Advertisement

‘ಮೈಕ್ರೋ ಸಾಫ್ಟ್ ಔಟ್‌ ಲುಕ್’ ಅಂದ್ರೆ ಏನು ಗೊತ್ತಾ..? ಸಂಪೂರ್ಣ ಮಾಹಿತಿ ಇಲ್ಲಿದೆ.

06:14 PM Jun 16, 2021 | Team Udayavani |

ಮೈಕ್ರೋಸಾಫ್ಟ್ ಔಟ್‌ ಲುಕ್ ಒಂದು ಸ್ವಾಮ್ಯದ ಇಮೇಲ್ ಮತ್ತು ಟಾಸ್ಕ್ ಮ್ಯಾನೆಜ್‌ ಮೆಂಟ್ ಅಪ್ಲಿಕೇಶನ್ ಆಗಿದ್ದು, ಮೈಕ್ರೋಸಾಫ್ಟ್ ಆಫೀಸ್‌ ನ ಬಹುತೇಕ ಆವೃತ್ತಿಯಲ್ಲಿ ಇದು ಲಭ್ಯವಿದೆ. ಇದನ್ನು ಮೊದಲು, ಎಕ್ಸ್ಚೇಂಜ್ ಸರ್ವರ್ 5.5 ನೊಂದಿಗೆ ಒಂದು ಪ್ರೋಗ್ರಾಂ ಆಗಿ ಬಿಡುಗಡೆ ಮಾಡಲಾಗಿತ್ತು. ಬಳಿಕ ಮೈಕ್ರೋಸಾಫ್ಟ್ ಆಫೀಸ್ 97 ಸೂಟ್ ಮತ್ತು ನಂತರದ ಆವೃತ್ತಿಗಳೊಂದಿಗೆ ಮುಖ್ಯ ಅಪ್ಲಿಕೇಶನ್ ಆಗಿ ಸಂಯೋಜಿಸಲಾಯಿತು.

Advertisement

ಆರಂಭದ ದಿನಗಳಲ್ಲಿ ಮೈಕ್ರೋಸಾಫ್ಟ್ ಔಟ್‌ ಲುಕ್ ನನ್ನು ಪಿಒಪಿ 3 ಮತ್ತು ವೆಬ್ ಆಧಾರಿತ ಇಮೇಲ್ ಖಾತೆಗಳು / ಸೇವೆಗಳನ್ನು ಕಾನ್ಫಿಗರ್ ಮಾಡುವ ಡೆಸ್ಕ್ಟಾಪ್‌ ಗಳಲ್ಲಿ ಮಾತ್ರ ಬಿಡುಗಡೆ ಮಾಡಲಾಗಿತ್ತು.

ಮೈಕ್ರೋಸಾಫ್ಟ್ ಔಟ್‌ ಲುಕ್‌ನಲ್ಲಿ ಬಳಕೆದಾರರು ಒಂದು ಅಥವಾ ಒಂದಕ್ಕಿಂತ ಹೆಚ್ಚಿನ ಇಮೇಲ್ ಖಾತೆಗಳನ್ನು ರಚಿಸಿ, ನಿರ್ವಹಿಸಬಹುದು. ಇದು ಒಂದು ಇಮೇಲ್ ಕ್ಲೈಂಟ್ ಆಗಿ ಜನಪ್ರಿಯವಾಗಿದ್ದರೂ, ಸಂಪರ್ಕಗಳು, ಕ್ಯಾಲೆಂಡರ್ ಫೀಚರ್, ಟಾಸ್ಕ್, ಪರ್ಸನಲ್ ಜರ್ನಲ್ ಮತ್ತು ವೆಬ್ ಬ್ರೌಸಿಂಗ್ ರಚಿಸಲು ಮತ್ತು ನಿರ್ವಹಿಸಲು ಮೈಕ್ರೋಸಾಫ್ಟ್ ಔಟ್‌ ಲುಕ್ ಬಳಕೆದಾರರಿಗೆ ಅವಕಾಶ ನೀಡುತ್ತದೆ. ಇದಲ್ಲದೆ ಆರ್‌ ಎಸ್‌ ಎಸ್ ಫೀಡ್‌ ಗಳು, ಸುದ್ದಿಗಳ ಅಪ್ಡೇಟ್ಸ್, ಹವಾಮಾನ ವರದಿ, ಇನ್ನೂ ಹೆಚ್ಚಿನ  ವಿಶೇಷತೆಗಳನ್ನು ಹೊಂದಿದೆ.

ಮೈಕ್ರೋಸಾಫ್ಟ್ ಔಟ್‌ ಲುಕ್ ನ ವಿಶೇಷತೆಗಳೇನು…?

ಇಮೇಲ್, ಕ್ಯಾಲೆಂಡರ್ ಮತ್ತು ಸಂಪರ್ಕಗಳು :

Advertisement

ಈಗಾಗಲೇ ಹೇಳಿದಂತೆ, ನೀವು ಇಮೇಲ್‌ ಗಳನ್ನು ಕಳುಹಿಸಬಹುದು, ಓದಬಹುದು ಮತ್ತು ಪ್ರತ್ಯುತ್ತರಿಸಬಹುದು. ಅದರೊಂದಿಗೆ, ನಿಮ್ಮ ಸಂಪರ್ಕ ಪಟ್ಟಿಯನ್ನೂ ನೀವು ಇದರಲ್ಲಿ ಸಿಂಕ್ ಮಾಡಿ, ನಿರ್ವಹಿಸಬಹುದು.

ಇದಲ್ಲದೆ, ಮೈಕ್ರೋಸಾಫ್ಟ್ ಆಫೀಸ್ ನನ್ನು ಲಿಂಕ್ ಮಾಡುವುದರಿಂದ, ನೀವು ಮೈಕ್ರೋಸಾಫ್ಟ್ ಒನ್‌ ಡ್ರೈವ್‌ ನಿಂದ ನೇರವಾಗಿ ಡಾಕ್ಯುಮೆಂಟ್‌ ಗಳನ್ನು ಲಗತ್ತಿಸಿ, ಸ್ಟೋರ್ ಮಾಡಬಹುದು. ಸಂಪರ್ಕ ಪಟ್ಟಿಯೂ ಲಿಂಕ್ ಆಗಿದ್ದರೆ, ಅವರಿಗೆ ನೇರವಾಗಿ ಇಮೇಲ್ ಕಳುಹಿಸಬಹುದು. ಔಟ್‌ ಲುಕ್‌ ನಿಂದಲೇ ನೀವು ನಿಮ್ಮ ಲಿಂಕ್ಡ್ ಇನ್ ಪ್ರೊಫೈಲ್ ನನ್ನೂ ಮ್ಯಾನೇಜ್ ಮಾಡಬಹುದು.

ಸಭೆಗಳನ್ನು ಆಯೋಜಿಸುವುದು ಮತ್ತು ನಿಮ್ಮ ವೇಳಾಪಟ್ಟಿಗಳನ್ನು ನಿರ್ವಹಿಸಿ :

ಹೊಸ ಸಭೆಗಳನ್ನು ರಚಿಸಲು, ಕಾನ್ಫರೆನ್ಸ್ ಮೀಟಿಂಗ್‌ ಗಳನ್ನು ಬುಕ್ ಮಾಡಲು ಮತ್ತು ಇತರರ ಸಭೆಯ ಆಹ್ವಾನಗಳಿಗೆ ಪ್ರತಿಕ್ರಿಯೆಗಳನ್ನು ನೀಡಲು ನೀವು ಔಟ್‌ ಲುಕ್ ಬಳಸಬಹುದು. ನಿಮ್ಮ ಕ್ಯಾಲೆಂಡರ್ ಡೇಟಾಗಳನ್ನು ಇದರೊಂದಿಗೆ ಸಿಂಕ್ ಮಾಡುವುದರಿಂದ, ನೀವು ಮೀಟಿಂಗ್‌ ನನ್ನು ಆಯೋಜಿಸಿ, ಇದರ ಮೂಲಕವೇ ಇತರರಿಗೆ ಆಹ್ವಾನ ನೀಡಬಹುದು. ಇದಲ್ಲದೆ, ನಿಮ್ಮ ಸಹೋದ್ಯೋಗಿಗಳು ಸಭೆಗೆ ಲಭ್ಯವಿದ್ದಾರಾ ಅಥವಾ ಬೇರೆ ಕೆಲಸಗಳಲ್ಲಿ ನಿರತರಾಗಿದ್ದಾರಾ ಎಂಬುವುದನ್ನೂ ಇದು ನೋಟಿಫೈ ಮಾಡುತ್ತದೆ.

ಭದ್ರತೆ ಮತ್ತು ಗುಪ್ತಚರ

ಔಟ್ ಲುಕ್ ಅಂತರ್ನಿರ್ಮಿತ (ಇನ್-ಬಿಲ್ಟ್) ಸುರಕ್ಷತೆಯೊಂದಿಗೆ ಬರುತ್ತದೆ. ಮಾಹಿತಿ ಸುರಕ್ಷತೆ ಸೇರಿದಂತೆ, ಮೈಕ್ರೋಸಾಫ್ಟ್ ಹೇಳಿಕೊಳ್ಳುವಂತೆ, ಮೈಕ್ರೋಸಾಫ್ಟ್ ಜೊತೆಗಿನ ನಿಮ್ಮ ಚಟುವಟಿಕೆಯ ಆಧಾರದ ಮೇಲೆ, ಇದು ನಿಮ್ಮ ಅಗತ್ಯತೆಗಳನ್ನೂ ಊಹಿಸುತ್ತದೆ.

ಇಂದುಧರ ಹಳೆಯಂಗಡಿ

Advertisement

Udayavani is now on Telegram. Click here to join our channel and stay updated with the latest news.

Next