Advertisement

ಮೈಕ್ರೋಸಾಫ್ಟ್ ನ ಕೆಲವು ಉದ್ಯೋಗಿಗಳಿಗೆ ಶಾಶ್ವತವಾಗಿ ವರ್ಕ್ ಫ್ರಂ ಹೋಮ್ ಸೌಲಭ್ಯ

03:50 PM Oct 10, 2020 | Mithun PG |

ನ್ಯೂಯಾರ್ಕ್: ಸಾಫ್ಟ್ ವೇರ್ ದೈತ್ಯ ಮೈಕ್ರೋಸಾಫ್ಟ್ ತನ್ನ ಕೆಲವು ಉದ್ಯೋಗಿಗಳು ಇಚ್ಛೆ ಪಟ್ಟರೇ ಮನೆಯಿಂದಲೇ ಶಾಶ್ವತವಾಗಿ ಕೆಲಸ ಮಾಡಲು ಅವಕಾಶ ನೀಡುವುದಾಗಿ ತಿಳಿಸಿದೆ. ಈ ಕುರಿತು ಅಮೆರಿಕಾ ಮಾಧ್ಯಮಗಳು ವರದಿ ಮಾಡಿದ್ದು, ಕೋವಿಡ್ 19 ಸಾಂಕ್ರಮಿಕ ರೋಗದ ಕಾರಣದಿಂದ ಈವರೆಗೂ ಉದ್ಯೋಗಿಗಳು ವರ್ಕ್ ಫ್ರಮ್ ಹೋಮ್ ಮಾಡುತ್ತಿದ್ದರು. ಇನ್ನು ಮುಂದೆಯೂ ಉದ್ಯೋಗಿಗಳು ಬಯಸಿಸದರೇ ಈ ಯೋಜನೆಯನ್ನು ಶಾಶ್ವತವಾಗಿ ವಿಸ್ತರಿಸಲಾಗುವುದು ಎಂದು ತಿಳಿಸಿದೆ.

Advertisement

ಕೋವಿಡ್ ಭೀತಿಯಿಂದ ಪ್ರಸ್ತುತ ಹಲವಾರು ಮೈಕ್ರೋಸಾಫ್ಟ್ ಉದ್ಯೋಗಿಗಳು ಮನೆಯಿಂದಲೇ ಕಾರ್ಯನಿರ್ವಹಿಸುತ್ತಿದ್ದಾರೆ. ಮೈಕ್ರೋಸಾಫ್ಟ್ ಕೂಡ ಅಮೆರಿಕಾದಲ್ಲಿನ ತನ್ನ ಕಚೇರಿಗಳನ್ನು 2021ರ ಜನವರಿಗೂ ತೆರೆಯುವುದಿಲ್ಲ ಎಂದು ಈಗಾಗಲೇ ಪ್ರಕಟಣೆ ಹೊರಡಿಸಿದೆ.

ಅದಾಗ್ಯೂ ಒಂದು ವೇಳೆ ಕಚೇರಿ ತೆರೆದರೂ ಉದ್ಯೋಗಿಗಳು ತಮ್ಮ ಮೇಲ್ವಿಚಾರಕರ ಅನುಮತಿ ಪಡೆದು ಶಾಶ್ವತವಾಗಿ ಮನೆಯಿಂದಲೇ ಕೆಲಸ ಮಾಡಬಹುದು. ಆದರೆ ಅವರು ತಮ್ಮ ಕಚೇರಿಯಲ್ಲಿ ಬಳಕೆ ಮಾಡುವ ಜಾಗವನ್ನು ಬಿಟ್ಟುಕೊಡಬೇಕಾಗುತ್ತದೆ ಎಂದು  ಸಂಸ್ಥೆ ತಿಳಿಸಿದೆ.

ಇದನ್ನೂ ಓದಿ: ರಾಕೇಶ್ ರೋಷನ್ ಮೇಲೆ ಶೂಟೌಟ್ ಪ್ರಕರಣ: ಪರಾರಿಯಾಗಿದ್ದ ಶಾರ್ಪ್ ಶೂಟರ್ ಬಂಧನ

ಕೋವಿಡ್ 19 ಸಾಂಕ್ರಮಿಕ ರೋಗ ನಮಗೆಲ್ಲಾ ಯೋಚಿಸಲು, ಜೀವಿಸಲು, ಹೊಸ ರೀತಿಯಲ್ಲಿ ಕಾರ್ಯನಿರ್ವಹಿಸಲು ಸವಾಲನ್ನು ನೀಡಿದೆ. ಮಾತ್ರವಲ್ಲದೆ ಕೆಲಸದ ವಿಧಾನದಲ್ಲೂ ಮತ್ತಷ್ಟು ಬದಲಾವಣೆ ತರಲು ಇದರಿಂದ ಸಾಧ್ಯವಾಗಿದೆ ಎಂದು ಮಾನವ ಸಂಪನ್ಮೂಲ ಅಧಿಕಾರಿ ಕ್ಯಾಥಿಲಿನ್ ಹೋಗನ್ ತಿಳಿಸಿದ್ದಾರೆ.

Advertisement

ಈಗಾಗಲೇ ತಾತ್ಕಾಲಿಕವಾಗಿ ಅಮೆರಿಕಾದಲ್ಲಿರುವ ಮೈಕ್ರೋಸಾಫ್ಟ್ ನ ಕಚೇರಿಗಳನ್ನು ತೆರೆಯದಿರಲು ಸಂಸ್ಥೆ ನಿರ್ಧರಿಸಿದೆ. ಮನೆಯಿಂದಲೇ ಕೆಲಸ ನಿರ್ವಹಿಸುವವರಿಗೆ ವೇತದಲ್ಲಿಯೂ ಬದಲಾವಣೆಯಾಗಲಿದೆ. ಜೂನ್ ತಿಂಗಳಾಂತ್ಯಕ್ಕೆ ಮೈಕ್ರೋಸಾಫ್ಟ್ 1,63,000 ಜನರನ್ನು ನೇಮಕ ಮಾಡಿಕೊಂಡಿದೆ.

ಇದನ್ನೂ ಓದಿ: ಗುಡ್ ನ್ಯೂಸ್:ರೈಲು ಹೊರಡುವ 5 ನಿಮಿಷದ ಮೊದಲು ಟಿಕೆಟ್ ಬುಕ್ ಮಾಡಬಹುದು: ಏನಿದು ಹೊಸ ನೀತಿ

Advertisement

Udayavani is now on Telegram. Click here to join our channel and stay updated with the latest news.

Next