ಪ್ರಜನನ ವಯೋಮಾನದಲ್ಲಿರುವ ಮತ್ತು ಋತುಬಂಧಾನಂತರದ ವಯಸ್ಸಿನಲ್ಲಿಯೂ ಮಹಿಳೆಯರ ಸಾವಿಗೆ ಗರ್ಭಕಂಠದ ಕ್ಯಾನ್ಸರ್ ಒಂದು ಮುಖ್ಯ ಕಾರಣವಾಗಿದೆ. ಹ್ಯೂಮನ್ ಪಾಪಿಲೋಮಾ ವೈರಸ್ (ಎಚ್‌ಪಿವಿ) ಎಂಬ ವೈರಸ್‌ನಿಂದ ಈ ಕಾಯಿಲೆ ಉಂಟಾಗುತ್ತದೆ. ಶೀಘ್ರವಾಗಿ ಪತ್ತೆಹಚ್ಚಿದರೆ ಈ ಕ್ಯಾನ್ಸರನ್ನು ತಡೆಯಬಹುದು. ಪ್ಯಾಪ್ ಸೆರ್ ಟೆಸ್ಟ್ ಎಂಬ ತಪಾಸಣೆಯಿಂದ ಗರ್ಭಕೋಶದ ಕ್ಯಾನ್ಸರನ್ನು ಶೀಘ್ರವಾಗಿ ಪತ್ತೆ ಮಾಡಬಹುದು. 21 ವರ್ಷ ವಯಸ್ಸಿನ ಬಳಿಕ ಪ್ರತೀ ಮೂರು ವರ್ಷಗಳಿಗೆ ಒಮ್ಮೆ ಈ ತಪಾಸಣೆಯನ್ನು ನಡೆಸುವುದು ಸೂಕ್ತ.
Advertisement
ಪ್ಯಾಪ್ ಸರ್ ಟೆಸ್ಟ್ಪ್ಯಾಪ್ ಸೆರ್/ ಪ್ಯಾಪ್ ಟೆಸ್ಟ್/ ಸರ್ವಿಕಲ್ ಸೆ¾àರ್ ಅಥವಾ ಸೆ¾àರ್ ಟೆಸ್ಟ್ ಎಂಬುದಾಗಿಯೂ ಇದನ್ನು ಕರೆಯುತ್ತಾರೆ. ಗರ್ಭಕಂಠದಲ್ಲಿ ಉಂಟಾಗಿರಬಹುದಾದ ಕ್ಯಾನ್ಸರ್ ಪೂರ್ವ ಸ್ಥಿತಿ ಅಥವಾ ಕ್ಯಾನ್ಸರ್ ಬೆಳವಣಿಗೆಯನ್ನು ಪತ್ತೆಹಚ್ಚಲು ಗರ್ಭಕಂಠದಲ್ಲಿ ನಡೆಸುವ ತಪಾಸಣೆ ಇದು. ಈ ತಪಾಸಣೆಯ ಬಳಿಕ ವೈದ್ಯರ ಶಿಫಾರಸಿನಂತೆ ಇನ್ನಿತರ ಕ್ಯಾನ್ಸರ್ ನಿರ್ಧಾರಕ ತಪಾಸಣೆಗಳನ್ನೂ ನಡೆಸಬಹುದಾಗಿದೆ. ಹ್ಯೂಮನ್ ಪ್ಯಾಪಿಲೊಮಾ ವೈರಸ್ ಲೈಂಗಿಕವಾಗಿ ಪ್ರಸಾರವಾಗುವ ಡಿಎನ್‌ಎ ವೈರಸ್ ಆಗಿದ್ದು, ಇದರ ಸೋಂಕಿನಿಂದ ಉಂಟಾಗಿರುವ ಕ್ಯಾನ್ಸರ್ ಪೂರ್ವ ಬದಲಾವಣೆಗಳನ್ನು ಗುರುತಿಸಲು ಗರ್ಭಕಂಠದಿಂದ ಅಂಗಾಂಶಗಳನ್ನು ಸಂಗ್ರಹಿಸುವುದು ಹೊರರೋಗಿ ವಿಭಾಗದಲ್ಲಿಯೇ ನಡೆಸಲಾಗುವ ಒಂದು ಪ್ರಕ್ರಿಯೆಯಾಗಿದೆ. ಎಂಡೊ ಸರ್ವಿಕ್ಸ್ ಮತ್ತು ಎಂಡೊಮೆಟ್ರಿಯಂಗಳಲ್ಲಿ ಆಗಿರುವ ಇನ್ನಿತರ ಸೋಂಕುಗಳು ಮತ್ತು ಅಸಹಜತೆಗಳನ್ನು ಕೂಡ ಈ ಪರೀಕ್ಷೆಯಿಂದ ಕಂಡು ಹಿಡಿಯಬಹುದು.
ನಮಗೆಲ್ಲರಿಗೂ ತಿಳಿದಿರುವಂತೆ “ಚಿಕಿತ್ಸೆಗಿಂತ ರೋಗ ತಡೆಯೇ ಉತ್ತಮವಾಗಿದೆ. ಸರಿಯಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ ಗರ್ಭಕಂಠದ ಕ್ಯಾನ್ಸರ್ ವಿರುದ್ಧವೂ ನಾವು ಹೋರಾಡಿ ಅದನ್ನು ತಡೆಯಬಹುದಾಗಿದೆ. ಕ್ಯಾನ್ಸರ್ ಅನ್ನು ಬೇಗನೆ ಪತ್ತೆ ಹಚ್ಚಿ ಚಿಕಿತ್ಸೆ ನೀಡಿದರೆ ಅದನ್ನು ತಡೆಯಬಹುದಾಗಿದೆ ಮತ್ತು ಗುಣಪಡಿಸಬಹುದಾಗಿದೆ. ಗರ್ಭಕಂಠದ ಕ್ಯಾನ್ಸರ್ ಉಂಟಾಗುವುದನ್ನು ತಡೆಯಲು ಏನು ಮಾಡಬೇಕು?
– ಧೂಮಪಾನ ಮಾಡಬಾರದು
– ಲೈಂಗಿಕ ಸಂಗಾತಿಗಳು ಸೀಮಿತವಾಗಿರಬೇಕು
– ಲೈಂಗಿಕ ಸಂಪರ್ಕ ಸಂದರ್ಭ ಕಾಂಡೋಮ್ ಉಪಯೋಗಿಸಬೇಕು
– ಪ್ರೌಢವಯಸ್ಸಿಗೆ ಬಂದ ಮೇಲೆಗೇ ಮೊದಲ ಲೈಂಗಿಕ ಸಂಪರ್ಕ ನಡೆಸಬೇಕು.
– ಎಚ್‌ಪಿವಿ ಲಸಿಕೆ ಹಾಕಿಸಿಕೊಳ್ಳಬೇಕು
– ಪ್ಯಾಪ್ ಮತ್ತು ಎಚ್‌ಪಿವಿ ತಪಾಸಣೆ ಮಾಡಿಸಿಕೊಳ್ಳಿ
Related Articles
Advertisement