Advertisement

Microsoft Down! ಕೈಕೊಟ್ಟ ಮೈಕ್ರೋಸಾಫ್ಟ್ ; ಏರ್ಪೋರ್ಟ್, ಬ್ಯಾಂಕ್ ಕಾರ್ಯಾಚರಣೆಗೆ ಸಂಕಷ್ಟ

02:38 PM Jul 19, 2024 | Team Udayavani |

ಹೊಸದಿಲ್ಲಿ: ಗ್ಲೋಬಲ್ ಸೈಬರ್ ಸೆಕ್ಯುರಿಟಿ ಪ್ಲಾಟ್‌ಫಾರ್ಮ್ ಕ್ರೌಡ್‌ಸ್ಟ್ರೈಕ್ ಡೌನ್ ಆಗಿದೆ ಎಂದು ಭಾರತ, ಜಪಾನ್, ಕೆನಡಾ, ಆಸ್ಟ್ರೇಲಿಯಾ ಮತ್ತು ಇತರ ಹಲವು ದೇಶಗಳ ಹಲವಾರು ಬಳಕೆದಾರರು ಹೇಳಿಕೊಂಡಿದ್ದಾರೆ.

Advertisement

ಜಾಗತಿಕ ಮೈಕ್ರೋಸಾಫ್ಟ್ ಸ್ಥಗಿತವು ಫ್ಲೈಟ್‌ ಗಳಿಂದ ಹಿಡಿದು ಸೂಪರ್‌ ಮಾರ್ಕೆಟ್‌, ಬ್ಯಾಂಕಿಂಗ್ ಕಾರ್ಯಾಚರಣೆಗಳವರೆಗೆ, ಬಹು ವಲಯಗಳನ್ನು ಅಡ್ಡಿಪಡಿಸುತ್ತಿದೆ. ಅದನ್ನು ಶೀಘ್ರವಾಗಿ ಪರಿಹರಿಸದಿದ್ದರೆ ಬೃಹತ್ ಸಮಸ್ಯೆಗಳಿಗೆ ಕಾರಣ ವಾಗಬಹುದು.

ವಿಮಾನಯಾನ ಸಂಸ್ಥೆಗಳಾದ ವಿಸ್ತಾರ, ಇಂಡಿಗೋ, ಸ್ಪೈಸ್ ಜೆಟ್ ಮತ್ತು ಅಕ್ಸಾ ಏರ್ ನ ಬುಕಿಂಗ್, ಚೆಕ್-ಇನ್ ಮತ್ತು ಫ್ಲೈಟ್ ಅಪ್ಡೇಟ್ ಗಳ ಮೇಲೆ ಪರಿಣಾಮ ಬೀರುವ ತಾಂತ್ರಿಕ ಸಮಸ್ಯೆಗಳನ್ನು ಎದುರಿಸುತ್ತಿವೆ.

ಕ್ರೌಡ್‌ ಸ್ಟ್ರೈಕ್ ವಿಂಡೋಸ್ ಪಿಸಿಗಳಿಗೆ ಸುಧಾರಿತ ಸೈಬರ್‌ ಸೆಕ್ಯುರಿಟಿ ಪರಿಹಾರಗಳನ್ನು ಒದಗಿಸುತ್ತದೆ. BSOD ದೋಷ ಅಥವಾ ಪ್ಲಾಟ್‌ಫಾರ್ಮ್‌ ನಲ್ಲಿನ ನೀಲಿ ಪರದೆಯು ಸಾಮಾಜಿಕ ಮಾಧ್ಯಮದಲ್ಲಿ ಆಗಾಗ್ಗೆ ಟ್ರೆಂಡ್ ಆಗುತ್ತಿದೆ.

Advertisement

ಈತನ್ಮಧ್ಯೆ, ಮೈಕ್ರೋಸಾಫ್ಟ್ 365 ಸ್ಟೇಟಸ್ ಎಕ್ಸ್‌ ನಲ್ಲಿನ ಪೋಸ್ಟ್‌ ನಲ್ಲಿ ಕಂಪನಿಯು ಟ್ರಾಫಿಕ್ ಅನ್ನು ಆರೋಗ್ಯಕರ ವ್ಯವಸ್ಥೆಗಳಿಗೆ ಮರುನಿರ್ದೇಶಿಸುವತ್ತ ಗಮನಹರಿಸಿದೆ ಎಂದು ಬರೆದಿದೆ. “ವಿವಿಧ Microsoft 365 ಅಪ್ಲಿಕೇಶನ್‌ಗಳು ಮತ್ತು ಸೇವೆಗಳನ್ನು ಪ್ರವೇಶಿಸುವ ಬಳಕೆದಾರರ ಮೇಲೆ ಪರಿಣಾಮ ಬೀರುವ ಸಮಸ್ಯೆಯನ್ನು ನಾವು ತನಿಖೆ ಮಾಡುತ್ತಿದ್ದೇವೆ” ಎಂದು ಅದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next