ಮಣಿಪಾಲ : ಎಂಐಸಿ(ಮಣಿಪಾಲ್ ಇನ್ಸ್ಟ ಟ್ಯೂಟ್ ಆಫ್ ಕಮ್ಯೂನಿಕೇಶನ್) ಹಾಗೂ ಗೂಗಲ್ ನ್ಯೂಸ್ ಇನಿಶಿಯೇಟಿವ್ ಜಂಟಿ ಆಶ್ರಯದಲ್ಲಿ ವ್ಯಾಕ್ಸ್ ಚೆಕ್ ಎನ್ನುವ ಮಾಹಿತಿ ಕಾರ್ಯಗಾರವನ್ನು ನಾಳೆ(ಮೇ. 15) ಬೆಳಗ್ಗೆ 10 ಗಂಟೆಯಿಂದ ಮಧ‍್ಯಾಹ್ನ 1 ಗಂಟೆಯ ತನಕ ವರ್ಚುವಲ್ ಸಭೆಯ ಮೂಲಕ ಆಯೋಜಿಸಿದೆ.
ಇದನ್ನೂ ಓದಿ : ಕೋವಿಡ್ ಸಂಕಷ್ಟಕ್ಕೆ ಮಿಡಿದ ತಲೈವಾ : ಒಂದು ಕೋಟಿ ರೂ. ನೆರವು ನೀಡಿದ ರಜನಿ
ಕೋವಿಡ್ ಸೋಂಕಿನ ಎರಡನೇ ಅಲೆ ದೇಶದಲ್ಲಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಲಸಿಕೆಯ ಬಗ್ಗೆ ಸಾರ್ವಜನಿಕರಲ್ಲಿ ಇರುವ ತಪ್ಪು ಗೃಹಿಕೆಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮ ಇದಾಗಿದ್ದು, ಲಸಿಕೆ ಪ್ರಕ್ರಿಯೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುವ ಉದ್ದೇಶವನ್ನು ಹೊಂದಿದೆ ಎಂದು ಸಂಸ್ಥೆ ತಿಳಿಸಿದೆ.
ಕೋವಿಡ್ ಲಸಿಕೆಯ ಕುರಿತು ತಪ್ಪು ತಿಳುವಳಿಕೆ ಜನರಲ್ಲಿ ಇದೆ, ಒಂದು ಕಡೆ ಕೋವಿಡ್ ಭಯ, ಇನ್ನೊಂದು ಕಡೆ ಕೋವಿಡ್ ಲಸಿಕೆಯ ಭಯ. ಲಸಿಕೆ ಸುರಕ್ಷತೆಯ ಬಗ್ಗೆ ಇನ್ನೂ ಜನರಲ್ಲಿ ತಪ್ಪು ಗೃಹಿಕೆಗಳಿದ, ಲಸಿಕೆ ಹಾಕಿಸಿಕೊಂಡರೆ ಅಡ್ಡ ಪರಿಣಾಮಗಳು ಉಂಟಾಗುತ್ತದೆ, ವ್ಯಾಕ್ಸಿನ್ ಹಾಕಿಸಿಕೊಂಡರೂ ಸೋಂಕು ಹರಡುತ್ತದಂತೆ.. ಹೀಗೆ ಲಸಿಕೆಗಳ ಬಗ್ಗೆ ಇರುವ ಭಯ, ಅನುಮಾನಗಳಿಗೆ ಈ ಸರಣಿ ಕಾರ್ಯಗಾರ ಸಂಪೂರ್ಣ ಮಾಹಿತಿ ನೀಡಲಿದೆ ಎಂದು ಸಂಸ್ಥೆ ಹೇಳಿದೆ.
Related Articles
ಇನ್ನು, ದೇಶದಲ್ಲಿ ಒಂದೇ ದಿನ 3,43,144 ಹೊಸ ಪ್ರಕರಣಗಳು ವರದಿಯಾಗಿವೆ. ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 37,04,893ಕ್ಕೆ ಇಳಿಕೆಯಾಗಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ಸಕ್ರಿಯ ಪ್ರಕರಣಗಳಲ್ಲಿ 5,632 ಪ್ರಕರಣಗಳಷ್ಟು ಕುಸಿತವಾಗಿದೆ. ಅಂತೆಯೇ ಮರಣದ ಪ್ರಮಾಣ ಶೇ 1.09ರಷ್ಟಿದೆ. 24ಗಂಟೆಗಳ ಅವಧಿಯಲ್ಲಿ ಒಟ್ಟು 4 ಸಾವಿರ ಮಂದಿ ಸಾವಿಗೀಡಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಇದನ್ನೂ ಓದಿ : ಕೋವಿಡ್ ದುರಂತ: ಪೋಷಕರನ್ನು ಕಳೆದುಕೊಂಡ ಕುಟುಂಬ, ಮಕ್ಕಳಿಗೆ ಆರ್ಥಿಕ ನೆರವು; ಕೇಜ್ರಿವಾಲ್