ರಚಿಸಿ ಮಹಾ ಕಲಾವಿದರಿಂದಲೇ ಬೆನ್ತಟ್ಟಿಸಿಕೊಂಡ ಗಟ್ಟಿಗ ಈತ. ಈತನ ಮೋಸೆಸ್ ಮತ್ತು ಡೇವಿಡ್ ಕಲಾಕೃತಿಗಳನ್ನು ನೋಡಲು ಇಂದಿಗೂ ಪ್ರತಿ ವರ್ಷ ಸಾಲುಗಟ್ಟಿ ನಿಲ್ಲುವವರು ಲಕ್ಷಾಂತರ ಮಂದಿ. ರೋಮ್ ಮತ್ತು ಫ್ಲಾರೆನ್ಸ್ ನಗರಗಳಲ್ಲಿ ನೂರಾರು ಚಾಪೆಲ್, ಪ್ರಾರ್ಥನಾ ಮಂದಿರ, ಸ್ಮಾರಕಗಳನ್ನು ಕಟ್ಟಿದ, ಕಟ್ಟುವ ಉಸ್ತುವಾರಿ ನಿಭಾಯಿಸಿದ ಹಿರಿಮೆ ಮೈಕಲೇಂಜಲೋನದು.
Advertisement
ಆತ 88 ವರ್ಷ ಬದುಕಿದ. ವಾಸ್ತುವಿದ್ಯೆ (ಸಿವಿಲ್ ಎಂಜಿನಿಯರಿಂಗ್), ಮೂರ್ತಿಶಿಲ್ಪ, ಚಿತ್ರಕಲೆ ಮತ್ತು ಕಾವ್ಯ – ಈ ನಾಲ್ಕರಲ್ಲೂ ಸರಿಸಮನಾದ ಸಾಧನೆ, ಪ್ರೌಢಿಮೆ ಮೆರೆದು ಹೆಸರುಮಾಡಿದ್ದ. ಇಡೀ ರೋಮ್ ಸಾಮ್ರಾಜ್ಯದಲ್ಲೇ ಮನೆಮಾತಾಗಿದ್ದ. ಮೈಕಲೇಂಜ ಲೋಗೆ ಒಂದಲ್ಲ, ನಾಲ್ಕು ಆತ್ಮಗಳಿವೆ ಎಂದು ಜನಸಾಮಾನ್ಯರು ಮಾತಾಡಿಕೊಳ್ಳುತ್ತಿದ್ದರು. ಜೀವಿತದ ಕೊನೆ ಸಮೀಪಿಸುವಷ್ಟರಲ್ಲಿ ಆತ ಎಷ್ಟು ಪ್ರಸಿದ್ಧನಾಗಿದ್ದನೆಂದರೆ, ಪ್ರತಿ ದಿನ ಅವನನ್ನು ಭೇಟಿಯಾಗಲು ವಿದ್ಯಾರ್ಥಿಗಳಿಂದ ಹಿಡಿದು ರಾಜಮಹಾರಾಜರವರೆಗೆ ಅನೇಕರು ಸಾಲುಗಟ್ಟಿ ನಿಲ್ಲುತ್ತಿದ್ದರು. ಹಾಗೆ ಅವನ ಯೋಗಕ್ಷೇಮ ವಿಚಾರಿಸಲು ಬಂದಾತನೊಬ್ಬ ಹೇಳಿದನಂತೆ, ಅಜ್ಜಾ, ನೀನಿಲ್ಲದ ರೋಮ್ ನಗರವನ್ನು ಕಲ್ಪಿಸಿಕೊಳ್ಳುವುದಾದರೂ ಹೇಗೆ? ಮೈಕಲೇಂಜಲೋ ಮಲಗಿದ್ದಲ್ಲೇ ತನ್ನ ಮುಖವನ್ನು ತುಸು ಸರಿಸಿ ಕಿಟಕಿಯ ಮೂಲಕ ಹೊರಗೆ ದೃಷ್ಟಿಹಾಯಿಸಿದನಂತೆ. ಅಲ್ಲಿ ಆತ ಕೆತ್ತಿ ನಿಲ್ಲಿಸಿದ ಪ್ರಾರ್ಥನಾ ಮಂದಿರದ ದೊಡ್ಡ ಬುರುಜು ಕಾಣುತ್ತಿತ್ತು. ಅದನ್ನು ನೋಡಿ ನಕ್ಕು ಆತ ಹೇಳಿದ, ರೋಮ್ ನಗರದಲ್ಲಿ ನಾನು ಇಲ್ಲದೇ ಹೋದಾಗ ತಾನೆ? ಅಂಥ ದಿನ ಬಂದಾಗ ಯೋಚನೆ ಮಾಡಿದರಾಯಿತು ಬಿಡು!