ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ತನ್ನದೆಯಾದ ಛಾಪು ಮೂಡಿಸಿರುವ ಶವೋಮಿ ಇದೀಗ ಮತ್ತೊಂದು ಹೊಸ ಪ್ರಾಡಕ್ಟ್ ಪರಿಚಯಿಸಿದೆ. ಶವೋಮಿ ಇದೀಗ ಲೆಟೆಸ್ಟ್ ಫೀಚರ್ ಹೊಂದಿರುವ ಎಂಐ ಸ್ಮಾರ್ಟ್ ಬ್ಯಾಂಡ್ 6 ( ಸ್ಮಾರ್ಟ್ ವಾಚ್ ) ಸಿದ್ಧಪಡಿಸಿದೆ. ಮಾರ್ಚ್ 29 ರಂದು ಚೀನಾದಲ್ಲಿ ಸ್ಮಾರ್ಟ್ ಬ್ಯಾಂಡ್ 6 ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಏಪ್ರಿಲ್ ಮೊದಲ ವಾರದ ಅವಧಿಯಲ್ಲಿ ಭಾರತದ ಮಾರುಕಟ್ಟೆಗೂ ಸ್ಮಾರ್ಟ್ ಬ್ಯಾಂಡ್ 6 ಆಗಮಿಸುವ ಸಾಧ್ಯತೆ ಇದೆ.
ಎಂಐ ಸ್ಮಾರ್ಟ್ ಬ್ಯಾಂಡ್ 6 ವಿಶೇಷತೆ ಏನು ?
ಈಗಾಗಲೇ ಮಾರುಕಟ್ಟೆಯಲ್ಲಿ ವಿವಿಧ ಬ್ರ್ಯಾಂಡ್ ಗಳ ಸ್ಟಾರ್ಟ್ ವಾಚ್ ಗಳು ಲಭ್ಯ ಇವೆ. ಆದರೆ, ಎಂಐ ಪರಿಚಯಿಸಿರುವ ಸ್ಮಾರ್ಟ್ ಬ್ಯಾಂಡ್ ಇವೆಲ್ಲವುಗಳಿಗಿಂತ ವಿಭಿನ್ನವಾಗಿದೆ ಎಂದು ಶವೋಮಿ ಹೇಳಿಕೊಂಡಿದೆ.
ಈ ಬ್ಯಾಂಡ್ ಫಿಟ್‌ನೆಸ್ ಟ್ರ್ಯಾಕರ್ ಹೊಸ ವೈಶಿಷ್ಟ್ಯಗಳು ಮತ್ತು ಅಪ್ಡೇಟ್ ಗಳನ್ನು ಒಳಗೊಂಡಿದೆ. ಎಂಐ ಬ್ಯಾಂಡ್ ಫಿಟ್ ಆ್ಯಪ್ ಹೊಂದಿದೆ. ಇದು ವಾಚ್ ಧರಿಸಿದ ವ್ಯಕ್ತಿಯ ನಿದ್ದೆ ಸಮಯದಲ್ಲಿಯ ಉಸಿರಾಟದ ಏರಿಳಿತ ಹಾಗೂ ಅದರ ಸಂಖ್ಯೆಯನ್ನು ತಿಳಿಸಲಿದೆ. ಅಂದರೆ ನಿದ್ರಾವಸ್ಥೆಯಲ್ಲಿ ನೀವು ನಿಮಿಷಕ್ಕೆ ಎಷ್ಟು ಬಾರಿ ಉಸಿರಾಡುತ್ತೀರಿ ಎನ್ನುವ ಮಾಹಿತಿ ಸಂಗ್ರಹಿಸಲಿದೆ. ಅದೇ ರೀತಿ ನಿಮ್ಮ ಹೃದಯ ಬಡಿತದ ದರವನ್ನು ತಿಳಿಸಲಿದೆ. ಈ ವಾಚ್‍ನಲ್ಲಿ ಬ್ಯಾಂಡ್ 5 ರಂತೆ ಮ್ಯಾಗ್ನೆಟಿಕ್ ಚಾರ್ಜಿಂಗ್ ಕೇಬಲ್ ಇರಲಿದೆ.
ಇದು ಉತ್ತಮ ಟ್ರ್ಯಾಕಿಂಗ್ ಸೌಲಭ್ಯವನ್ನು ಹೊಂದಿದೆ. ಮತ್ತೊಂದು ವಿಶೇಷವೆಂದರೆ Mi Band 6 ರಲ್ಲಿ SOP 2 ಮಾನಿಟರಿಂಗ್ ಒಳಗೊಂಡಿದೆ.
ಬೆಲೆ ಎಷ್ಟು ?
ಇನ್ನು ಚೀನಾದಲ್ಲಿ ಎಂಐ ಬ್ಯಾಂಡ್ 6 ಬೆಲೆ 2500 ರೂ. ಇದೆ. ಭಾರತದಲ್ಲಿ ಇದರ ಬೆಲೆ ಎಷ್ಟಿರಬಹುದು ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.