Advertisement

ಮೈಟ್‌ –ಯುಐಪಾಥ್‌ ಗ್ಲೋಬಲ್‌ ಆಟೊಮೇಷನ್‌ ಕಂಪೆನಿ ಒಪ್ಪಂದ

12:05 AM May 09, 2019 | Team Udayavani |

ಮಂಗಳೂರು: ಮೂಡುಬಿದಿರೆಯ ಬಡಗಮಿಜಾರಿನಲ್ಲಿರುವ ಮಂಗಳೂರು ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಮತ್ತು ಎಂಜಿನಿಯರಿಂಗ್‌ (ಮೈಟ್‌) ರೊಬೊಟಿಕ್‌ ಪ್ರೊಸೆಸ್‌ ಆಟೊಮೇಷನ್‌ಗೆ (ಆರ್‌ಪಿಎ) ವೇದಿಕೆಯನ್ನು ಅಭಿವೃದ್ಧಿಪಡಿಸುವ ಜಾಗತಿಕ ಸಾಫ್ಟ್‌ವೇರ್‌ ಕಂಪೆನಿಯಾದ ಯುಐಪಾಥ್‌ ಜತೆಗೆ ಒಡಂಬಡಿಕೆಗೆ ಸೋಮವಾರ ಸಹಿ ಹಾಕಿದೆ.

Advertisement

ಯುಐಪಾಥ್‌ ಅಕಾಡೆಮಿಕ್‌ ಅಲಯನ್ಸ್‌ ಕಾರ್ಯಕ್ರಮದಡಿ ಒಪ್ಪಂದ ಭವಿಷ್ಯದ ಕೌಶಲದೊಂದಿಗೆ ಶಿಕ್ಷಣವನ್ನುಮೈಟ್‌ನಲ್ಲಿ ಉನ್ನತೀಕರಿಸುವಲ್ಲಿ ಸಹಾಯ ಮಾಡುತ್ತದೆ. ಅಲ್ಲದೆ ವಿದ್ಯಾರ್ಥಿಗಳಿಗೆ ರೊಬೊಟಿಕ್‌ ಪ್ರೊಸೆಸ್‌ ಆಟೊಮೇ ಷನ್‌ಗೆ ಸಂಬಂಧಿಸಿದ ಕೋರ್ಸ್‌ ಗಳನ್ನು ಸಹ ನೀಡುತ್ತದೆ. ಮೈಟ್‌ ವಿದ್ಯಾರ್ಥಿಗಳಿಗೆ ಆರ್‌ಪಿಎ ತರಬೇತಿ ನೀಡಲು ಪಠ್ಯಕ್ರಮ, ಕೋರ್ಸ್‌ ವಿಷಯ, ಕಲಿಕೆ ಸಾಮಗ್ರಿಗಳು, ನಿಯಮಿತ ಶಿಕ್ಷಕ ತರಬೇತಿ ಮತ್ತು ಸಾಫ್ಟ್‌ವೇರ್‌ ಉಪಕರಣಗಳನ್ನು ಯುಐಪಾಥ್‌ನಿಂದ ಸ್ವೀಕರಿಸುತ್ತದೆ. ಪರೀಕ್ಷಾ ತಯಾರಿ, ಮಾದರಿ ಕಾರ್ಯ ಯೋಜನೆಯ ವಿಷಯದಲ್ಲಿ ಯುಐಪಾಥ್‌ ಪ್ರೋಗ್ರಾಂ ಬೆಂಬಲ ಒದಗಿಸುತ್ತದೆ. ಒಡಂಬಡಿಕೆ ಪತ್ರ ವಿನಿಮಯದ ಸಂದರ್ಭ ಮೈಟ್‌ ಅಧ್ಯಕ್ಷ ರಾಜೇಶ್‌ ಚೌಟ ಮಾತ ನಾಡಿ, ಉದ್ಯಮದಲ್ಲಿ ತಂತ್ರಜ್ಞಾನ ಗಳು ವೇಗವಾಗಿ ಬದಲಾಗುತ್ತಿವೆ. ಅದಕ್ಕನು ಗುಣವಾಗಿ ವಿದ್ಯಾರ್ಥಿಗಳನ್ನು ತಯಾರಿಸುವುದು ಸವಾಲು. ಮೈಟ್‌ನಲ್ಲಿ ಇತ್ತೀ ಚಿನ ತಂತ್ರಜ್ಞಾನ ಕೃತಕ ಬುದ್ಧಿ ಮತ್ತೆ, ಆಟೊ ಮೇಷನ್‌ ಮತ್ತಿತರ ವಿಷಯಗಳಿಗೆ ಕೇಂದ್ರೀಕರಿಸುವ ಕೈಗಾರಿಕಾ ಅಗತ್ಯಗಳೊಂದಿಗೆ ಬೋಧನ ವಿಧಾನ ದಲ್ಲಿ ಅಳವಡಿಸಲಾಗಿದೆ ಎಂದರು.

ಯುಐಪಾಥ್‌ ಜಾಗತಿಕ ಗುಣಮಟ್ಟದ ಮಾನದಂಡಗಳನ್ನು ಅನುಸರಿಸುವ ಮೂಲಕ ತನ್ನ ನಾಲ್ಕು ಕೋರ್ಸ್‌ಗಳಿಗೆ ನ್ಯಾಶನಲ್‌ ಬೋರ್ಡ್‌ ಆಫ್‌ ಅಕ್ರೆಡಿಟೇಶನ್‌ನಿಂದ ಮಾನ್ಯತೆ ಪಡೆದಿದೆ. ಈ ಮಾನ್ಯತೆಯ ಅನುಸಾರ ಮೈಟ್‌ ಉದ್ಯಮ ಸಂಬಂಧಿತ ಗುಣಮಟ್ಟ ಪ್ರಾಯೋಗಿಕ ಆಧಾರಿತ ಶಿಕ್ಷಣ, ಪ್ರತಿ ವರ್ಷ ಅತ್ಯುತ್ತಮ ಶೈಕ್ಷಣಿಕ ಫಲಿತಾಂಶಗಳು, ಉದ್ಯಮ ಶೈಕ್ಷಣಿಕ ಸಹಯೋಗ, ಸಂಶೋಧನೆ ಕೇಂದ್ರೀಕೃತ ಚಟುವಟಿಕೆಗಳು, ಉದ್ಯಮಶೀಲ ಚಟುವಟಿಕೆಗಳನ್ನು ವರ್ಧಿಸುವುದು, ವಿದ್ಯಾರ್ಥಿಗಳಿಗೆ ಪ್ರಪಂಚದಾದ್ಯಂತ ದೊಡ್ಡ ಕಂಪೆನಿಗಳಲ್ಲಿ ಉದ್ಯೋಗ ಒದಗಿಸುವುದು ಇತ್ಯಾದಿ ಚಟುವಟಿಕೆಗಳನ್ನು ನಡೆಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next