Advertisement

ವಲಸೆ ಕಾರ್ಮಿಕರಿಗೆ ಸರ್ವ ವ್ಯವಸ್ಥೆ: ನಳಿನ್‌ ಕುಮಾರ್‌

04:10 PM May 05, 2020 | sudhir |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಿಂದ ವಿವಿಧ ಜಿಲ್ಲೆಗಳಿಗೆ ತೆರಳುತ್ತಿರುವ ವಲಸೆ ಕಾರ್ಮಿಕರಿಗೆ ಸರಕಾರದ ವತಿಯಿಂದ ಮಂಗಳೂರಿನ ಗೋಲ್ಡ್‌ ಪಿಂಚ್‌ ಮೈದಾನಿನಲ್ಲಿ ಮಾಡಲಾದ ವ್ಯವಸ್ಥೆಗಳನ್ನು ಸೋಮವಾರ ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ಪರಿಶೀಲಿಸಿದರು. ಎಲ್ಲ ವಲಸೆ ಕಾರ್ಮಿಕರಿಗೆ ಆಹಾರ ಕಿಟ್‌ಗಳನ್ನು ಅವರು ಹಸ್ತಾಂತರಿಸಿದರು.

Advertisement

ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿದ್ದ ಸುಮಾರು 10,000 ವಲಸೆ ಕಾರ್ಮಿಕರನ್ನು ಅವರ ತವರೂರು ಬಿಜಾಪುರ, ಹುಬ್ಬಳ್ಳಿ, ಹಾಸನ, ಬಾಗಲಕೋಟೆ ಭಾಗಗಳಿಗೆ ರವಿವಾರದವರೆಗೆ ಕಳುಹಿಸಲಾಗಿದೆ. ಸೋಮವಾರ 22 ಬಸ್‌ಗಳ ಮೂಲಕ ಬಾದಾಮಿ, ಹಾಸನ ಸಹಿತ ಬೇರೆ ಬೇರೆ ಭಾಗದವರನ್ನು ಉಚಿತವಾಗಿ ಬಸ್‌ನಲ್ಲಿ ಕಳುಹಿಸಲಾಗುತ್ತಿದೆ ಎಂದರು.

ಕಷ್ಟದಲ್ಲಿರುವ ವಲಸೆ ಕಾರ್ಮಿಕರಿಗೆ ನೆರವಾಗಬೇಕು ಹಾಗೂ ಅವರಿಗೆ ಆಹಾರ ಕಿಟ್‌ಗಳನ್ನು ನೀಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಮುಖಂಡರಾದ ಜೆ.ಪಿ. ನಡ್ಡಾ ಹಾಗೂ ಅಮಿತ್‌ ಶಾ ಸೂಚನೆಯ ಮೇರೆಗೆ ಜಿಲ್ಲೆಯಿಂದ ತೆರಳುತ್ತಿರುವ ವಲಸೆ ಕಾರ್ಮಿಕರಿಗೆ ಆಹಾರ ಕಿಟ್‌ ಒದಗಿಸಲಾಗಿದೆ ಎಂದರು.

ಶಾಸಕರಾದ ವೇದವ್ಯಾಸ್‌ ಕಾಮತ್‌, ಡಾ| ವೈ. ಭರತ್‌ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next