Advertisement

ಗೋವಾದಲ್ಲಿ ಮತಾಂತರ : ಸಿಎಂ ಸಾವಂತ್ ಗೆ ಸವಾಲೆಸೆದ ಮೈಕಲ್ ಲೋಬೊ

04:26 PM Apr 18, 2022 | Team Udayavani |

ಪಣಜಿ: ಮತಾಂತರದ ವಿಚಾರದಲ್ಲಿ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ನಾಯಕ ಮೈಕಲ್ ಲೋಬೊ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Advertisement

ಪಣಜಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಪ್ರತಿಪಕ್ಷದ ನಾಯಕ ಮೈಕಲ್ ಲೋಬೊ, ರಾಜ್ಯದ ಯಾವ ಚರ್ಚ್ ನಲ್ಲಿ ಮತಾಂತರ ನಡೆಯುತ್ತಿದೆ ಎಂಬುದನ್ನು ಮುಖ್ಯಮಂತ್ರಿಗಳು ತೋರಿಸಬೇಕು, ನಾನು ಅವರೊಂದಿಗೆ ಹೋಗಲು ಸಿದ್ಧ ಎಂದು ಸವಾಲೆಸೆದಿದ್ದಾರೆ.

ಕೆಲವು ಹೊರಗಿನ ಜನರು ಗೋವಾಕ್ಕೆ ಬಂದು ಗೋವಾದ ಶಾಂತಿ ಕದಡಲು ಪ್ರಯತ್ನಿಸುತ್ತಿದ್ದಾರೆ, ಗೋವಾದ ಜನತೆ ಎಚ್ಚರದಿಂದಿರಬೇಕು. ಈ ಕುರಿತಂತೆ ಸರ್ಕಾರವು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಎಲ್ಲರೂ ಭಾರತೀಯ ಸಂವಿಧಾನದ ನಿಯಮಗಳನ್ನು ಪಾಲಿಸಬೇಕು ಎಂದು ಮೈಕಲ್ ಲೋಬೊ ಕರೆ ನೀಡಿದ್ದಾರೆ.

ರಾಜ್ಯದಲ್ಲಿ ಮತಾಂತರ ನಡೆಯುತ್ತಿದೆ,ರಾಜ್ಯದ ಹಲವು ಭಾಗಗಳಲ್ಲಿ ಬಡತನವನ್ನೇ ಲಾಭವನ್ನಾಗಿ ಮಾಡಿಕೊಳ್ಳಲು ಯತ್ನಿಸಲಾಗುತ್ತಿದೆ. ನಮ್ಮ ಸರಕಾರ ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ಶುಕ್ರವಾರ ಸಿಎಂ ಸಾವಂತ್ ಅವರು  ಸಮಾರಂಭವೊಂದರಲ್ಲಿ ನೀಡಿದ ಹೇಳಿಕೆಯನ್ನು ಮೈಕಲ್ ಲೋಬೊ ಖಂಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next