Advertisement

ಸಿನಿಮಾ, ರಾಜಕೀಯದಲ್ಲಿ ಜನಪ್ರಿಯರಾಗಿದ್ದ ಎಂಜಿಆರ್‌

12:12 PM Jul 09, 2018 | |

ಬೆಂಗಳೂರು: ಸಿನಿಮಾ ಮಾತ್ರವಲ್ಲದೆ ರಾಜಕೀಯ ಕ್ಷೇತ್ರದಲ್ಲೂ ಜನಪ್ರಿಯರಾಗಿದ್ದ ಎಂಜಿಆರ್‌ ಅವರು ಭಾರತ ರತ್ನ ಪ್ರಶಸ್ತಿಗೆ ಭಾಜನರಾದ ದಕ್ಷಿಣ ಭಾರತದ ಮೇರು ಪ್ರತಿಭೆ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಬಣ್ಣಿಸಿದರು.

Advertisement

ಎಂಜಿಆರ್‌ ಜನ್ಮದಿನದ ಪ್ರಯುಕ್ತ ನಗರದ ಪುರಭವನದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಅಣ್ಣಾ ಡಿಎಂಕೆ ಕರ್ನಾಟಕ ಕಾರ್ಯದರ್ಶಿ ಕೆ.ಆರ್‌.ಕೃಷ್ಣರಾಜು ಅವರ “ಭಾರತರತ್ನ ಡಾ.ಎಂ.ಜಿ.ಆರ್‌’ ಹಾಗೂ “ಅಮ್ಮನ ಸಾಧನೆಯ ಕ್ರಾಂತಿ’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಅದ್ಭುತ ನಟರಾಗಿದ್ದ ಎಂ.ಜಿ.ಆರ್‌ ಅವರು ರಾಜಕೀಯ ಕ್ಷೇತ್ರದಲ್ಲೂ ಅದ್ವಿತೀಯ ಸಾಧನೆ ಮಾಡಿದ್ದಾರೆ.

ಮುಖ್ಯಮಂತ್ರಿಯಾಗಿ ಜನ ಮೆಚ್ಚುಗೆಯ ಕೆಲಸ ಮಾಡಿ ಇಂದಿಗೂ ಜನ ಮಾನಸದಲ್ಲಿ ನೆಲೆಸಿದ್ದಾರೆ. ಮಾಜಿ ಪ್ರಧಾನಿಗಳಾದ ಇಂದಿರಾಗಾಂಧಿ, ರಾಜೀವ್‌ ಗಾಂಧಿ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ರಾಮಕೃಷ್ಣ ಹೆಗಡೆ ಅವರ ಸರ್ಕಾರದಲ್ಲಿ ನೀರಾವರಿ ಸಚಿವನಾಗಿದ್ದಾಗ ಕಾವೇರಿ ವಿಚಾರ ಕುರಿತಂತೆ ಎರಡು ಬಾರಿ ಎಂ.ಜಿ.ಆರ್‌ ಅವರನ್ನು ನಾನು ಭೇಟಿಯಾಗಿದ್ದೆ ಎಂದು ಹೇಳಿದರು.

ಅಣ್ಣಾಡಿಎಂಕೆ ಪಕ್ಷದ ಕರ್ನಾಟಕ ಘಟಕದ ಕಾರ್ಯದರ್ಶಿ ಕೆ.ಆರ್‌.ಕೃಷ್ಣರಾಜು, ಎಂಜಿಆರ್‌ ಅವರು 1980ರ ದಶಕದಲ್ಲಿ ಮೂರು ಬಾರಿ ಕಲಾಸಿಪಾಳ್ಯಕ್ಕೆ ಭೇಟಿ ನೀಡಿದ್ದರು. ಪುರಭವನ ಮುಂಭಾಗ ಭಾಷಣ ಕೂಡ ಮಾಡಿದ್ದರು. ಅದರ ಸ್ಮರಣಾರ್ಥ ಕಲಾಸಿಪಾಳ್ಯಕ್ಕೆ ಎಂಜಿಆರ್‌ ನಗರ ಎಂದು ಹೆಸರಿಡಬೇಕು ಎಂದು ಮನವಿ ಮಾಡಿದರು. ಹಿರಿಯ ನಟಿ ಸಾಹುಕಾರ್‌ ಜಾನಕಿ, ನಿರ್ಮಾಪಕ ಎಚ್‌.ಡಿ.ಗಂಗರಾಜು, ವಿಧಾನ ಪರಿಷತ್‌ ಸದಸ್ಯ ಟಿ.ಎ.ಶರವಣ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next