Advertisement
ಸಂಶೋಧನೆ, ಎಂಜಿನಿಯರಿಂಗ್ ಮತ್ತು ಅಭಿವೃದ್ಧಿ ಕ್ಷೇತ್ರಗಳಲ್ಲಿ ಕಳೆದ 25 ವರ್ಷಗಳಿಂದ ಸಂಸ್ಥೆಯು ತನ್ನದೇ ಆದ ಕೊಡುಗೆಗಳನ್ನು ನೀಡುತ್ತಾ ಬಂದಿದೆ.
Related Articles
Advertisement
ಕಳೆದ 25 ವರ್ಷಗಳಲ್ಲಿ IDC ಯ ಕೆಲವು ಸಾಧನೆಗಳು:
ಮೈಕ್ರೋಸಾಫ್ಟ್ 365 (ಆಫೀಸ್) ಮೊಬೈಲ್: IDC ಮೈಕ್ರೋಸಾಫ್ಟ್ 365 (ಆಫೀಸ್) ಮೊಬೈಲ್ ಆ್ಯಪ್ ಅನ್ನು ಅಭಿವೃದ್ಧಿಪಡಿಸುವುದು ಮತ್ತು ಗ್ರಾಹಕರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಪ್ರಪಂಚದಾದ್ಯಂತ 100 ಮಿಲಿಯನ್ ಗೂ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿರುವ ಆ್ಯಂಡ್ರಾಯ್ಡ್ ಮತ್ತು iOS ಸಾಧನಗಳಿಗೆ ಅಪ್ಲಿಕೇಶನ್ ಗಳನ್ನು ನೀಡಿದೆ.
ಭಾರತೀಯ ಭಾಷೆಗಳಿಗೆ ಬೆಂಬಲ: ಮೈಕ್ರೋಸಾಫ್ಟ್ ಟ್ರಾನ್ಸ್ ಲೇಟರ್ ನಲ್ಲಿ ಭಾರತೀಯ 20 ಕ್ಕೂ ಹೆಚ್ಚು ಭಾಷೆಗಳನ್ನು ಶಕ್ತಗೊಳ್ಳುವಂತೆ ಮಾಡುವಲ್ಲಿ IDCಯು ಸಫಲವಾಗಿದೆ. ಈ ಮೂಲಕ ಭಾಷಾ ವೈವಿಧ್ಯತೆ ಮತ್ತು ಭಾಷೆಗಳ ನಡುವಿನ ಅಡ್ಡಿಯನ್ನು ನಿವಾರಣೆ ಮಾಡುವ ನಿಟ್ಟಿನಲ್ಲಿ ಕೊಡುಗೆ ನೀಡಿದೆ. ಭಾಷೆಗಳ ನಡುವಿನ ಜುಗಲ್ಬಂದಿ, ಜನರೇಟಿವ್ AI ಚಾಟ್ ಬಾಟ್ ಮೂಲಕ ಲಕ್ಷಾಂತರ ಭಾರತೀಯರು ತಮ್ಮದೇ ಸ್ಥಳೀಯ ಭಾಷೆಯಲ್ಲಿ ಸರ್ಕಾರಿ ಸೇವೆಗಳ ಮಾಹಿತಿಗಳನ್ನು ಸುಲಭವಾಗಿ ಪಡೆದುಕೊಳ್ಳಲು ಅನುವಾಗುವ ರೀತಿಯಲ್ಲಿ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ.
Azure ಸ್ಪೆಷಲೈಸ್ಡ್ AI ಸೂಪರ್ ಕಂಪ್ಯೂಟರ್: ಮೈಕ್ರೋಸಾಫ್ಟ್ ನ ಕ್ಲೌಡ್ ಕಂಪ್ಯೂಟಿಂಗ್ ಪ್ಲಾಟ್ ಫಾರ್ಮ್ Azureಗಾಗಿ ಮೂಲಸೌಕರ್ಯ ಮತ್ತು ಸೇವೆಗಳನ್ನು ರಚಿಸುವ ಮತ್ತು ನಿರ್ವಹಣೆ ಮಾಡುವಲ್ಲಿ IDC ಮುಂಚೂಣಿಯಲ್ಲಿದೆ. ಇದು ವಿಶ್ವದ ಅತ್ಯಂತ ಶಕ್ತಿಶಾಲಿ AI ಸೂಪರ್ ಕಂಪ್ಯೂಟರ್ ಗಳಲ್ಲಿ ಒಂದಾಗಿರುವ Azure ಸೂಪರ್ ಕಂಪ್ಯೂಟರ್ ಅನ್ನು ರಚಿಸುವಲ್ಲಿ ಕಾರ್ಯನಿರತವಾಗಿದೆ. ಇದು ದೊಡ್ಡ ಪ್ರಮಾಣದ AI ಮಾದರಿಗಳು ಮತ್ತು ಅಪ್ಲಿಕೇಶನ್ ಗಳನ್ನು ದಾಖಲೆಯ ವೇಗ ಮತ್ತು ದಕ್ಷತೆಯೊಂದಿಗೆ ಕಾರ್ಯನಿರ್ವಹಣೆ ಮಾಡುತ್ತದೆ.
ತಂತ್ರಜ್ಞಾನವನ್ನು ಹೆಚ್ಚು ಸುಲಭವಾಗಿ ಮತ್ತು ಒಳಗೊಳ್ಳುವಂತೆ ಮಾಡುವ ಮೈಕ್ರೋಸಾಫ್ಟ್ ನ ಬದ್ಧತೆಯ ಭಾಗವಾಗಿ IDC ವಿಂಡೋಸ್ 11 ನಲ್ಲಿ ಧ್ವನಿ ಪ್ರವೇಶ, ನಿರೂಪಕ, ವರ್ಧಕ, ಕಣ್ಣಿನ ನಿಯಂತ್ರಣ ಮತ್ತು ಡಿಕ್ಟೇಶನ್ ನಂತಹ ವೈಶಿಷ್ಟ್ಯತೆಗಳನ್ನು ಅಭಿವೃದ್ಧಿಪಡಿಸಿದೆ ಮತ್ತು ಸುಧಾರಣೆ ಮಾಡಿದೆ. ಇದು ಬಳಕೆದಾರರಿಗೆ ತಮ್ಮ ಸಾಧನಗಳೊಂದಿಗೆ ಸಂವಹನ ನಡೆಸಲು ಅವಕಾಶ ಕಲ್ಪಿಸುತ್ತದೆ.
ಈ ಬಗ್ಗೆ ಮಾತನಾಡಿದ ಮೈಕ್ರೋಸಾಫ್ಟ್ IDC ಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಎಕ್ಸ್ ಪೀರಿಯನ್ಸಸ್+ ಡಿವೈಸಸ್ ಇಂಡಿಯಾದ ಸಿವಿಪಿ ರಾಜೀವ್ ಕುಮಾರ್, ನಾವು ಜನರೇಟಿವ್ AI ನ ಕ್ರಾಂತಿಕಾರಿ ತಂತ್ರಜ್ಞಾನದ ಮುಂದಿನ ಹಂತವನ್ನು ಪ್ರವೇಶಿಸುತ್ತಿದ್ದು, ಮುಂದಿನ 25 ವರ್ಷಗಳು ಇನ್ನೂ ಹೆಚ್ಚಿನ ಭರವಸೆಯನ್ನು ಮೂಡಿಸಿವೆ. ಜಗತ್ತಿನಲ್ಲಿರುವ ಪ್ರತಿಯೊಬ್ಬ ವ್ಯಕ್ತಿ ಮತ್ತು ಪ್ರತಿಯೊಂದು ಸಂಸ್ಥೆಯನ್ನು ಇನ್ನಷ್ಟು ತಂತ್ರಜ್ಞಾನ ಸ್ನೇಹಿಗಳನ್ನಾಗಿ ಶಕ್ತಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದರು.