Advertisement
ಮೆನಿ ಮೆನಿ ಮಿಡಿಎಲ್ಲಾ ವಯೋಮಾನದ ಹೆಣ್ಮಕ್ಕಳಿಗೂ ಹೊಂದುವ ದಿರಿಸು ಮಿಡಿ. ವಿವಿಧ ದೇಹ ಗಾತ್ರ, ಉದ್ದಕ್ಕೆ ಸರಿ ಹೊಂದುವ ಹಾಗೆ ನಾನಾ ವಿಧಗಳಲ್ಲಿ ಮಿಡಿಗಳು ಸಿಗುತ್ತವೆ. ಮೊಣಕಾಲನ್ನು ಮುಚ್ಚುವಂತೆ ಬರುತ್ತಿದ್ದ ಮಿಡಿ ಸ್ಕರ್ಟ್‌ಗಳು ದಶಕಗಳ ಹಿಂದೆ ತುಂಬಾ ಜನಪ್ರಿಯತೆ ಗಳಿಸಿದ್ದವು. ನಂತರದ ದಿನಗಳಲ್ಲಿ ಮಿಡಿ ಸ್ಕರ್ಟನ್ನು ಹಿಂದಿಕ್ಕಿದ್ದು ಮಿನಿ ಸ್ಕರ್ಟ್. ಆದರೂ, ಮಿಡಿ ಯಾವತ್ತೂ ಔಟ್ ಆಫ್ ಫ್ಯಾಷನ್ ಆಗಿದ್ದೇ ಇಲ್ಲ.
ಮಿಡಿಯ ವೈಶಿಷ್ಟವೆಂದರೆ ಎಲ್ಲಾ ಕಾಲಕ್ಕೂ ಹೊಂದುವ ಗುಣ. ಸರಿಯಾಗಿ ಮ್ಯಾಚ್ ಆಗುವ ಟಾಪ್ ಒಂದಿದ್ದರೆ ಮೂರೂ ಕಾಲದಲ್ಲಿ ಮಿಡಿಯನ್ನು ತೊಡಬಹುದು. ಬೇಸಿಗೆಯಲ್ಲಿ ಸಿಂಪಲ್ ಟೀ ಶರ್ಟ್, ಕ್ರಾಪ್ ಟಾಪ್ ಜೊತೆಗೆ ಮಿಡಿ ತೊಡಬಹುದು. ಮಳೆಗಾಲ ಮತ್ತು ಚಳಿಗಾಲದಲ್ಲಿ ಫುಲ್ ತೋಳಿನ ಅಂಗಿ ಅಥವಾ ಸ್ವೆಟರ್ ಜೊತೆಗೂ ಧರಿಸಬಹುದು. ಇದರ ಜೊತೆ ಸ್ಕಾಫìನ್ನು ಸುತ್ತಿಕೊಂಡರೆ ಟ್ರೆಂಡಿ ಲುಕ್ ಪಕ್ಕಾ. ಮಿಡಿಯ ಜೊತೆಗೆ ಹೈ ಹೀಲ್ಸ್, ಬೂಟ್ಸ್ ಮತ್ತು ಟ್ರೆಂಡಿ ಸ್ಯಾಂಡಲ್ಸ್ ತೊಡಬಹುದು. ಸಾಲಿಡ್ ಕಲರ್, ಅಂದರೆ ಪೂರ್ತಿ ಒಂದೇ ಬಣ್ಣದ ಮಿಡಿಯಷ್ಟೇ ಅಲ್ಲದೆ ವಿವಿಧ ವಿನ್ಯಾಸಗಳ ಮಿಡಿಯನ್ನೂ ಪ್ರಯತ್ನಿಸಬಹುದು. ಡಾಟ್ಸ್, ಫ್ಲೋರಲ್, ಸ್ಟ್ರೈಪ್ಸ್ ಮುಂತಾದ ಬಗೆಗಳಲ್ಲಿ ಮಿಡಿ ಸಿಗುತ್ತವೆ. ಕಾಲನ್ನು ಪೂರ್ತಿ ಮುಚ್ಚುವ ಫುಲ್ ಮಿಡಿಗಳೂ ಮಿಡಿಯಷ್ಟೇ ಜನಪ್ರಿಯತೆಯನ್ನು ಪಡೆದಿವೆ.
Related Articles
ಬಟ್ಟೆ ಶಾಪಿಂಗ್ ಮಾಡುವಾಗ ಮಗಳು ಮಾಡರ್ನ್ ಆಗಿದ್ದರೆ ಮಾಡರ್ನ್ ದಿರಿಸುಗಳನ್ನೇ ಆರಿಸಿಕೊಳ್ಳೋದು ಸಹಜ. ಮಗಳು ಆರಿಸಿದ ಬಟ್ಟೆಗಳ ಬಗ್ಗೆ ಅಮ್ಮಂದಿರು ಆಕ್ಷೇಪ ಮಾಡೋದು, ಆ ಮಾಡರ್ನ್ ದಿರಿಸು ತುಂಬಾ ಚಿಕ್ಕದಿದ್ದರೆ ಮಾತ್ರ. ಆದರೆ ಹಾಗೆಂದು ಅಮ್ಮನಿಗೆ ಒಪ್ಪಿಗೆಯಾಗುವ ದಿರಿಸನ್ನು ಕಾಲೇಜಿಗೆ ಹಾಕಿಕೊಂಡು ಹೋದರೆ ಗೆಳತಿಯರೆಲ್ಲ ಎಲ್ಲಿ ತನ್ನನ್ನು ಗೌರಮ್ಮ ಎಂದು ಆಡಿಕೊಳ್ಳುತ್ತಾರೋ ಎಂಬ ಆತಂಕ ಮಗಳದು. ಈ ಸಂದರ್ಭದಲ್ಲಿ ನೆರವಿಗೆ ಬರೋದು, ಅತ್ತ ಗಿಡ್ಡವೂ ಅಲ್ಲದ, ಇತ್ತ ಉದ್ದವೂ ಅಲ್ಲದ ಮಿಡಿ. ಅತ್ತ ತುಂಬಾ ಮಾಡರ್ನೂ ಅಲ್ಲದ, ಇತ್ತ ಪಕ್ಕಾ ಸಾಂಪ್ರದಾಯಿಕವೂ ಅಲ್ಲದ, ಮೊಣಕಾಲು ಮುಚ್ಚುವ ಮಿಡಿ ಬಹುತೇಕ ಹೆಣ್ಮಕ್ಕಳ ಮೆಚ್ಚುಗೆ ಪಡೆದಿರುವುದಕ್ಕೆ ಇದೂ ಒಂದು ಕಾರಣ.
Advertisement