Advertisement

ಸೂರತ್: ವಲಸೆ ಕಾರ್ಮಿಕರು, ಪೊಲೀಸರ ನಡುವೆ ಘರ್ಷಣೆ, ಕಲ್ಲು ತೂರಾಟ: ಅಶ್ರುವಾಯು ಪ್ರಯೋಗ

08:23 AM May 05, 2020 | Nagendra Trasi |

ನವದೆಹಲಿ:ತಮ್ಮನ್ನು ಊರುಗಳಿಗೆ ಕಳುಹಿಸಿ ಎಂದು ಆಗ್ರಹ ವ್ಯಕ್ತಪಡಿಸಿದ ವಲಸೆ ಕಾರ್ಮಿಕರು ಪೊಲೀಸರ ಜತೆ ಘರ್ಷಣೆಗೆ ಇಳಿದ ಘಟನೆ ಸೋಮವಾರ ಸೂರತ್ ನಲ್ಲಿ ನಡೆದಿದೆ. ಸೂರತ್ ನಲ್ಲಿ ವಲಸೆ ಕಾರ್ಮಿಕರು ನಡೆಸುತ್ತಿರುವ ನಾಲ್ಕನೇ ಪ್ರತಿಭಟನೆ ಇದಾಗಿದೆ ಎಂದು ವರದಿ ತಿಳಿಸಿದೆ.

Advertisement

ವಜ್ರ ಹಾಗೂ ಜವಳಿ ಕೈಗಾರಿಕೆಗಳಲ್ಲಿ ಕೆಲಸ ಮಾಡಲು ವಿವಿಧ ರಾಜ್ಯಗಳಿಂದ ಬಂದಿದ್ದ ಸಾವಿರಾರು ವಲಸೆ ಕಾರ್ಮಿಕರು ಇದೀಗ ತಮ್ಮನ್ನು ಊರುಗಳಿಗೆ ಕಳುಹಿಸಿಕೊಡುವಂತೆ ಒತ್ತಾಯಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಸೂರತ್ ಹೊರವಲಯದ ವರೇಲಿ ಪ್ರದೇಶದಲ್ಲಿ ವಲಸೆ ಕಾರ್ಮಿಕರು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದರು. ಆದರೆ ಆಕ್ರೋಶಿತ ವಲಸೆ ಕಾರ್ಮಿಕರು ಕಲ್ಲುತೂರಾಟ ನಡೆಸಿದ್ದರಿಂದ ಪೊಲೀಸರು ಗುಂಪನ್ನು ಚದುರಿಸಲು ಅಶ್ರುವಾಯು ಪ್ರಯೋಗಿಸಿದ ಘಟನೆ ನಡೆಯಿತು ಎಂದು ವರದಿ ವಿವರಿಸಿದೆ.

ಸೂರತ್ ನ ಪಾಲಾನ್ ಪುರ್ ಪಾಟಿಯಾ ಪ್ರದೇಶದಲ್ಲಿಯೂ ವಲಸೆ ಕಾರ್ಮಿಕರು ಪ್ರತಿಭಟನೆ ನಡೆಸಿದ್ದರು. ನಮಗೆ ತಿನ್ನಲು, ಊಟೋಪಚಾರಕ್ಕೆ ತುಂಬಾ ತೊಂದರೆಯಾಗುತ್ತಿದ್ದು, ತಮಗೆ ಊರಿಗೆ ತೆರಳಲು ಅಧಿಕಾರಿಗಳು ನೆರವು ನೀಡಬೇಕು ಎಂದು ವಲಸೆ ಕಾರ್ಮಿಕರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next