Advertisement

ಎಂಐ ಇಂಡಿಯಾದಿಂದ ವಿಶ್ವದ ಅತ್ಯಂತ ದೊಡ್ಡ ಎಣ್ಣೆದೀಪ: ಗಿನ್ನೆಸ್ ವಿಶ್ವ ದಾಖಲೆ

04:03 PM Oct 24, 2020 | keerthan |

ಭಾರತದ ನಂಬರ್ ಒನ್ ಸ್ಮಾರ್ಟ್‌ಫೋನ್ ಮತ್ತು ಸ್ಮಾರ್ಟ್ ಟಿ.ವಿ. ಬ್ರಾಂಡ್ ಎಂಐ, ವಿಶ್ವದ ‘ಅತ್ಯಂತ ದೊಡ್ಡ ಎಣ್ಣೆ ದೀಪ- ‘‘ದಿ ರೇ ಆಫ್ ಹೋಪ್’ ಅನ್ನು ಅಳವಡಿಸುವ ಮೂಲಕ ಹೊಸ ಗಿನ್ನಿಸ್ ವಿಶ್ವ ದಾಖಲೆ ಸೃಷ್ಟಿಸಿದೆ.

Advertisement

ಈ ರೇ ಆಫ್ ಹೋಪ್ ದುರ್ಗಾಪೂಜೆ ಸಂಭ್ರಮಗಳ ಭಾಗವಾಗಿದೆ. ಇದರೊಂದಿಗೆ ಎಂಐ ಇಂಡಿಯಾ 2 ಕೋಟಿ ರೂ.ಗಳ ಮೌಲ್ಯದ ಶಿಷ್ಯವೇತನಗಳನ್ನು ಸಂಗ್ರಹಿಸುತ್ತಿದ್ದು ಇದು ಸಾವಿರಾರು ವಿದ್ಯಾರ್ಥಿಗಳಿಗೆ ಭಾರತದ ಅತ್ಯಂತ ದೊಡ್ಡ ವಿದ್ಯಾರ್ಥಿ ಸಬಲೀಕರಣ ಕಾರ್ಯಕ್ರಮವಾಗಿದೆ. ಭಾರತ ಕ್ರಿಕೆಟ್‌ನ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಈ ಅಭಿಯಾನದ ಸಹಯೋಗ ವಹಿಸಿಕೊಂಡಿದ್ದಾರೆ.

ಈ ಭಾರಿ ಎಣ್ಣೆ ದೀಪವನ್ನು ಕೊಲ್ಕೊತಾದ ಬ್ಯಾಲಿಗಂಜ್ ಕಲ್ಚರಲ್ ಅಸೋಸಿಯೇಷನ್ ದುರ್ಗಾ ಪೂಜಾ ಕಾರ್ಯಕ್ರಮದಲ್ಲಿ ನಿರ್ಮಿಸಲಾಗಿದೆ. ಜನಪ್ರಿಯ ಕಲಾವಿದರಾದ ಅಫ್ಸರ್ ಅಲಿ ಮತ್ತು ಪ್ರಿಯಾಂಕಾ ಸರ್ಕಾರ್ ಉದ್ಘಾಟಿಸಿದರು. ಈ ದಾಖಲೆಯು ಎರಡು ಮಾನದಂಡಗಳು ಗಾತ್ರ ಮತ್ತು ಪ್ರಮಾಣ ಆಧರಿಸಿದೆ. ಈ ದೀಪವು ಅ. 26ರವರೆಗೆ ಈ ಸ್ಥಳಕ್ಕೆ ಭೇಟಿ ನೀಡುವವರಿಗೆ ಪ್ರದರ್ಶನದಲ್ಲಿರುತ್ತದೆ.

ಹೆಚ್ಚುವರಿಯಾಗಿ ಎಂಐ ಇಂಡಿಯಾ ದುರ್ಬಲ ವರ್ಗದ ವಿದ್ಯಾರ್ಥಿ ಸಮುದಾಯಕ್ಕೆ ಉನ್ನತ ಶಿಕ್ಷಣ ಪಡೆಯಲು ನೆರವಾಗುತ್ತಿದೆ. ದೇಶದಲ್ಲಿ ಸಾಕ್ಷರತೆ ಹೆಚ್ಚಿಸಲು ಮತ್ತು ಆನ್‌ಲೈನ್ ಶಿಕ್ಷಣ ವಿಸ್ತರಿಸಲು Buddy4study ಸಹಯೋಗದೊಂದಿಗೆ ಎಂಐ ಇಂಡಿಯಾ ಸೀನಿಯರ್ ಸೆಕೆಂಡರಿ ಮತ್ತು ಪದವಿ ಕೋರ್ಸ್‌ಗಳಲ್ಲಿ ಕಲಿಯುವ ಭಾರತದಾದ್ಯಂತ ಸಾವಿರಾರು ವಿದ್ಯಾರ್ಥಿಗಳಿಗೆ ನೆರವಾಗಲಿದೆ.

Advertisement

ಈ ಪ್ರಕಟಣೆ ಕುರಿತು ಎಂಐ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮನು ಕುಮಾರ್ ಜೈನ್ ಮಾತನಾಡಿ, ಇದು ಕತ್ತಲಿನ ವಿರುದ್ಧ ಬೆಳಕಿನ ವಿಜಯವನ್ನು ಸಂಭ್ರಮಿಸಲು ಇಡೀ ದೇಶವನ್ನು ಒಗ್ಗೂಡಿಸುವ ಸಮಯವಾಗಿದೆ. ನಾವು ಎಂಐ ಇಂಡಿಯಾದಲ್ಲಿ ಈ ಸಂದರ್ಭವನ್ನು ಕೊಂಚ ವಿಶಿಷ್ಟತೆಯೊಂದಿಗೆ ಮೂಲಕ ಸಂಭ್ರಮಿಸಲು ಬಯಸಿದ್ದೇವೆ. ದೇಶದ ಎಲ್ಲರಿಗೂ ಸುರಕ್ಷಿತ, ಆರೋಗ್ಯಕರ ಮತ್ತು ಉಜ್ವಲ ಭವಿಷ್ಯ ಸೃಷ್ಟಿಸಲು ಸಂಕೇತವಾಗಿದೆ. ಇದು ಎಲ್ಲರ ಜೀವನಗಳಲ್ಲಿ ಈ ಹಬ್ಬದ ಋತುವಿಗೆ ದೊಡ್ಡ ರೀತಿಯಲ್ಲಿ ಬೆಳಕು ಮತ್ತು ಸಂತೋಷವನ್ನು ಮತ್ತೆ ತರುತ್ತದೆ ಎಂಬ ಭರವಸೆ ನಮ್ಮದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next