Advertisement

ಎರ್ನಾಕುಳಂನಲ್ಲಿ ಘರ್ಷಣೆ: ಪೊಲೀಸರ ಮೇಲೆ ಹಲ್ಲೆ, ವಲಸೆ ಕಾರ್ಮಿಕರಿಂದ ಎರಡು ಜೀಪ್‌ ಗೆ ಹಾನಿ

07:48 PM Dec 26, 2021 | Team Udayavani |

ಕೊಚ್ಚಿ: ಎರ್ನಾಕುಳಂನ ಕಿಳಕ್ಕಾಂಬಳಂನಲ್ಲಿ ಶನಿವಾರ ರಾತ್ರಿ ಆಯೋಜಿಸಲಾಗಿದ್ದ ಕ್ರಿಸ್‌ಮಸ್‌ ಸಂಭ್ರಮ ಹಿಂಸಾತ್ಮಕವಾಗಿ ಮುಕ್ತಾಯಗೊಂಡಿದೆ. ಈಶಾನ್ಯ ರಾಜ್ಯಗಳಿಂದ ಬಂದ ಕಾರ್ಮಿಕರು ಮತ್ತು ಪೊಲೀಸರ ನಡುವೆ ಘರ್ಷಣೆ ಉಂಟಾಗಿದೆ. ಇದರಿಂದಾಗಿ ಐವರು ಪೊಲೀಸರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ಪೊಲೀಸ್‌ ಇಲಾಖೆಗೆ ಸೇರಿದ ಎರಡು ಜೀಪ್‌ಗ್ಳನ್ನು ಹಾನಿಗೊಳಿಸಲಾಗಿದೆ. ಕ್ರಿಸ್‌ಮಸ್‌ ಸಂಭ್ರಮದ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ಬಡಿದಾಟ ಉಂಟಾಗಿತ್ತು. ಅದನ್ನು ನಿಯಂತ್ರಿಸಲು ಹೋದ ಪೊಲೀಸರ ಸಣ್ಣ ತಂಡದ ಮೇಲೆ ಆಕ್ರೋಶಗೊಂಡಿದ್ದ ಗುಂಪು ಏಕಾಏಕಿ ನುಗ್ಗಿ ಹಲ್ಲೆ ನಡೆಸಿತು. ಜತೆಗೆ ಪೊಲೀಸರ ಕೈಯ್ಯಲ್ಲಿದ್ದ ವೈರ್‌ಲೆಸ್‌ ಸೆಟ್‌ಗಳನ್ನು ಕಸಿದುಕೊಂಡು ಹಾನಿ ಮಾಡಿದೆ.

ಅವರೆಲ್ಲರೂ ಕಿಟ್ಟೆಕ್ಸ್‌ ಗ್ರೂಪ್‌ಗೆ ಸೇರಿದ ನೌಕರರಾಗಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಹೆಚ್ಚಿನ ಪೊಲೀಸ್‌ ತಂಡವನ್ನು ಕಳುಹಿಸಲಾಗಿದೆ. ಜತೆಗೆ ಕಿಟ್ಟೆಕ್ಸ್‌ ಗ್ರೂಪ್‌ನಲ್ಲಿ ಕೆಲಸ ಮಾಡುತ್ತಿರುವ 150ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣಕ್ಕೆ ಸಂಬಧಿಸಿದಂತೆ ಪ್ರತಿಕ್ರಿಯೆ ನೀಡಿದ ಕಿಟ್ಟೆಕ್ಸ್‌ ಗ್ರೂಪ್‌ನ ಮ್ಯಾನೇಜಿಂಗ್‌ ಡೈರೆಕ್ಟರ್‌ ಸಾಬು ಜಾಕೊಬ್‌ ಪೊಲೀಸರ ಜತೆಗೆ ತನಿಖೆಗೆ ಸಹಕರಿಸುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ : ಬುಕ್ಕಾಪಟ್ಟಣ ಗ್ರಾಮದಲ್ಲಿ ಹೊರಬೀಡು ಕಾರ್ಯಕ್ರಮ : ಇಲ್ಲಿ ಶೂನ್ಯ ಮಾಸದ ದಿನ ಊರೇ ಖಾಲಿ

Advertisement

Udayavani is now on Telegram. Click here to join our channel and stay updated with the latest news.

Next