ್ಯೂ ಕಾರು ಡಿಕ್ಕಿ ಹೊಡೆಸಿ ಮಹಿಳೆ ಸಾವನ್ನಪ್ಪಿದ್ದರು ಇದಾದ ಬಳಿಕ ಮಿಹಿರ್ ಅಪಘಾತ ನಡೆದ ಹತ್ತು ಕಿಲೋಮೀಟರ್ ದೂರದಲ್ಲಿ ಕಾರನ್ನು ನಿಲ್ಲಿಸಿ ಕಾರು ಚಾಲಕನಿಗೆ ನೀಡಿ ಪರಾರಿಯಾಗಿದ್ದ. ಇದಾದ ಬಳಿಕ ಪೊಲೀಸರು ಕಾರನ್ನು ವಶಕ್ಕೆ ಪಡೆದುಕೊಂಡಿದ್ದರು ಆದರೆ ಅಪಘಾತದ ಪ್ರಮುಖ ಆರೋಪಿ ನಾಪತ್ತೆಯಾಗಿದ್ದ. ಕಳೆದ ಸೋಮವಾರ, ಆರೋಪಿ ಮಿಹಿರ್ ಶಾ ವಿರುದ್ಧ ಲುಕ್ ಔಟ್ ಸುತ್ತೋಲೆ ಹೊರಡಿಸಲಾಗಿತ್ತು. ಆರೋಪಿಗಳ ಪತ್ತೆಗೆ ಮುಂಬೈ ಪೊಲೀಸರು ಐದು ತಂಡಗಳನ್ನು ರಚಿಸಿದ್ದರು. ಘಟನೆ ನಡೆದು ಮೂರೂ ದಿನಗಳ ಬಳಿಕ ಇಂದು(ಮಂಗಳವಾರ) ಮಿಹಿರ್ ನನ್ನ ಪೊಲೀಸರು ಬಂಧಿಸಿದ್ದಾರೆ.
ಈ ಪ್ರಕರಣದಲ್ಲಿ ಆರೋಪಿಯ ತಂದೆ ರಾಜೇಶ್ ಶಾ ಮತ್ತು ಆತನ ಚಾಲಕ ರಾಜೇಂದ್ರ ಸಿಂಗ್ ಬಿಡಾವತ್ ಅವರನ್ನು ಬಂಧಿಸಲಾಗಿತ್ತು. ಆದರೆ, ಸೋಮವಾರ (ಜುಲೈ 8) ಇಬ್ಬರನ್ನೂ ಮುಂಬೈನ ಶಿವಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಜಾಮೀನು ಪಡೆದು ಹೊರಬಂದಿದ್ದಾರೆ.
ಅಪಘಾತಕ್ಕೂ ಸ್ವಲ್ಪ ಸಮಯದ ಹಿಂದೆ ಆರೋಪಿ ಮಿಹಿರ್ ಶಾ, ಜುಹು ಬಳಿಯ ಬಾರ್‌ಗೆ ತೆರಳಿದ್ದು, ಅಲ್ಲಿ 18,730 ರೂ. ಬಿಲ್ ಮಾಡಿದ್ದಾನೆ ಎನ್ನಲಾಗಿದೆ. ಈ ಬಿಲ್‌ನ ಪ್ರತಿ ಪೊಲೀ ಸರಿಗೆ ದೊರೆತಿದ್ದು, ಆತ ಮದ್ಯಪಾನ ಮಾಡಿರುವುದಕ್ಕೆ ಈ ಬಿಲ್ ಪುರಾವೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.