Advertisement

ಮಿಹಿಕಾ ಬಜಾಜ್‌ ಲೆಹಂಗಾ ತಯಾರಿಕೆಗೆ 10 ಸಾವಿರ ಗಂಟೆ!

11:20 AM Aug 10, 2020 | sudhir |

ಹೈದರಾಬಾದ್‌: ತೆಲುಗು ಚಿತ್ರನಟ ರಾಣಾ ದಗ್ಗು ಬಾಟಿ ಹಾಗೂ ಹೈದರಾಬಾದ್‌ನ ಉದ್ಯಮಿ ಮಿಹಿಕಾ ಬಜಾಜ್‌ ಅವರ ವಿವಾಹ, ಹೈದರಾಬಾದ್‌ನಲ್ಲಿ ಶನಿವಾರ ಅದ್ದೂರಿಯಾಗಿ ಜರಗಿತು. ಸಮಾರಂಭದಲ್ಲಿ ಮಿಹಿಕಾ ಬಜಾಜ್‌ ಅವರು ಧರಿಸಿದ್ದ ಕ್ರೀಮ್‌ ಹಾಗೂ ಸ್ವರ್ಣ ಬಣ್ಣದ ಲೆಹಂಗಾ ಎಲ್ಲರ ಗಮನ ಸೆಳೆಯಿತು. ವಸ್ತ್ರ ವಿನ್ಯಾಸಕಿ ಅನಾಮಿಕಾ ಖನ್ನಾ ಈ ಲೆಹಂಗಾವನ್ನು ವಿನ್ಯಾಸಗೊಳಿಸಿದ್ದು, ಇದನ್ನು ಸಿದ್ಧಪಡಿಸಲು 10 ಸಾವಿರ ಗಂಟೆಗಳು ಬೇಕಾದವು ಎಂದು ಖನ್ನಾ ಅವರೇ ತಿಳಿಸಿದ್ದಾರೆ. ಚಿಕಂಕಾರಿ ಎಂಬ ಸೀರೆಯ ಶೈಲಿಯಲ್ಲೇ ಲೆಹಂಗಾ ವಿನ್ಯಾಸಗೊಳಿಸಲು ತೀರ್ಮಾನಿಸಲಾಗಿತ್ತು. ಹಾಗಾಗಿ, ಲೆಹಂಗಾವನ್ನು ಕೈಯ್ನಾರೆ ಸಿದ್ಧಪಡಿಸಬೇಕಿದ್ದರಿಂದ ಹಲವಾರು ಕುಸುರಿ ಕೆಲಸಗಾರರು ಸುಮಾರು 10,000 ಗಂಟೆಗಳ ಕಾಲ ಶ್ರಮಿಸಿ ಈ ಲೆಹಂಗಾವನ್ನು ಸಿದ್ಧಪಡಿಸಿದರು ಎಂದು ಖನ್ನಾ ವಿವರಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next