Advertisement

ಗೋವಾ ಚುನಾವಣೆ: ಟಿಎಂಸಿಯಿಂದ ಮತ್ತೊಂದು ಯೋಜನೆ ಘೋಷಣೆ

05:25 PM Jan 12, 2022 | Team Udayavani |

ಪಣಜಿ: ಪ್ರಸಕ್ತ ಗೋವಾ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ  ಕಾಂಗ್ರೆಸ್ ಮತದಾರರನ್ನು ಸೆಳೆಯಲು ಯೋಜನೆಗಳನ್ನು ರೂಪಿಸಿದೆ. ಇದೀಗ ಟಿಎಂಸಿ ಗೋವಾ “ನನ್ನ ಮನೆ, ಮಾಲಿಕತ್ವ” ಗೃಹನಿರ್ಮಾಣ ವಸತಿ ಹಕ್ಕು ಯೋಜನೆಯನ್ನು ಘೋಷಿಸಿದೆ. ಗೋವಾದಲ್ಲಿ ಟಿಎಂಸಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ 250 ದಿನಗಳಲ್ಲಿ ಈ ಯೋಜನೆ ಜಾರಿಗೊಳಿಸಲಾಗುಗುವುದು ಎಂದು ಘೋಷಿಸಿದೆ.

Advertisement

1976 ರಿಂದ ಗೋವಾದಲ್ಲಿ ವಾಸಿಸುವ ಕುಟುಂಬಗಳಿಗೆ ಈ ಯೋಜನೆ ಜಾರಿಗೊಳಿಸುವುದಾಗಿ ಟಿಎಂಸಿ ಹೇಳಿದೆ. ಸ್ವಾಧೀನದಲ್ಲಿರುವ ಜಮೀನುಗಳ ಹಕ್ಕು ಮತ್ತು ಮಾಲೀಕತ್ವ, ಹಾಗೂ ವಸತಿ ರಹಿತ ಕುಟುಂಬಗಳಿಗೆ 50,000 ರೂ ಅನುದಾನಿತ ಮನೆ ನೀಡಲಾಗುವುದು. ತೃಣಮೂಲ ಕಾಂಗ್ರೇಸ್ ಮತ್ತು ಗೋವಾ ಮೈತ್ರಿಕೂಟವು ದಮನ್ ಮತ್ತು ದಿಯು ಕೃಷಿ ಗುತ್ತಿಗೆ ಒಪ್ಪಂದ 1964 ಮತ್ತು ಗೋವಾ ದಮನ್ ಮತ್ತು ದಿಯು ಮುಂಡಕಾರ್‍ ನಂತಹ ಜನಪರ ಕಾನೂನುಗಳನ್ನು ಜಾರಿಗೆ ತೆರಲಿದೆ ಎಂದು ಟಿಎಂಸಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next