Advertisement

ಮೈಕ್ರೋಸಾಫ್ಟ್ ನಿಂದ ಸರ್ಫೇಸ್‍ ಗೋ 3 ಬಿಡುಗಡೆ

06:48 PM Nov 17, 2021 | Team Udayavani |

ಬೆಂಗಳೂರು: ಮೈಕ್ರೋಸಾಫ್ಟ್ ಇಂದು ಹೊಸ ಸರ್ಫೇಸ್ ಗೋ-3 ಯನ್ನು ಬಿಡುಗಡೆ ಮಾಡಿದ್ದು, Amazon ನಲ್ಲಿ ಲಭ್ಯವಾಗಲಿದೆ. ಇದರ ಬೆಲೆ 57,999 ರೂಪಾಯಿಗಳಿಂದ ಆರಂಭವಾಗಲಿದೆ.

Advertisement

ಸರ್ಪೇಸ್‍ ಗೊ 3 ಟ್ಯಾಬ್‍ ಲೆಟ್‍ ಹಾಗೂ ಲ್ಯಾಪ್‍ಟಾಪ್‍ ಎರಡರ ಸಂಯೋಜನೆಯಂತೆ ಕಾರ್ಯನಿರ್ವಹಿಸುವ ಮೈಕ್ರೋಸಾಫ್ಟ್ ತಯಾರಿಕೆಯ ವಿಶಿಷ್ಟ ಡಿವೈಎಸ್‍ ಆಗಿದೆ. ಇದು ಟಚ್‍ ಸ್ಕ್ರೀನ್‍ ಹೊಂದಿದೆ. ಅಲ್ಲದೇ ಡಿಜಿಟಲ್‍ ಪೆನ್‍ ಬಳಸಿಯೂ ಇದನ್ನು ಕಾರ್ಯಾಚರಿಸಬಹುದಾಗಿ.

ಈ ಸರ್ಫೇಸ್ ಗೋ-3 ಕೇವಲ 544 ಗ್ರಾಂ  ತೂಕವಿದ್ದು, 1080ಪಿ ಕ್ಯಾಮೆರಾಗಳನ್ನು ಹೊಂದಿದೆ. ಇದು ವಿಶ್ವದರ್ಜೆಯ ಸ್ಟುಡಿಯೋ ಮೈಕ್ರೋಫೋನ್ ಗಳು, ಡಾಲ್ಬಿ ಆಡಿಯೋ ಮತ್ತು 10.5 ಇಂಚುಗಳ ಡಿಸ್ ಪ್ಲೇಯನ್ನು ಹೊಂದಿದೆ. ಈ ಸಾಧನವು ಎಲ್ಲಿ ಬೇಕಾದರೂ ಸಂಪರ್ಕ ಸಾಧಿಸಲು ಮತ್ತು ಸಮನ್ವಯ ಸಾಧಿಸಲು ಉಪಯುಕ್ತವಾಗಿದೆ.  ಈ ಬ್ಯುಸಿನೆಸ್ ಯೂನಿಟ್ಸ್ ಸರ್ಫೇಸ್ ನ ಬೆಲೆ 42,999 ರೂಪಾಯಿಗಳಿಂದ ಆರಂಭವಾಗಲಿದೆ.

ಈ ಬಗ್ಗೆ ಮಾತನಾಡಿದ ಮೈಕ್ರೋಸಾಫ್ಟ್ ಇಂಡಿಯಾದ ಚೀಫ್ ಆಪರೇಟಿಂಗ್ ಆಫೀಸರ್ ರಾಜೀವ್ ಸೋಧಿ “ಭಾರತಕ್ಕೆ ಹೊಸ ಸರ್ಫೇಸ್ ಗೋ-3 ಯನ್ನು ಪರಿಚಯಿಸಲು ನಮಗೆ ಸಂತಸವೆನಿಸುತ್ತಿದೆ. ಇದರ ಮೂಲಕ ನಾವು ವಿಂಡೋಸ್ 11 ಗೆ ನಮ್ಮ ಸರ್ಫೇಸ್ ಪೋರ್ಟ್ ಫೋಲಿಯೋವನ್ನು ವಿಸ್ತರಣೆ ಮಾಡುತ್ತಿದ್ದೇವೆ. ಈ ಹೊಸ ಉತ್ಪನ್ನವು ಹೆಚ್ಚು ಹೆಚ್ಚು ಜನರು ಯಾವುದೇ ಸಮಯದಲ್ಲಾದರೂ, ಎಲ್ಲಿ ಬೇಕಾದರೂ ಸಹಭಾಗಿತ್ವ ಹೊಂದಲು ಇದು ನೆರವಾಗುತ್ತದೆ ಎಂಬ ವಿಶ್ವಾಸ ನಮಗಿದೆಎಂದರು.

ಸರ್ಫೇಸ್ ಗೋ-3 ಒಂದು ಅತ್ಯುತ್ತಮ ಪೋರ್ಟೇಬಲ್ ಸರ್ಫೇಸ್ 2-ಇನ್-1 ಆಗಿದ್ದು, ಇದು ದೈನಂದಿನ ಕೆಲಸಗಳಿಗೆ, ಹೋಂವರ್ಕ್ ಮತ್ತು ಪ್ಲೇಗಳಿಗೆ ಅತ್ಯುತ್ತಮ ಡಿವೈಸ್ ಆಗಿದೆ. ವಿಂಡೋಸ್ 11 ನ ಅತ್ಯುತ್ತಮವಾದ ಸೇವೆಯನ್ನು ನೀಡುವ ನಿಟ್ಟಿನಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಈ ಸರ್ಫೇಸ್ ಗೋ 3 Gen Intel Core i3 ಪ್ರೊಸೆಸರ್ ನೊಂದಿಗೆ ವೇಗವನ್ನು 60% ಹೆಚ್ಚಿಸಲಿದೆ. ಇದರಲ್ಲಿ ಎಲ್ ಟಿಇ ಸುಧಾರಿತ, ಇಡೀ ದಿನ ಬ್ಯಾಟರಿ ಬಾಳಿಕೆ, ಅಂತರ್ನಿರ್ಮಿತವಾದ ಮೈಕ್ರೋಸಾಫ್ಟ್ ಭದ್ರತೆ ಇದೆ. ಡಿವೈಸ್ ಗಳು ಆನ್ ಸೈಟ್ ಇರಲಿ ಅಥವಾ ಫೀಲ್ಡ್ ನಲ್ಲಿರಲಿ ಇದರಲ್ಲಿನ ಬಿಲ್ಟ್ –ಇನ್ ಕ್ಲೌಡ್ –ಪವರ್ಡ್ ಸೆಕ್ಯೂರಿಟಿಯನ್ನು ಕಂಪನಿಯ ಮಾಹಿತಿ ಮತ್ತು ಗ್ರಾಹಕರ ಡೇಟಾವನ್ನು ಸುರಕ್ಷಿತವಾಗಿರಿಸುವ ನಿಟ್ಟಿನಲ್ಲಿ ವಿನ್ಯಾಸಗೊಳಿಸಲಾಗಿದೆ.

Advertisement

ಗ್ರಾಹಕರು ಅವಲಂಬನೆ ಹೊಂದಿರುವ ಮೈಕ್ರೋಸಾಫ್ಟ್ ಅನುಭವಗಳನ್ನು ತಲುಪಿಸುವ ನಿಟ್ಟಿನಲ್ಲಿ ಸರ್ಫೇಸ್ ಉತ್ಪನ್ನಗಳನ್ನು ವಿನ್ಯಾಸಗೊಳಿಸಲಾಗಿದೆ. ಪ್ರತಿ ಡಿವೈಸ್ ಸಹ ನಂಬಲಾಗದಂತಹ ಟೈಪಿಂಗ್, ಪ್ರೀಮಿಯಂ ಸಾಮಗ್ರಿಗಳು, ಸುಸಜ್ಜಿತವಾಗಿ ನೆಲೆಗೊಳಿಸಲಾಗಿರುವ ಕ್ಯಾಮೆರಾಗಳನ್ನು ಹೊಂದಿವೆ.

ಈ ಡಿವೈಸ್ ಅಮೆಜಾನ್ ನಲ್ಲಿ ನವೆಂಬರ್ 23 ರಿಂದ ಲಭ್ಯವಾಗಲಿದೆ. ವಾಣಿಜ್ಯ ಎಸ್ ಕೆಯುಗಳು ದೇಶಾದ್ಯಂತ ಅಧಿಕೃತ ರೀಟೇಲರ್ ಗಳಲ್ಲಿ ಡಿಸೆಂಬರ್ ನಿಂದ ಲಭ್ಯವಾಗಲಿವೆ.

Advertisement

Udayavani is now on Telegram. Click here to join our channel and stay updated with the latest news.

Next