Advertisement
ಬಲಾಡ್ಯ ಆಟಗಾರನೆದುರು ಅಂಕಣಕ್ಕಿಳಿದಿದ್ದ ವಿಶ್ವ ರ್‍ಯಾಂಕಿಂಗ್‌ನಲ್ಲಿ 175ನೇ ಸ್ಥಾನಿ ಕೊಕಿನಕಿಸ್ ದ್ವಿತೀಯ ಸುತ್ತಿನಲ್ಲಿ ಹೊರಬೀಳುವ ಸಂಕಟದಲ್ಲಿದ್ದರು. ಆದರೆ ಸಂದರ್ಭ ಅವರ ಪರವಾಗಿ ನಿಂತಿತು. ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ಅವರು, 20 ಬಾರಿಯ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ವಿಜೇತ ಟೆನಿಸ್ ದಿಗ್ಗಜ ಫೆಡರರ್ ಅವರನ್ನು 3-6, 6-3, 7-6 (7/4) ಅಂತರದಿಂದ ಸೋಲಿಸಿದರು.
ಆಸ್ಟ್ರೇಲಿಯನ್ ಓಪನ್‌ನಲ್ಲಿ ತನ್ನ 20ನೇ ಗ್ರ್ಯಾನ್ ಸ್ಲಾಮ್ ಕಿರೀಟ ಮುಡಿಗೇರಿಸಿಕೊಂಡಿದ್ದ ಫೆಡರರ್ ಮರಳಿ ನಂ. 1 ಸ್ಥಾನಕ್ಕೇರಿದ್ದರು. ಕಳೆದ ಫೆಬ್ರವರಿಯಲ್ಲಿ ರೋಟರ್ಡಮ್‌ನಲ್ಲಿ ಅಸೋಸಿಯೇಶನ್ ಆಫ್ ಟೆನಿಸ್ ಪ್ರೊಫೆಶನಲ್ಸ್ ಪ್ರಶಸ್ತಿ ಗೆದ್ದ ಬಳಿಕ ಅವರಿಗೆ ನಂಬರ್ ವನ್ ರ್‍ಯಾಂಕ್ ಲಭಿಸಿತ್ತು. ನಂ. 1 ಸ್ಥಾನವನ್ನು ಉಳಿಸಿಕೊಳ್ಳಲು ಫೆಡರರ್ ಈ ಕೂಟದ ಕ್ವಾರ್ಟರ್ ಫೈನಲ್ ಹಂತದವರೆಗೂ ತಲುಪಬೇಕಿತ್ತು. ಆದರೆ ಇದೀಗ ಸೋತಿರುವ ಕಾರಣ ಹೊಸ ರ್‍ಯಾಂಕಿಂಗ್ ಪಟ್ಟಿ ಪ್ರಕಟವಾದರೆ ಅದರಲ್ಲಿ ಸ್ಪೇನ್ ಬಲಾಡ್ಯ ರಫೆಲ್ ನಡಾಲ್ ನಂ. 1 ರ್‍ಯಾಂಕ್‌ಗೆàರುವ ಸಾಧ್ಯತೆಗಳಿವೆ. “ಈ ಪಂದ್ಯದ ಬಳಿಕ ನಾನು ಸೋಲಿಗೆ ಅರ್ಹನಾಗಿದ್ದೇನೆ. ಹಾಗೆಂದೇ ನನಗನ್ನಿಸುತ್ತಿದೆ. ಒಟ್ಟಾರೆ ಇದು ತುಂಬಾ ಕೆಟ್ಟ ಅನುಭವವಾಗಿದೆ. ಸಂತೋಷ ಪಡುವಷ್ಟು ಯಾವುದೇ ಸಾಧನೆ ಇಂದು ನಾನು ಮಾಡಿಲ್ಲ. ಕೆಲವು ಬಾರಿ ಇಂಥ ಪಂದ್ಯಗಳು ಎದುರಾಗುತ್ತವೆ’ ಎಂದು ಹತಾಶೆಯಿಂದ ನುಡಿದ ಫೆಡರರ್, ಕಳೆದ ಬಾರಿ ಇಂಡಿಯಾನ ವೇಲ್ಸ್ ಮತ್ತು ಮಿಯಾಮಿ ಓಪನ್ ಗೆದ್ದ ಬಳಿಕ ಆವೆಮಣ್ಣಿನಾಂಗಣದಿಂದ ದೂರ ಸರಿದಂತೆ ಈ ಋತುವಿನಿಂದ ದೂರ ಇರುವುದಾಗಿ ಘೋಷಿಸಿದರು.