Advertisement

ಊರಿಗೆ ತೆರಳುವ ಧಾವಂತದಲ್ಲಿ ಸಾಮಾಜಿಕ ಅಂತರ ಮರೆತ ವಲಸೆ ಕಾರ್ಮಿಕರು !

02:21 AM May 12, 2020 | Sriram |

ಮಂಗಳೂರು: ಕೋವಿಡ್-19 ಲಾಕ್‌ಡೌನ್‌ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಾಕಿಯಾಗಿರುವ ಹೊರ ರಾಜ್ಯಗಳ ವಲಸೆ ಕಾರ್ಮಿಕರನ್ನು ತವರಿಗೆ ಕಳುಹಿಸುವ ಪ್ರಕ್ರಿಯೆ ಮುಂದುವರಿದಿದ್ದು, ಸೋಮವಾರ ಉತ್ತರ ಪ್ರದೇಶ ಮೂಲದ 1,151 ಮಂದಿ ವಿಶೇಷ ರೈಲಿನಲ್ಲಿ ತೆರಳಿದರು. ಆದರೆ ಊರಿಗೆ ಹೋಗುವ ಧಾವಂತದಲ್ಲಿ ಅಷ್ಟೂ ಮಂದಿ ಸಾಮಾಜಿಕ ಅಂತರ ಮರೆತು ಒಟ್ಟಾಗಿ ನಿಲ್ದಾಣದಲ್ಲಿ ಸೇರಿದ್ದು, ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಆಸ್ಪದವಾಯಿತು.

Advertisement

ಜಿಲ್ಲೆಯ ಅನೇಕ ಸ್ಥಳಗಳಿಂದ ಆಗಮಿಸಿದ್ದ ಮಂದಿ ಸೋಮವಾರ ಬೆಳಗ್ಗೆ ಮಂಗಳೂರಿನ ಸ್ಟೇಟ್‌ಬ್ಯಾಂಕ್‌ ಬಳಿಯ ಸರ್ವೀಸ್‌ ಬಸ್‌ ನಿಲ್ದಾಣ ಬಳಿ ಜಯಾಯಿಸಿದ್ದರು. ಗಂಟು-ಮೂಟೆಯೊಂದಿಗೆ ಬಸ್‌ ನಿಲ್ದಾಣಕ್ಕೆ ಆಗಮಿಸಿದ್ದ ಸಾವಿರಾರು ಮಂದಿ ಕಾರ್ಮಿಕರು ಸಾಮಾಜಿಕ ಅಂತರ ಕಾಯ್ದುಕೊಂಡಿರಲಿಲ್ಲ.

ಮಂಗಳೂರಿನಿಂದ ಮೇ 9 ಮತ್ತು 10ರಂದು ಝಾರ್ಖಂಡ್‌, ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳಿಗೆ ಒಟ್ಟು 3,420 ವಲಸೆ ಕಾರ್ಮಿಕರನ್ನು ವಿಶೇಷ ರೈಲಿನಲ್ಲಿ ಕಳುಹಿಸಲಾಗಿದೆ.

ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಬೇಕು ಎಂದು ರಾಜ್ಯ ಸರಕಾರ, ಸ್ಥಳೀಯಾಡಳಿತವು ಅನೇಕ ಬಾರಿ ಸೂಚನೆ ನೀಡಿದರೂ ಅದರ ಪಾಲನೆಯಾಗದೇ ಇರುವುದು ಮತ್ತಷ್ಟು ಆತಂಕಕ್ಕೆ ಎಡೆಮಾಡಿ ಕೊಟ್ಟಿದೆ.

21,000 ಮಂದಿ ನೋಂದಣಿ
ದ.ಕ. ಜಿಲ್ಲೆಯಲ್ಲಿ ದುಡಿಯುತ್ತಿರುವ ಹೊರ ರಾಜ್ಯಗಳ 21,000 ಮಂದಿ ಕಾರ್ಮಿಕರು ಊರುಗಳಿಗೆ ತೆರಳಲು ನೋಂದಾಯಿಸಿಕೊಂಡಿದ್ದಾರೆ. ಪ್ರತಿಯೊಬ್ಬರಿಗೂ ಕಾರ್ಮಿಕ ಇಲಾಖೆ ಮತ್ತು ಸೇವಾ ಸಿಂಧು ಪೋರ್ಟಲ್‌ ಮುಖೇನ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ. ಈ ವ್ಯವಸ್ಥೆ ನೋಡಿಕೊಳ್ಳಲು ಶಾಸಕರಾದ ಡಿ. ವೇದವ್ಯಾಸ ಕಾಮತ್‌ ಮತ್ತು ಡಾ| ವೈ. ಭರತ್‌ ಶೆಟ್ಟಿ ಅವರನ್ನು ನಿಯೋಜಿಸಲಾಗಿದೆ.

Advertisement

ನುಸುಳುಕೋರರ ವಿರುದ್ಧ ಕ್ರಮ
ಕಾಸರಗೋಡು: ಕೋವಿಡ್-19 ವ್ಯಾಪಕವಾಗಿರುವ ಕರ್ನಾಟಕದ ಹಾಟ್‌ಸ್ಪಾಟ್‌ ಮತ್ತು ಇತರ ಪ್ರದೇಶಗಳಿಂದ ಅಡ್ಡದಾರಿ ಗಳ ಮೂಲಕ ಜನರನ್ನು ಅಕ್ರಮ ವಾಗಿ ಕೇರಳಕ್ಕೆ ಕರೆತರಲು ಕೆಲವರು ಯತ್ನಿಸುತ್ತಿರುವುದು ಗಮನಕ್ಕೆ ಬಂದಿದ್ದು, ಅಂಥವರ ವಿರುದ್ಧ ಕಠಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಆದೇಶ ನೀಡಿರುವುದಾಗಿ ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ ಬಾಬು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next