Advertisement
ಟ್ಯಾಲಿ ಸಿಇಒ ಮನೀಷ್ ಚೌದರಿಯವರು, ಮೈಸನ್ನು ಮಾಸ್ಟರ್ ಟ್ಯಾಲಿ ಎಸೆಸ್‌ಮೆಂಟ್ ಪಾರ್ಟ್‌ನರ್ ಎಂದು ಪರಿಗಣಿಸಿ ಒಪ್ಪಂದ ಪತ್ರವನ್ನು ಅಧ್ಯಕ್ಷತೆ ವಹಿಸಿದ ಡಾ| ಎಚ್. ಶಾಂತಾರಾಮ್‌ರಿಗೆ ಹಸ್ತಾಂತರಿಸಿದರು. ಮೈಸ್ ಹಾಗೂ ಟ್ಯಾಲಿಯ ಸಹಭಾಗಿತ್ವದಲ್ಲಿ ರಾಜ್ಯದಲ್ಲಿ ಇವೆರಡೂ ಎಲ್ಲರ ಮನೆಮಾತಾಗಲಿ ಎಂದು ಹಾರೈಸಿದರು. ಮೈಸ್ ಪ್ರಾಂಶುಪಾಲೆ ಸುಪ್ರೀತಾ ಎಸ್. ಅಮೀನ್ ಸ್ವಾಗತಿಸಿದರು. ನೂತನ ಪುಸ್ತಕ ಟ್ಯಾಲಿ-ಏಸ್ ಅನಾವರಣಗೊಳಿಸಲಾಯಿತು. ಡಾ| ಶಾಂತಾರಾಮ್ ಅವರು ವಿದ್ಯಾರ್ಥಿಗಳಲ್ಲಿ ಕಲಿಕೆಯು ಕೇವಲ ಪ್ರಮಾಣ ಪತ್ರಕ್ಕೆ ಮೀಸಲಾಗಿರದೆ ಜಾnನ ಸಂಪಾದನೆ ಅವರ ಗುರಿಯಾಗಿರಬೇಕು. ಇಂತಹ ವಿದ್ಯಾರ್ಥಿಗಳು ದೇಶದ ಉಜ್ವಲ ಭವಿಷ್ಯಕ್ಕೆ ನಾಂದಿಯಾಗುತ್ತಾರೆ ಎಂದರು.ರವಿ ಯು. ಕಾರ್ಯಕ್ರಮ ನಿರ್ವಹಿಸಿದರು. ಮೈಸ್ ಕಲಿಕಾ ಕೇಂದ್ರದ ಪ್ರತಿನಿಧಿಗಳು, ಉಪ ಪ್ರಾಂಶುಪಾಲ ಶ್ರೀಕಾಂತ್ ಎಮ್., ಟ್ಯಾಲಿ ಎಜುಕೇಶನ್ ಪ್ರಾದೇಶಿಕ ಅಧಿಕಾರಿ ಚಿಂತಾಮಣಿ ಪಾಟೀಲ್, ತರಬೇತುದಾರ ಪ್ರವೀಣ್‌ಪಿ ಜಿ. ಉಪಸ್ಥಿತರಿದ್ದರು. ಗಾಯತ್ರಿ ಉಪಾಧ್ಯಾಯ ವಂದಿಸಿದರು.