Advertisement

ಮಾಗಡಿ ಕೆರೆಯಲ್ಲಿ ದೇಶ-ವಿದೇಶದ ಹಕ್ಕಿಗಳ ಕಲರವ: ಕಣ್ಮನ ಸೆಳೆಯುವ ಪ್ರಶಾಂತ ವಾತಾವರಣ

04:26 PM Sep 27, 2020 | Mithun PG |

ಗದಗ: ಪ್ರವಾಸ ಎಂದಾಕ್ಷಣ ಪ್ರತಿಯೊಬ್ಬರಿಗೂ ಸಂತೋಷವಾಗೋದು ಸಾಮಾನ್ಯ. ಆದರೆ ಹೆಚ್ಚಿನವರು ಪ್ರವಾಸಕ್ಕೆ ಹೋಗುವುದು ಹೊರ ರಾಜ್ಯಗಳಿಗೆ ಅಥವಾ ಹೊರ ದೇಶಕ್ಕೆ. ನಮ್ಮ ಊರಿನಲ್ಲಿಯೇ ಇರುವ ಕಾಡು, ಉದ್ಯಾನವನಗಳನ್ನು ಕಾಣಲು ಹೋಗುವವರು ಕಡಿಮೆ. ಆದರೆ ಇಲ್ಲೊಂದು ಕಡೆ ಏಷ್ಯಾದಿಂದ ವಲಸೆ ಬರುವ ಪಕ್ಷಿಗಳನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಜನರು ಬರುತ್ತಾರೆ.

Advertisement

ಪಕ್ಷಿಗಳಿಗೆ ಹೆಸರುವಾಸಿಯಾದ ಮಾಗಡಿ ಕೆರೆಯು ಗದಗ  ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನಲ್ಲಿದೆ. ಗದಗನಿಂದ 26 ಕಿ.ಮೀ ದೂರದಲ್ಲಿರುವ ಮಾಗಡಿ ಟ್ಯಾಂಕ್‌ ಅನ್ನು  ಸ್ಥಳೀಯವಾಗಿ ಮಾಗಡಿ ಕೆರೆ ಎಂದು ಕರೆಯಾಲಾಗುತ್ತದೆ. ಬೇರೆ ಬೇರೆ ದೇಶಗಳಿಂದ ಮತ್ತು ಮಧ್ಯ ಏಷ್ಯಾದಿಂದ ಕಳೆದ 10 ವರ್ಷಗಳಿಂದ ಪಕ್ಷಿಗಳು ಈ ಸ್ಥಳಕ್ಕೆ ವಲಸೆ ಬರುತ್ತಿವೆ. ಈ ಟ್ಯಾಂಕ್ 134 ಎಕರೆ ಭೂಮಿಯನ್ನು ಹೊಂದಿದೆ ಮತ್ತು 900 ಹೆಕ್ಟೇರ್ ಪ್ರದೇಶವನ್ನು ಹೊಂದಿದೆ.

ಮಾಗಡಿ ಪ್ರದೇಶದಲ್ಲಿ, 900 ಹೆಕ್ಟೇರ್ ಪ್ರದೇಶದಲ್ಲಿ, 134 ಜಾತಿಯ ವಿವಿಧ ಪಕ್ಷಿಗಳನ್ನು ಗುರುತಿಸಲಾಗಿದೆ. ಈ ಪ್ರದೇಶದಲ್ಲಿ ಕಂಡುಬರುವ ಮುಖ್ಯ ಪಕ್ಷಿ  “ಬಾರ್ ಹೆಡೆಡ್ ಗೂಸ್” ( ಗೀರು ತಲೆಯ ಬಾತುಕೋಳಿ) ಒಂದು ಸಮಯದಲ್ಲಿ 5,000 “ಬಾರ್ ಹೆಡೆಡ್ ಗೂಸ್ ” ಗಳು ಈ ಪಕ್ಷಿಧಾಮದಲ್ಲಿ ಗುರುತಿಸಲ್ಪಟ್ಟಿವೆ.

ಬ್ರಾಹ್ಮಣಿ ಡಕ್, ಪೇಂಟೆಡ್ ಕೊಕ್ಕರೆ ಮತ್ತು ಇನ್ನಿತರ ಪಕ್ಷಿಗಳು ಹಲವಾರು ಸಂಖ್ಯೆಯಲ್ಲಿವೆ. ಪಕ್ಷಿಪ್ರಿಯರಿಗೆ ಈ ಸ್ಥಳ ಹೇಳಿ ಮಾಡಿಸಿದ್ದು, ಸ್ಥಳೀಯ ಮಾರ್ಗದರ್ಶಕರೂ ಕೂಡ ಇರುವುದರಿಂದ ಪ್ರವಾಸದ ಸಂದರ್ಭದಲ್ಲಿ ಯಾವುದೇ ಅಡೆತಡೆಗಳು ಎದುರಾಗುವುದಿಲ್ಲ.  ಮಾತ್ರವಲ್ಲದೆ ಮಾಗಡಿ ಹಳ್ಳಿಯ ಪ್ರಶಾಂತ ವಾತಾವಾರಣ ಕೂಡ ಕಣ್ಮನ ಸೆಳೆಯುತ್ತದೆ.
ಪ್ರತಿ ವರ್ಷದ ಚಳಿಗಾಲ (ಅಕ್ಟೋಬರ್ ತಿಂಗಳಾಂತ್ಯಕ್ಕೆ) ಪ್ರಾರಂಭವಾಗುತ್ತಿದ್ದಂತೆಯೇ ಮಾಗಡಿ ಕೆರೆಯಲ್ಲಿ ವಿದೇಶಿ ಪಕ್ಷಿಗಳ ಕಲರವ ಆರಂಭವಾಗುತ್ತದೆ. ದೇಶದ ಹಲವೆಡೆಯಿಂದ ಪ್ರವಾಸಿಗರು ಈ ಸಂದರ್ಭದಲ್ಲಿ ಆಗಮಿಸುತ್ತಿದ್ದು, ದೋಣಿಯ ಮೂಲಕ ಪಕ್ಷಿ ವೀಕ್ಷಣೆಗೆ ತೆರಳಬಹುದು.

ಮಾಗಡಿಯಲ್ಲಿರುವ ಇತರ ಆಕರ್ಷಣೀಯ ತಾಣ:  

Advertisement

ಮಾಗಡಿಯಲ್ಲಿ ಜಲವಿದ್ಯುತ್ ಕೇಂದ್ರವಿದೆ. ಮಾನವ ನಿರ್ಮಿತ ಸರೋವರವೂ ಇದೆ. ಶ್ರೀ ಸೋಮೇಶ್ವರ ದೇವಸ್ಥಾನ ಈಗಾಗಲೇ ಹಲವು ಯಾತ್ರಿಕರನ್ನು ಆಕರ್ಷಿಸಿದೆ. ಒಟ್ಟಿನಲ್ಲಿ ಪ್ರವಾಸಕ್ಕೆ ಮಾಗಡಿ ಒಂದು ಸೂಕ್ತ ಸ್ಥಳ ಎನ್ನುವುದು ನಿಸ್ಸಂಶಯ.

 

-ಸದಾಶಿವ ಬಿ.ಎನ್

ತೃತೀಯ ಬಿ.ಎ (ಪತ್ರಿಕೋದ್ಯಮ ವಿಭಾಗ)

ಎಂ. ಜಿ. ಎಂ. ಕಾಲೇಜು ಉಡುಪಿ*

Advertisement

Udayavani is now on Telegram. Click here to join our channel and stay updated with the latest news.

Next