Advertisement

ಎಂಜಿಎಂ: ರಸ್ತೆ ದಾಟಲು ಬೇಕಿದೆ ಮೇಲ್ಸೇತುವೆ

12:30 AM Mar 16, 2019 | |

ಉಡುಪಿ: ಕಡಿಯಾಳಿ -ಮಣಿಪಾಲ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಭರದಿಂದ ಸಾಗುತ್ತಿರುವುದನ್ನು ಕಂಡಾಗ ರಸ್ತೆ ದಾಟುವುದು ಮುಂದಿನ ದಿನಗಳಲ್ಲಿ ಕಷ್ಟವಾಗಲಿದೆ. ವಿಶೇಷವಾಗಿ ಜನಸಂದಣಿ ಜಾಸ್ತಿ ಇರುವಲ್ಲಿ  ಈ ಸಮಸ್ಯೆ ಹೆಚ್ಚಿಗೆಯಾಗಲಿದೆ. 

Advertisement

ಎಂಜಿಎಂ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗಂತೂ ರಸ್ತೆ ದಾಟುವುದು ಇನ್ನಷ್ಟು ದುಸ್ತರವಾಗಲಿದೆ. ರಸ್ತೆ ಇಕ್ಕೆಲಗಳಲ್ಲಿಯೂ ವ್ಯಾಪಾರ ಮಳಿಗೆಗಳು ಇರುವ ಕಾರಣ ವಿದ್ಯಾರ್ಥಿಗಳು ಹೊಟೇಲ್‌, ಸಾಮಗ್ರಿ ಖರೀದಿಗೆ ಆಚೀಚೆ ಹೋಗಬೇಕಾಗುತ್ತದೆ. ಕಾಲೇಜಿನಲ್ಲಿ ಕೇವಲ ಶೈಕ್ಷಣಿಕ ಕಾರ್ಯಕ್ರಮಗಳಲ್ಲದೆ ವಿವಿಧ ಸಂಘಟನೆಗಳ ಕಾರ್ಯಕ್ರಮಗಳೂ ಜರುಗುವುದರಿಂದ ಸಾರ್ವಜನಿಕರೂ ಇಲ್ಲಿ ಹೋಗಬೇಕಾಗುತ್ತದೆ. ರಸ್ತೆಯಿಂದ ಆಚೀಚೆ ಹೋಗುವುದೇ ಇನ್ನು ಮುಂದೆ ದುಸ್ತರವಾಗಲಿದೆ. ಈ ನಿಟ್ಟಿನಲ್ಲಿ ಕಾಲೇಜಿಗೆ ಹೋಗಲು, ನಡೆದು ಹೋಗಲು ಮೇಲ್ಸೇತುವೆ (ಫ‌ೂಟ್‌ ಓವರ್‌ ಬ್ರಿಡ್ಜ್) ನಿರ್ಮಿಸುವ ಅಗತ್ಯವಿದೆ. 

“ನಾವು ಈ ಬೇಡಿಕೆಯನ್ನು ಇರಿಸಿದ್ದೆವು. ಆದರೆ ಇದುವರೆಗೆ ಪೂರಕ ನಿರ್ಧಾರ ಪ್ರಕಟವಾಗಿಲ್ಲ. ಆದರೆ ನಮಗೆ ಇನ್ನೂ ಆಶಾಭಾವನೆ ಇದೆ. ಈಗ ರಸ್ತೆ ಅಗಲಗೊಳ್ಳುತ್ತಿರುವ ಕಾರಣ ವಾಹನಗಳ ವೇಗವೂ ಜಾಸ್ತಿಯಾಗಿ ಅವಘಡಗಳು ಹೆಚ್ಚುವ ಸಾಧ್ಯತೆ ಇದೆ. ಮೇಲ್ಸೇತುವೆ ನಿರ್ಮಿಸಿದರೆ ಅವಘಡಗಳು ನಡೆಯುವುದನ್ನು ತಡೆಗಟ್ಟಬಹುದು’ ಎಂದು ಕಾಲೇಜಿನ ಪ್ರಾಂಶುಪಾಲ ಡಾ|ಎಂ.ಜಿ. ವಿಜಯ ಹೇಳುತ್ತಾರೆ. 

“ಈ ವಿಷಯವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಚರ್ಚಿಸಿ ವಿದ್ಯಾರ್ಥಿಗಳ ಕ್ಷೇಮ ದೃಷ್ಟಿಯಿಂದ ಸೂಕ್ತ ಜರಗಿಸುತ್ತೇವೆ’ ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಪ್ರತಿಕ್ರಿಯೆ ನೀಡಿದ್ದಾರೆ. 
 

Advertisement

Udayavani is now on Telegram. Click here to join our channel and stay updated with the latest news.

Next